ಆತ್ಮಹತ್ಯೆ ತಡೆಗೆ ಪರಿಹಾರ ಹುಡುಕಿ: ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ಸಂದರ್ಭಕ್ಕೆ ತಕ್ಕಂತೆ ಯಾರ ಕಾಲಿಗೆ ಬೇಕಾದರೂ ಬೀಳುವ ಮೂರು ಬಿಟ್ಟ ರಾಜಕಾರಣಿಗಳು ಇಂದು ರೈತರ ಕಾಲಿಗೆ ಬೀಳು ತ್ತಿದ್ದಾರೆ. ಹೀಗೆ ರೈತರ ಕಾಲಿಗೆ ಬಿದ್ದು ಕಣ್ಣೀರಿಡುವ ಬದಲು ರೈತರ ಆತ್ಮಹತ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ...
ಕೋಡಿಹಳ್ಳಿ ಚಂದ್ರಶೇಖರ್(ಸಂಗ್ರಹ ಚಿತ್ರ)
ಕೋಡಿಹಳ್ಳಿ ಚಂದ್ರಶೇಖರ್(ಸಂಗ್ರಹ ಚಿತ್ರ)

ಬೆಂಗಳೂರು: ಸಂದರ್ಭಕ್ಕೆ ತಕ್ಕಂತೆ ಯಾರ ಕಾಲಿಗೆ ಬೇಕಾದರೂ ಬೀಳುವ ಮೂರು ಬಿಟ್ಟ ರಾಜಕಾರಣಿಗಳು ಇಂದು ರೈತರ ಕಾಲಿಗೆ ಬೀಳು ತ್ತಿದ್ದಾರೆ. ಹೀಗೆ ರೈತರ ಕಾಲಿಗೆ ಬಿದ್ದು ಕಣ್ಣೀರಿಡುವ ಬದಲು ರೈತರ ಆತ್ಮಹತ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಬಹುಜನ ವಿದ್ಯಾರ್ಥಿ ಸಂಘ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರೈತರ ಆತ್ಮಹತ್ಯೆಗೆ ಕಾರಣ, ಪರಿಣಾಮ ಮತ್ತು ಪರಿಹಾರ ಕುರಿತ ಚರ್ಚೆಯಲ್ಲಿ ಮಾತನಾಡಿ, ಕೃಷಿ ವಲಯಕ್ಕಿರುವ ಸರ್ಕಾರದ ನೀತಿಗಳು ರೈತರನ್ನು ಬಲಿ ತೆಗೆದುಕೊಳ್ಳುತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳು ಒಬ್ಬರ ಮೇಲೊಬ್ಬರು ಆರೋಪ, ಪ್ರತ್ಯಾರೋಪ ಮಾಡುವುದನ್ನು ಬಿಟ್ಟು ಇಂತಹ ನೀತಿಗಳಿಗೆ ತಿದ್ದುಪಡಿ ತರುವ ಮೂಲಕ ರೈತನನ್ನು ಉಳಿಸಬೇಕಿದೆ ಎಂದರು.

ತಾರತಮ್ಯವೇಕೆ?:
ಕೇಂದ್ರದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ರಸಗೊಬ್ಬರ ಬೆಲೆ ಹೆಚ್ಚಳ ಮಾಡಿತು. ಅದೇ ಸಂದರ್ಭದಲ್ಲಿ 28 ಬಗೆಯ ಕೃಷಿ ಉತ್ಪನ್ನಗಳ ಬೆಲೆಯನ್ನು ಕಡಿತ ಮಾಡಿತು. ರೈತರ ಒಪ್ಪಿಗೆ ಇಲ್ಲದೆ ಭೂಸ್ವಾಧೀನ ಕಾಯಿದೆ ಜಾರಿಗೆ ತರುತ್ತಿದೆ. ಕಾರ್ಪೊರೇಟ್ ವಲಯಕ್ಕೆ ಆದ್ಯತೆ ನೀಡುವ ಮೋದಿ ಸರ್ಕಾರ ಕೃಷಿ ವಲಯಕ್ಕೆ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.

