ಎನ್‍ಟಿಎಸ್ ಇ ಪರೀಕ್ಷೆ ಪ್ರಕ್ರಿಯೆ ಆರಂಭ

2015-16ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.
ಎನ್‍ಟಿಎಸ್ ಇ ಪರೀಕ್ಷೆ(ಸಾಂಕೇತಿಕ ಚಿತ್ರ)
ಎನ್‍ಟಿಎಸ್ ಇ ಪರೀಕ್ಷೆ(ಸಾಂಕೇತಿಕ ಚಿತ್ರ)

ಬೆಂಗಳೂರು: 2015-16ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.

10ನೇ ತರಗತಿ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗಾಗಿ ನ್ಯಾಷನಲ್ ಮೀನ್-ಕಮ್ ಮೆರಿಟ್ ಸ್ಕಾಲರ್‍ಶಿಪ್ ಯೋಜನೆ ಪರೀಕ್ಷೆಯು ನವೆಂಬರ್  8ರಂದು ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆಸಲಾಗುತ್ತದೆ.

ಈ ಹಿನ್ನೆಲೆಯಲ್ಲಿ ಜುಲೈ 30ರಿಂದಲೇ ಅರ್ಜಿ ವಿತರಣೆ ಕಾರ್ಯ ಆರಂಬಿಸಲಾಗಿದೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯವು ಈ ಸಂಬಂಧ ಪೂರ್ವ ತಯಾರಿ  ಆರಂಭಿಸಿದ್ದು, ಎಲ್ಲ ಪ್ರೌಢಶಾಲೆಗಳಿಗೆ ಮಾಹಿತಿ ನೀಡಿ ಮುಖ್ಯೋಪಾಧ್ಯಾಯರ ಸಭೆ ನಡೆಸಿ ಪ್ರತಿ ಶಾಲೆಯಿಂದ ಕಡ್ಡಾಯವಾಗಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುವಂತೆ ಮಾಡಬೇಕೆಂದು ಸೂಚಿಸಿದೆ. 2014-15ನೇ ಸಾಲಿನಲ್ಲಿ ಪ್ರತಿ ತಾಲೂಕಿನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆಗಿಂತ ಈ ಸಾಲಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಕ್ರಮ ಕೈಗೊಳ್ಳುವಂತೆಯೂ ಸೂಚಿಸಲಾಗಿದೆ.

ಪ್ರತಿ ಬಿಇಒ ಕಚೇರಿಯಿಂದ ಎನ್‍ಟಿಎಸ್‍ಇ ಪರೀಕ್ಷೆಗೆ 250 ಹಾಗೂ ಎನ್‍ಎಂಎಂಎಸ್ ಪರೀಕ್ಷೆಗೆ ಕನಿಷ್ಠ 500 ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ನೋಂದಾಯಿಸುವಂತೆ ಆದೇಶಿಸಲಾಗಿದೆ. ವಿದ್ಯಾರ್ಥಿಗಳಿಗೆ  ಅನುಕೂಲ ಮಾಡುವ ಸಲುವಾಗಿ ಅರ್ಜಿ ನಮೂನೆಗಳನ್ನು ಮುದ್ರಿಸಿ ಡಯಟ್‍ಗಳಿಗೆ ಸರಬರಾಜು ಮಾಡಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಜೊತೆಗೆ ಡಿಎಸ್‍ಇಆರ್‍ಟಿ ವೆಬ್‍ಸೈಟ್‍ನಲ್ಲೂ ಅರ್ಜಿಯನ್ನು ಅಳವಡಿಸಲಾಗಿದೆ.

ಪರೀಕ್ಷಾ ಶುಲ್ಕ ಕಡಿತ ಎನ್‍ಟಿಎಸ್ಸಿ ಪರೀಕ್ಷೆಯ ಶುಲ್ಕವನ್ನು ಈ ಬಾರಿ ಕಡಿತಗೊಳಿಸಲಾಗಿದೆ. ಅರ್ಜಿ ಉಚಿತವಾಗಿದ್ದು, ಸರ್ಕಾರಿ ಮತ್ತು ಅನುದಾನಿತ ಶಾಲೆಯ ಮಕ್ಕಳಿಗೆ ಪರೀಕ್ಷೆ ಶುಲ್ಕ ಜನರಲ್ ಮೆರಿಟ್ ಮತ್ತು ಇತರೆ ಕೆಟಗರಿ ವಿದ್ಯಾರ್ಥಿಗಳಿಗೆ 100, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ರೂ 25 ನಿಗದಿಪಡಿಸಲಾಗಿದೆ. ಅನುದಾನ ರಹಿತ ಶಾಲೆಯ ಜನರಲ್ ಮೆರಿಟ್ ವಿದ್ಯಾರ್ಥಿಗಳಿಗೆ ರೂ 200 ಮತ್ತು ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ರೂ 50 ಇರುತ್ತದೆ. ಎನ್‍ಎಂಎಂಎಸ್ ಪರೀಕ್ಷೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಯ ಜನರಲ್ ಮೆರಿಟ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 30 ರೂಪಾಯಿ ಮತ್ತು ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ 15  ರೂಪಾಯಿ ನಿಗದಿಪಡಿಸಲಾಗಿದೆ.

ಈ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ನೋಡಲ್  ಅಧಿಕಾರಿಗಳನ್ನು ನೇಮಿಸಲಾಗಿದೆ.

ಪರೀಕ್ಷೆ ಮಹತ್ವ:
ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಪ್ರೇಶಿತವಾದ ಈ ಯೋಜನೆಯು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಮುಂದಿನ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು ಇದರ ಉದ್ದೇಶ. 8ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯುವ ಎನ್‍ಎಂಎಂಎಸ್ ಪರೀಕ್ಷೆಯಲ್ಲಿ  ಅರ್ಹತೆ ಪಡೆದವರು, 9ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಮಾಸಿಕ 500  ವಿದ್ಯಾರ್ಥಿ ವೇತನ ಪಡೆಯಲಿದ್ದಾರೆ.

ಜೊತೆಗೆ ವಿದ್ಯಾಭ್ಯಾಸದ ಅವ„ ಪೂರ್ಣ ಕೇಂದ್ರದಿಂದ ವಿದ್ಯಾರ್ಥಿ ವೇತನ ದೊರೆಯಲಿದೆ. ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಅರ್ಹತೆ  ಪಡೆದ ವಿದ್ಯಾರ್ಥಿಗಳು ಎರಡು ವರ್ಷಗಳ ಅವ„ಗೆ ಎರಡು ಸಾವಿರ ರುಪಾಯಿ ಯನ್ನು ರಾಜ್ಯ ವಿದ್ಯಾರ್ಥಿ ಕ್ಷೇಮÁಬಿsವೃದಿಟಛಿ ನಿ„ಯಿಂದ ನೀಡಲಾಗುತ್ತದೆ. ಜೊತೆಗೆ ವಿದ್ಯಾಭ್ಯಾಸದ ಕೊನೆ ಯವರೆಗೆ ಎನ್‍ಸಿಇಆರ್‍ಟಿ ಪ್ರತ್ಯೇಕವಾಗಿ ವಿದ್ಯಾರ್ಥಿ ವೇತನ ನೀಡುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com