
ಮೂಲ್ಕಿ: ನೇಪಾಳ ಭೂಕಂಪದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹಾಗೂ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿರುವ ಭಾರತೀಯರ ರಕ್ಷಣೆಗೆ ನೇಪಾಳ ಸರ್ಕಾರದ ಆದ್ಯಾತ್ಮಿಕ ಸಲಹೆಗಾರ, ಅಂತರಾಷ್ಟ್ರೀಯ ಖ್ಯಾತಿಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಕಠ್ಮಂಡುವಿಗೆ ತೆರಳಿದ್ದಾರೆ.
ಹಲವು ಸಾಮಾಜಿಕ, ಶೈಕ್ಷಣಿಕ, ಕಾರ್ಯಕ್ರಮಗಳಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಟ್ರಸ್ಟ್ ಮೂಲಕ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಯವರ ಆದ್ಯಾತ್ಮಿಕ ಪ್ರಜ್ಞೆ ಹಾಗೂ ಸೇವಾ ಕಾರ್ಯಗಳನ್ನು ಗುರುತಿಸಿ ನೇಪಾಳ ಸರ್ಕಾರ ತಮ್ಮ ದೇಶದ ಆಧ್ಯಾತ್ಮಿಕ ಸಲಹೆಗಾರರನ್ನಾಗಿ ನೇಮಿಸಿದೆ. ಭೂಕಂಪದ ವಿಷಯ ತಿಳಿದು ಘಟನೆಗೆ ಸಂತಾಪ ವ್ಯಕ್ತಪಡಿಸಿರುವ ಅವರು ಕೂಡಲೇ ದೆಹಲಿ ಮೂಲಕ ನೇಪಾಳ ತಲುಪಿದ್ದಾರೆ.
ವಿಶ್ವದಲ್ಲಿ ಐತಿಹಾಸಿಕ ಪರಂಪರೆಯನ್ನು ಹೊಂದಿರುವಂಥ ನೇಪಾಳದ ಪಶುಪತಿ ದೇವಾಲಯದಲ್ಲಿನ ಶುಚಿತ್ವದ ಕೊರತೆ ಹಾಗೂ ದೇವಳದ ಆಡಳಿತ ಮಂಡಳಿ ನಿರ್ಲಕ್ಷ್ಯದಿಂದ ದೇವಾಲಯ ಕಳಾಹೀನವಾಗಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ ಸರಿಪಡಿಸದಿರುವುದರಿಂದ ಇಂತಹ ಘಟನೆ ಸಂಭವಿಸಿದೆ.ಪ್ರಕೃತಿ ವಿಕೋಪವನ್ನು ತಡೆಯಲು ಅಸಾಧ್ಯ, ಯಾಗ, ಯಜ್ಞಗಳ ಮೂಲಕ ಪ್ರಕೃತಿಯನ್ನು ಶಾಂತಪಡಿಸಲು ಸಾಧ್ಯವಿದ್ದು, ದೇವಾಲಯದ ಅಸ್ತವ್ಯಸ್ತ ಬಗ್ಗೆ ನೇಪಾಳದ ಪ್ರಧಾನ ಮಂತ್ರಿಯೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.
ಭಾರತೀಯರ ರಕ್ಷಣೆಗೆ ಕ್ರಮ
ಭೂಕಂಪದಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆಗೆ ತಮ್ಮ ಆಶ್ರಮದ ಮೂಲಕ ದೆಹಲಿಯಲ್ಲಿ ಸಂತ್ರಸ್ತರ ಶಿಬಿರ ಆರಂಭಿಸಿದ್ದು, ಸಂಬಂಧಿಕರು ತಮ್ಮ ಶಿಬಿರವನ್ನು
ಸಂಪರ್ಕಿಸಿದ್ದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವರನ್ನು ಭಾರತಕ್ಕೆ ಕರೆತರುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಸ್ವಾಮೀಜಿ ಹೇಳಿದ್ದಾರೆ.
Advertisement