ಸರ್ಕಾರ ಜಾರಿಗೊಳಿಸುವ ಅನುದಾನದಲ್ಲಿ ಶೇ.20 ಮಾತ್ರ ರೈತರ ಪಾಲಿಗೆ ಸಿಗುತ್ತದೆ. ಅರ್ಧಕ್ಕರ್ಧ ಅನುದಾನ ಬಿಡುಗಡೆಯೇ ಆಗುವುದಿಲ್ಲ. ಉಳಿದ ಹಣವನ್ನು ಮಧ್ಯವರ್ತಿಗಳು, ರಾಜಕಾರಣಿಗಳೇ ತಿಂದು ತೇಗುತ್ತಾರೆ. ಅಲ್ಲದೆ ಬಜೆಟ್ ಮಂಡನೆ ಯಲ್ಲೂ ಗ್ರಾಮೀಣ ಅಬಿsವೃದ್ಧಿಗೆ ಅತಿ ಕಡಿಮೆ ಮೊತ್ತವನ್ನು ನಿಗದಿ ಮಾಡುತ್ತಾರೆ ಎಂದು ಆರೋಪಿಸಿದರು.

ಕೇವಲ ಭತ್ತ, ಕಬ್ಬು ರೈತರ ಪರಿಸ್ಥಿತಿ ಮಾತ್ರ ಹದಗೆಟ್ಟಿಲ್ಲ. ಕಾಪಿs, ಎಣ್ಣೆ-ಕಾಳುಗಳು, ಧಾನ್ಯಗಳು ಬೆಳೆಯುವ ಬೆಳೆಗಾರರ ಸ್ಥಿತಿ ಬಿsನ್ನವಾಗಿಲ್ಲ. ಇಂದು ಯಾವುದೇ ಬೆಳೆ ಲಾಭದಾಯಕವಾಗಿಲ್ಲ. ಹೆಚ್ಚಿನ ಬೆಳೆಗಳಿಗೆ ಬೆಂಬಲ ಬೆಲೆಗಳಿಲ್ಲ. ಈ ಎಲ್ಲದರ ನಡುವೆ ಮಧ್ಯವರ್ತಿಗಳ ಕಾಟ,ಬಿತ್ತನೆ ಬೀಜ, ರಸಗೊಬ್ಬರ ಬೆಲೆ ಹೆಚ್ಚಳವಾಗುತ್ತಿದೆ. ರೈತನ ಕೈ
ಕೆಸರಾದರೆ ಮಧ್ಯವರ್ತಿಗಳ ಬಾಯಿ ಮೊಸರಾಗುತ್ತಿದೆ. ಈ ಎಲ್ಲ ಕಾರಣಗಳಿಂದ ರೈತ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ ಎಂದು ವಿವರಿಸಿದರು.

1990ರ ನಂತರ ಜಾರಿಯಾದಂತಹ ಜಾಗತಿಕ ನೀತಿಗಳು ವಿಶ್ವಮಟ್ಟದಲ್ಲಿ ಕೃಷಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಹುನ್ನಾರ ನಡೆಸುತ್ತಿವೆ. ನೀತಿಗಳ ಜಾರಿ ಸಮಯದಲ್ಲಿ ಕೃಷಿ
ವಲಯವನ್ನು ಜಾಗತಿಕ ನೀತಿಗಳಲ್ಲಿ ಸೇರಿಸಬೇಡಿ ಎಂದು ರೈತ ಸಂಘಗಳು ಮನವಿ ಮಾಡಿದ್ದರೂ ಅಂದಿನ ಸರ್ಕಾರಗಳು ಮಾನ್ಯತೆ ನೀಡಿರಲಿಲ್ಲ. ಅದರ ಪರಿಣಾಮವೇ ಇಂದು
ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.

ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಮೊದಲು ದೇವೇಗೌಡರು ಮಾತ್ರ ಮಣ್ಣಿನ ಮಗ ಎಂದು ಹೇಳುತ್ತಿದ್ದರು. ಇಂದು ಹೆಚ್ಚಿನ ಜನಪ್ರತಿನಿಧಿಗಳು ಈ ಮಾತನ್ನು ಉಚ್ಚಾರ ಮಾಡುತ್ತಿದ್ದಾರೆ. ಆದರೆ, ರೈತರ ಮಸ್ಯೆಗಳಿಗೆ ಮಾತ್ರ ಯಾರೂ ಸ್ಪಂದಿಸುವುದಿಲ್ಲ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com