ಡಿಜೆ ಹಳ್ಳಿಯಲ್ಲಿ ಅಹವಾಲುಗಳ ಸುನಾಮಿ

ಗುಂಡಿಬಿದ್ದ ರಸ್ತೆಗಳು, ಅಸಮರ್ಪಕ ಚರಂಡಿ ವ್ಯವಸ್ಥೆ, ಅಶುದ್ಧ ಕುಡಿಯುವ ನೀರು. ಇದರ ಒಟ್ಟು ಪರಿಣಾಮವಾಗಿರುವುದು ಮಕ್ಕಳ ಆರೋಗ್ಯದ ಮೇಲೆ. ಇದು ಕಂಡುಬಂದಿದ್ದು ದೇವರಜೀವನಹಳ್ಳಿ ಹಾಗೂ ಎಸ್‍ಕೆ ಗಾರ್ಡ್‍ನ್ ವಾರ್ಡ್‍ನಲ್ಲಿ...
ಡಿಜೆಹಳ್ಳಿಯ ರಸ್ತೆಗಳಲ್ಲಿ ಕಾಮಗಾರಿಗಳಿಗಾಗಿ ಗುಂಡಿ ತೋಡಿರುವುದನ್ನು ಬಿಬಿಎಂಪಿ ಆಡಳಿತಾಧಿಕಾರಿ ವಿಜಯಭಾಸ್ಕರ್ ಹಾಗೂ ಆಯುಕ್ತ ಕುಮಾರ್ ನಾಯಕ್ ಪರಿಶೀಲಿಸಿದರು.
ಡಿಜೆಹಳ್ಳಿಯ ರಸ್ತೆಗಳಲ್ಲಿ ಕಾಮಗಾರಿಗಳಿಗಾಗಿ ಗುಂಡಿ ತೋಡಿರುವುದನ್ನು ಬಿಬಿಎಂಪಿ ಆಡಳಿತಾಧಿಕಾರಿ ವಿಜಯಭಾಸ್ಕರ್ ಹಾಗೂ ಆಯುಕ್ತ ಕುಮಾರ್ ನಾಯಕ್ ಪರಿಶೀಲಿಸಿದರು.

ಬೆಂಗಳೂರು: ಗುಂಡಿಬಿದ್ದ ರಸ್ತೆಗಳು, ಅಸಮರ್ಪಕ ಚರಂಡಿ ವ್ಯವಸ್ಥೆ, ಅಶುದ್ಧ ಕುಡಿಯುವ ನೀರು. ಇದರ ಒಟ್ಟು ಪರಿಣಾಮವಾಗಿರುವುದು ಮಕ್ಕಳ ಆರೋಗ್ಯದ ಮೇಲೆ. ಇದು ಕಂಡುಬಂದಿದ್ದು ದೇವರಜೀವನಹಳ್ಳಿ ಹಾಗೂ ಎಸ್‍ಕೆ ಗಾರ್ಡ್‍ನ್ ವಾರ್ಡ್‍ನಲ್ಲಿ.

ಬುಧವಾರ ಇಲ್ಲಿಗೆ ಭೇಟಿ ನೀಡಿದ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುನಾಮಿಯಂತೆ ಬಂದ ಸಾರ್ವಜನಿಕರ ಅಹವಾಲುಗಳನ್ನು ಕಂಡ ವಿಜಯಭಾಸ್ಕರ್ ಹಾಗೂ ಆಯುಕ್ತ ಜಿ.ಕುಮಾರ್ ನಾಯಕ್ ಅವಾಕ್ಕಾದರು.

