ಗುರು ಸಿದ್ಧರಾಜಯೋಗೀಂದ್ರ ಸ್ವಾಮೀಜಿ
ಜಿಲ್ಲಾ ಸುದ್ದಿ
ಕೊನೆಗೂ ಮಠಕ್ಕೆ ಮರಳಿದ ಮೂಜಗು
ಹುಬ್ಬಳಿ: ಮೂರು ಸಾವಿರ ಮಠದ ಗೊಂದಲ ತಿಳಿಯಾಗಿದೆ. ಮಠದಿಂದ ಮುನಿಸಿಕೊಂಡು ಹಾನಗಲ್ಲಕ್ಕೆ ತೆರಳಿದ್ದ ಗುರು ಸಿದ್ಧರಾಜಯೋಗೀಂದ್ರ ಸ್ವಾಮೀಜಿ ಭಕ್ತರ ಹಾಗೂ ಹಲವು ಮಠಾಧೀಶರ ಒತ್ತಾಸೆಯ ಮೇರೆಗೆ ಮೂರುಸಾವಿರ ಮಠಕ್ಕೆ ಮರಳಿದ್ದಾರೆ.
ಪೂರ್ವ ನಿಗದಿಯಂತೆ ಗುರುವಾರ ಬೆಳಗ್ಗೆ ಹಾನಗಲ್ಲಕ್ಕೆ ತೆರಳಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ ಜೋಶಿ, ಮೋಹನ ಲಿಂಬಿಕಾಯಿ, ಶಂಕರಣ್ಣ ಮುನವಳ್ಳಿ, ಮಹೇಶ ಟೆಂಗಿನಕಾಯಿ ಹಾಗೂ ಕೆಲ ಮಠಾಧೀಶರು ಅಲ್ಲಿ ಮೂಜಗು ಅವರಿಗೆ ಹುಬ್ಬಳ್ಳಿ ಮಠಕ್ಕೆ ಮರಳುವಂತೆ ಮನವಿ ಮಾಡಿದರು.
ಮೊದಮೊದಲು ತಾವು ಹಾನಗಲ್ಲ ಮಠ ಬಿಟ್ಟು ಬರುವುದಿಲ್ಲ ಎಂದು ಮೂಜಗು ಪಟ್ಟು ಹಿಡಿದರು. ತಾವು ಬರದಿದ್ದರೆ ಹುಬ್ಬಳಿಗೆ ತೆರಳುವುದಿಲ್ಲವೆಂದು ಭಕ್ತರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಮೂಜಗು ಮನಸ್ಸು ಬದಲಾಯಿಸಿ ಹುಬ್ಬಳ್ಳಿಗೆ ಬರಲೊಪ್ಪಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