
ಬೆಂಗಳೂರು: ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಹೊರಟಿದೆಯೇ ಸರ್ಕಾರ? ಹೌದು ಎನ್ನುತ್ತಿದೆ ಸ್ವತಃ ಸರ್ಕಾರವೇ ಹೊರಡಿಸಿರುವ ಆದೇಶ!
ಕರ್ನಾಟಕ ಸರ್ಕಾರದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ `ಡಿ' ಗ್ರೂಪ್ ನೌಕರರು ತಮ್ಮ ಆಸ್ತಿ ಮತ್ತು ಹೊಣೆಗಾರಿಕೆಗಳ ವಿವರವನ್ನು ನಿಯಮಿಸಲಾದ ಪ್ರಾಧಿಕಾರಕ್ಕೆ ಸಲ್ಲಿಸುವಂತೆ ಸರ್ಕಾರವು ಆಗಸ್ಟ್ 1 ರಂದು ಆದೇಶ (ಸಂಖ್ಯೆ: ಸಿಆಸುಇ 90 ಸೇನಿಸಿ 2014) ಹೊರಡಿಸಿದೆ. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು, 1996 ನಿಯಮ 23(1)(ಡಿ) ಟಿಪ್ಪಣಿ-1ರಲ್ಲಿ `ಡಿ' ದರ್ಜೆ ಸರ್ಕಾರಿ ನೌಕರರಿಗೆ ಆಸ್ತಿ ಮತ್ತು ಹೊಣೆಗಾರಿಕೆ ವಿವರ ಪಟ್ಟಿ ಸಲ್ಲಿಸಲು ನೀಡಿದ್ದ ವಿನಾಯಿತಿಯನ್ನು ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ತೆರವುಗೊಳಿಸಿದೆ. ಈ ಆದೇಶದಿಂದ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು `ಡಿ' ಗ್ರೂಪ್ ನೌಕರರಿಗೆ ಹೊಸದೊಂದು ಸಂಕಷ್ಟ ಎದುರಾಗಿದೆ.
ಇಷ್ಟು ವರ್ಷ ಇಲ್ಲದ ನಿಯಮವನ್ನು ಸರ್ಕಾರ ರೂಪಿಸುವ ಮೂಲಕ ತನ್ನ ವಿಕೃತ ಮನಸ್ಸಿನ ಭಾವನೆ ಹೊರ ಹಾಕಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ
ಒಕ್ಕೂಟ ಟೀಕಿಸಿದೆ. ಅಲ್ಲದೆ ಸರ್ಕಾರದ ಈ ಕ್ರಮ ತಲೆ ಬುಡ ಇಲ್ಲದ್ದು ಎಂದೂ ಖಾರವಾಗಿ ಪ್ರತಿಕ್ರಿಯಿಸಿದೆ.
ಆದೇಶ ಗೊಂದಲ ನಿವಾರಿಸೀತೆ?: ಕರ್ನಾಟಕ ನಾಗರಿಕ ಸೇವಾ (ನಡತೆ )ನಿಯಮ ಗಳು, 1996ರ ನಿಯಮ 23(1) ರನ್ವಯ`ಪ್ರತಿಯೊಬ್ಬ ಸರ್ಕಾರಿ ನೌಕರನು ಯಾವು
ದೇ ಸೇವೆಗೆ ಅಥವಾ ಹುದ್ದೆಗೆ ಅವನ ಮೊದಲ ನೇಮಕ ಆದಾಗ ಮತ್ತು ಆ ತರುವಾಯ ಮಾರ್ಚ್ 31ಕ್ಕೆ ಅಂತ್ಯಗೊಳ್ಳುವಪ್ರತಿ ಹನ್ನೆರಡು ತಿಂಗಳ ಅಂತರದಲ್ಲಿ ತನ್ನ ಮತ್ತು ಮತ್ತು ತನ್ನ ಕುಟುಂಬದ ಎಲ್ಲ ಸದಸ್ಯರ ಆಸ್ತಿಗಳ ಮತ್ತು ಹೊಣೆಗಾರಿಕೆಗಳ ವಿವರಪಟ್ಟಿಯನ್ನು ಸರ್ಕಾರ ನಿಯಮಿಸುವ ನಮೂನೆ ಯಲ್ಲಿ ಸಲ್ಲಿಸುವಂತೆ' ಈ ಹಿಂದೆ ಆದೇಶಿಸಿತ್ತು.
ಮತ್ತೊಂದು ಆದೇಶದಲ್ಲಿ, `1996ರ ನಿಯಮ 23(1)(ಡಿ) ಟಿಪ್ಪಣಿ 1ರಲ್ಲಿ 23(1) ಉಪನಿಯಮ`ಡಿ' ಸಮೂಹದ ನೌಕರರಿಗೆ ಸಾಮಾನ್ಯವಾಗಿ ಅನ್ವಯವಾಗತಕ್ಕದ್ದಲ್ಲ ಎಂದಿದ್ದರೂ , `ಸರ್ಕಾರವು ಅದು ಅಂಥ ಯಾವುದೇ ಸರ್ಕಾರಿ ನೌಕರನಿಗೆ ,ಸರ್ಕಾರಿ ನೌಕರರ ವರ್ಗಕ್ಕೆ ಅನ್ವಯವಾಗತಕ್ಕ ದ್ದೆಂದು ನಿರ್ದೇಶಿಸಬಹುದೆಂದು' ಅಭಿಪ್ರಾಯಪಟ್ಟಿತ್ತು.
Advertisement