ಹಲವು ಬಾರಿ ವಾರ್ಡ್‍ಗೆ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ವಿಧಾನಸೌಧ ಕೇವಲ 5 ಕಿ.ಮೀ. ದೂರದಲ್ಲಿದ್ದರೂ ಜನಪ್ರತಿನಿಧಿಗಳಿಗೆ ಇಲ್ಲಿನ ಸಮಸ್ಯೆ ಕಾಣುತ್ತಿಲ್ಲ. ಜೀವನ ಸಾಗಿಸಲು ನೆರವಾಗುವುದು ಬಿಡಿ, ತ್ಯಾಜ್ಯ ಸಾಗಿಸಲೂ ಇಲ್ಲಿ ಕಾರ್ಮಿಕರಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ರಸ್ತೆ, ಚರಂಡಿ ಅವ್ಯವಸ್ಥೆ:
ವಾರ್ಡ್‍ನಲ್ಲಿ ರಸ್ತೆಗಳು ಕೆಲವೆಡೆ ಕಿರಿದಾಗಿದ್ದರೆ, ಇನ್ನು ಕೆಲವೆಡೆ ರಸ್ತೆಗಳೇ ನಿರ್ಮಾಣವಾಗಿಲ್ಲ. ಹೆಚ್ಚಿನ ರಸ್ತೆಗಳು 2 ರಿಂದ 3 ಅಡಿಗಳು ಮಾತ್ರವಿದ್ದು, ಸಾರ್ವಜನಿಕರಿಗೆ ಓಡಾಡಲೂ ತೊಂದರೆಯಾಗಿದೆ. ರಸ್ತೆ ಕಾಮಗಾರಿ ಆರಂಭಿಸುವ ಅಧಿಕಾರಿಗಳು ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆಗಾಲದಲ್ಲಿ ನೀರು ಮನೆಗೆ ನುಗ್ಗುತ್ತಿದೆ. ದೊಡ್ಡ ಚರಂಡಿಗಳಲ್ಲಿ ನೀರು ತುಂಬಿ ಹರಿಯುವುದರಿಂದ ಕೊಳಚೆ ನೀರು ಮನೆಯೊಳಗೆ ನುಗ್ಗುತ್ತಿದೆ. ಶೀಘ್ರವೇ ರಸ್ತೆ ಕಾಮಗಾರಿ ಮುಗಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ ಎಂದು ಸ್ಥಳೀಯರು ಆಡಳಿತಾಧಿಕಾರಿಗಳಿಗೆ ಮನವಿ ಮಾಡಿದರು.

ಕಡೆಗಣನೆಯಾದ ಸ್ಮಶಾನ:
ಡಿಜೆ ಹಳ್ಳಿ ವಾರ್ಡ್ ಗೆ ಸೇರಿದ ಸ್ಮಶಾನ ಮಾರ್ಗದಲ್ಲಿ ರಸ್ತೆ ಕಾಮಗಾರಿ ಅರ್ಧ ಪೂರ್ಣ ಗೊಂಡಿದ್ದು, ಇಲ್ಲಿನ ಸಂಚಾರ ವ್ಯವಸ್ಥೆ ಹದಗೆಟ್ಟಿರುವುದನ್ನು ವಿಜಯಭಾಸ್ಕರ್ ಪರಿಶೀಲಿಸಿದರು. ಸ್ಮಶಾನಕ್ಕೆ ತೆರಳಲು ಜನರು ಹರಸಾಹಸ ಪಡಬೇಕಿದ್ದು, ಇತ್ತೀಚೆಗೆ ಸ್ಮಶಾನ ಜೂಜಿನ ಅಡ್ಡೆಯಾಗಿ ಬದಲಾಗುತ್ತಿದೆ. ಸ್ಮಶಾನದಲ್ಲಿ ಮೂಲಸೌಕರ್ಯಗಳ ಕೊರತೆ
ಯಿದ್ದು, ಅಧಿಕಾರಿಗಳಿಂದ ಕಡೆಗಣನೆಯಾಗಿದೆ ಎಂದು ಸ್ಥಳೀಯರು ದೂರಿದರು.

ರೋಷನ್ ನಗರದಲ್ಲಿ ಹೆಚ್ಚಿನ ಮನೆಗಳಿರುವ ಪ್ರದೇಶದಲ್ಲಿ ಎರಡು ಬಂಡೆಗಳಿದ್ದು, ಇಲ್ಲಿ ಮಳೆನೀರು ನಿಲ್ಲುವುದರಿಂದ ನೇರವಾಗಿ ಮನೆಗಳ ಕಡೆಗೆ ಹರಿಯುತ್ತಿದೆ. ಹೀಗಾಗಿ ಇಲ್ಲೊಂದು ಮೋರಿ ನಿರ್ಮಿಸಬೇಕಿದೆ. ಈ ಹಿಂದೆ ಇದಕ್ಕಾಗಿ ರು.3 ಕೋಟಿ ವೆಚ್ಚವಿರುವ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿದ್ದು, ಬಿಬಿಎಂಪಿಯಿಂದ ಅನುಮೋದನೆ ದೊರೆತಿಲ್ಲ. ಅನುಮೋದನೆ ನೀಡಿ ಮೋರಿ ನಿರ್ಮಾಣಕ್ಕೆ ಚಾಲನೆ ನೀಡಬೇಕು ಎಂದು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಆಡಳಿತಾಧಿಕಾರಿಗೆ ಮನವಿ ಮಾಡಿದರು. ಅಂದಾಜು ಪಟ್ಟಿಯನ್ನು ಪರಿಶೀಲಿಸಿ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ವಿಜಯಭಾಸ್ಕರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com