ಲಾಲ್‍ಬಾಗ್‍ನಲ್ಲಿ ಅರಳಲಿದೆ ಅರಮನೆ!

ಲಾಲ್‍ಬಾಗ್‍ನಲ್ಲಿ ಮತ್ತೆ ಬಂದಿದೆ ಕಣ್ಮನ ತಣಿಸುವ ಹೂಗಳ ಸಂತೆ. ಜನರನ್ನು ಆಕರ್ಷಿಸಲಿವೆ. ನೂರಾರು ಜಾತಿಯ ಪುಷ್ಪಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಲಾಲ್‍ಬಾಗ್‍ನಲ್ಲಿ ಮತ್ತೆ ಬಂದಿದೆ ಕಣ್ಮನ ತಣಿಸುವ ಹೂಗಳ ಸಂತೆ. ಜನರನ್ನು ಆಕರ್ಷಿಸಲಿವೆ. ನೂರಾರು ಜಾತಿಯ ಪುಷ್ಪಗಳು ಸ್ವಾತಂತ್ರ್ಯೋತದ ಅಂಗವಾಗಿ ಫಲಪುಷ್ಪ  ಪ್ರದರ್ಶನಕ್ಕೆ ಸಜ್ಜಾಗಿದೆ.

ತೋಟಗಾರಿಕಾ ಇಲಾಖೆ ಮತ್ತು  ಮೈಸೂರು ಉದ್ಯಾನಕಲಾ ಸಂಘ ಆ.7- ರಿಂದ 16ರವರೆಗೆ ಲಾಲ್‍ಬಾಗ್‍ನ ಗಾಜಿನ ಅರಮನೆಯಲ್ಲಿ  ಫಲಪುಷ್ಪ ಪ್ರದರ್ಶನ ಆಯೋಜಿಸಿದೆ.   ಮೈಸೂರಿನ ರಾಣಿ ಪ್ರಮೋದಾದೇವಿ ಹಾಗೂ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಒಡೆಯರ್ ಕಾರ್ಯಕ್ರಮ ಉದ್ಘಾಟಿ ಸಲಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಲಾಲ್‍ಬಾಗ್ ಸಸ್ಯತೋಟಗಳ ವರ್ಣಚಿತ್ರ ಪುಸ್ತಕ, ಪ್ರಧಾನ ಕಾರ್ಯದರ್ಶಿ ರಾಜೀವ್ ಚಾವ್ಲಾ ಕಿರುಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ ಎಂದು ತೋಟಗಾರಿಕ ಇಲಾಖೆ ಉಪನಿರ್ದೇಶಕ  ಎಚ್.ಎಸ್ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಲಾಂ ಕಲಾಕೃತಿ
ಗಾಜಿನ ಮನೆ ಎದುರು ಒಂದು ಟ್ರಕ್ ಮರಳಿನಿಂದ 6 ಅಡಿ ಎತ್ತರ 10ಘಿ10 ಅಗಲ ಸುತ್ತಳತೆಯ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಕಲಾಕೃತಿ ಯನ್ನು ಕಲಾವಿದೆ ಗೌರಿ ಅವರು ಸುಂಕದ ವಾಗಿ ರೂಪಿಸುತ್ತಿದ್ದಾರೆ. ಮಳೆ ಬಂದಾಗ ನೀರು ಒಳಹೋಗ ದಂತೆ ಶೆಡ್‍ಗಳನ್ನು ನಿರ್ಮಿಸಲಾಗುತ್ತಿದೆ.

ವಿಶೇಷ ರಾಜದರ್ಶನ
ಯದುವಂಶ ಕೀರ್ತಿಯನ್ನು ಬೆಳಗಿ ವಿಶೇಷ ದಾಖಲೆ ಸ್ಥಾಪಿಸಿರುವ ಚಾಮರಾಜ ಒಡೆಯರ್, ಮುಮ್ಮಡಿ ಕೃಷ್ಣರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಜಯಚಾರಾಜ  ಒಡೆಯರ್ ಮತ್ತು ಶ್ರೀಕಂಠದತ್ತ ಒಡೆಯರುಗಳ ಆಳೆತ್ತರದ ವಿಗ್ರಹಗಳು ಈ ಬಾರಿಯ ವಿಶೇಷ. ಅರಮನೆ ವಾತಾವರಣಕ್ಕೆ ಪೂರಕವಾಗಿ ನಾಲ್ಕು ಆನೆ, ಎರಡು ಕುದುರೆ ಮತ್ತು ಎರಡು ಜಿಂಕೆಯ ಶಿರಗಳು ಈ ಬಾರಿ ಪ್ರದರ್ಶನಕ್ಕೆ ರಂಗು ನೀಡಲಿವೆ. ಮೈಸೂರು ಅರಮನೆ ಮುಂದಿರುವ ಲೋಹನ ಸಿಂಹಗಳ ಪ್ರತಿರೂಪ ಈ ವರ್ಷ ಗಾಜಿನ ಮನೆ ಮುಂದಿನ ಹುಲ್ಲುಹಾಸಿನ ಮೇಲಿರುತ್ತದೆ. ಗಾಜಿನ ಮನೆಯ ಉತ್ತರದಲ್ಲಿ ಪಲ್ಲಕ್ಕಿ, ದಕ್ಷಿಣದಲ್ಲಿ ರಾಜ ಸಿಂಹಾಸನಗಳಿದ್ದು, ಆವರಣದೊಳಗೆ ಎರಡು  ಬಾರಿಯ ಪುಷ್ಪ ಪ್ರದರ್ಶನದ ವಿಶೇಷ.

ಕಲಾಂ ಅವರ ಕಲಾಕೃತಿ, ರಾಜರ ಆಕೃತಿಗಳು, ಸಿಂಹಾಸನ ಈ ಬಾರಿಯ ವಿಶೇಷ. 1.ಕೋಟಿ 20 ಲಕ್ಷ ಬಜೆಟ್ ನಲ್ಲಿ  ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.  ಸುಮಾರು 250ಕ್ಕೂ ಹೆಚ್ಚು ಹೂವಿನ ತಳಿಗಳು ಕಂಗೊಳಿಸಲಿವೆ. ಜತೆಗೆ 450 ಭದ್ರತಾ ಸಿಬ್ಬಂದಿ, 48 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.

ಟ ಎಚ್.ಎಸ್. ಶಿವಕುಮಾರ್ ತೋಟಗಾರಿಕೆ ನಿರ್ದೇಶಕರು

ವಿಶೇಷ ಪುಷ್ಪಗಳ ಪ್ಯಾಲೇಸ್ 45 ಅಡಿ ಉದ್ದ, 35ಅಡಿ ಎತ್ತರ ಮತ್ತು 20 ಅಡಿ ಅಗಲದ ಸಂಪೂರ್ಣವಾಗಿ ಪುಷ್ಪದಿಂದಲೇ ನಿರ್ಮಿತವಾಗಿರುವ ಬೆಂಗಳೂರು ಅರಮನೆ, ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ವಿಶೇಷ ಪರಿಣಿತರ 25ರಿಂದ 30 ಜನರ ತಂಡ ಸುಮಾರು 15 ದಿನಗಳ ಕಾಲ ವಿನ್ಯಾಸಗೊಳಿಸಿ ಸುಮಾರು 3 ಲಕ್ಷಕ್ಕೂ  ಹೆಚ್ಚಿನ ಡಚ್ ತಳಿಯ ವಿಶೇಷ ಗುಲಾಬಿ ಹೂವನ್ನು ಬಳಸಿ ಆಕರ್ಷಕ ವಾಗಿ ಮೂಡಿಬರುವಂತೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com