
ಬೆಂಗಳೂರು: ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಹೊರಿಸಿದ್ದಾರೆಂದು ನಿವೃತ್ತ ನ್ಯಾಯಾಧೀಶರು ದಾಖಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಹೈಕೋಟ್ರ್ ನ ರಿಜಿಸ್ಟ್ರಾರ್ ಜನರಲ್ ಬಿ.ಎ.ಪಾಟೀಲ್ ಸೇರಿದಂತೆ ಮೂವರು ಹಾಲಿ ಮತ್ತು ಒಬ್ಬ ನಿವೃತ್ತ ನ್ಯಾಯಾಧೀಶರಿಗೆ ಹೈಕೋರ್ಟ್ ತುರ್ತು ನೋಟಿಸ್ ಜಾರಿ ಮಾಡಿದೆ.
ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ಆರೋಪ ಹೊರಿಸಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಕವಾಗುವ ಅವಕಾಶ ತಪ್ಪಿಸಿದ್ದಾರೆ. ಈ ರೀತಿ ಸುಳ್ಳು ರೋಪ ಹೊರಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುವು ಮಾಡಿಕೊಡಬೇಕು ಎಂದು ಕೋರಿ ನಿವೃತ್ತ ನ್ಯಾಯಾಧೀಶ ವೀರಣ್ಣ ಜಿ.ತಿಗಡಿ ಹೈಕೋಟ್ರ್ನಲ್ಲಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾ. ಎಚ್.ಬಿಳ್ಳಪ್ಪ ಅವರಿದ್ದ ಏಕಸದಸ್ಯ ಪೀಠ, ಹೈಕೋರ್ಟ್‍ನ ಹಾಲಿ ರಿಜಿಸ್ಟ್ರಾರ್ ಜನರಲ್ ಬಿ.ಎ.ಪಾಟೀಲ್, ಮಂಗಳೂರಿನ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸುನಿಲ್ ಕುಮಾರ್ ಸಿಂಗ್, ಬೆಳಗಾವಿಯ ಸೆಷನ್ಸ್ ನ್ಯಾಯಾಶ ಪಿ.ಕೃಷ್ಣಭಟ್, ಮೈಸೂರಿನ ಸೆಷನ್ಸ್ ನ್ಯಾಯಾಶರಾದ ಕೊಟ್ರವ್ವ ಸೋಮಪ್ಪ ಮುದಗಲ್, ನಿವೃತ್ತ ಪ್ರಧಾನ ನ್ಯಾಯಾಶರಾದ ಬೆಂಗಳೂರಿನ ನಿವಾಸಿ ವಿಶ್ವನಾಥ ವಿ.ಅಂಗಡಿ ಅವರಿಗೆ ತುರ್ತು ನೋಟಿಸ್ ಜಾರಿ ಮಾಡಿದೆ.
Advertisement