ಹೊರ ರಾಜ್ಯಕ್ಕೂ ಗ್ರಾಮೀಣ ವೈದ್ಯ ಸೇವೆ

ಗ್ರಾಮೀಣ ಸೇವೆ ಈಗ ಕರ್ನಾಟಕ ಮಾತ್ರವಲ್ಲ. ಹೊರ ರಾಜ್ಯಕ್ಕೂ ವಿಸ್ತರಣೆಯಾಗುವಂತೆ ಕ್ರಮ ಕೈಗೊಳ್ಳಲು ಸರ್ಕಾರ ಚಿಂತಿಸಿದೆ. ..
ಯು.ಟಿ.ಖಾದರ್
ಯು.ಟಿ.ಖಾದರ್

ಬೆಂಗಳೂರು: ಗ್ರಾಮೀಣ ಸೇವೆ ಈಗ ಕರ್ನಾಟಕ ಮಾತ್ರವಲ್ಲ. ಹೊರ ರಾಜ್ಯಕ್ಕೂ ವಿಸ್ತರಣೆಯಾಗುವಂತೆ ಕ್ರಮ ಕೈಗೊಳ್ಳಲು ಸರ್ಕಾರ ಚಿಂತಿಸಿದೆ. ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಆರೋಗ್ಯ ಸಚಿವ ಯು.ಟಿ.ಖಾದರ್, ಎಲ್ಲ ವೈದ್ಯಕೀಯ ಪದವೀಧರರಿಗೆ ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಇದು ಮುಂದೆ ಎಂಬಿಬಿಎಸ್ ಮತ್ತು ಪಿಜಿ ಮುಗಿಸುವ
ವೈದ್ಯರಿಗೆ ಅನ್ವಯಿಸುತ್ತದೆ. ಅಂದರೆ ರಾಜ್ಯದಲ್ಲಿ ವೈದ್ಯಕೀಯ ಪದವಿ ಪಡೆಯಬೇಕಾದರೆ ಅವರು ಗ್ರಾಮೀಣ ಸೇವೆ ಮಾಡಿರಲೇಬೇಕು. ಅದೇ ರೀತಿ ರಾಜ್ಯದಲ್ಲಿ ಕಲಿತ ಹೊರ ರಾಜ್ಯಗಳ ಪದವೀಧರರಿಗೂ ಇದು ಅನ್ವಯಿಸುತ್ತದೆ. ಹೊರ ರಾಜ್ಯದವರು ಗ್ರಾಮೀಣ ಸೇವೆಯನ್ನು ಅವರ ತವರು ರಾಜ್ಯಗಳಲ್ಲೇ ಮಾಡಬಹುದಾಗಿದ್ದು, ಆ ಸೇವೆ ನಂತರ ಕರ್ನಾಟಕದಲ್ಲಿ ಪದವಿ ಪ್ರಮಾಣ ಪತ್ರ ಪಡೆಯಬಹುದು. ವೈದ್ಯರು ಗ್ರಾಮೀಣ ಸೇವೆ ಮಾಡುವ ಬಗ್ಗೆ ಎಲ್ಲ ರಾಜ್ಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನಿಯಮ ರೂಪಿಸಬೇಕಿದ್ದು, ಇದಕ್ಕಾಗಿ ಸದ್ಯದಲ್ಲೇ ಮನವಿ ಸಲಿಸಲಾಗುವುದು ಎಂದು ಖಾದರ್ ಹೇಳಿದರು.

ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಹೊಣೆಯನ್ನು ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿದ್ದು, ಅದು ನೋಡಲ್ ಸಂಸ್ಥೆಯಾಗಿ ಕೆಲಸ ನಿರ್ವಹಿಸಲಿದೆ. ಅಂದರೆ ವೈದ್ಯ ಪದವೀಧರರು ಗ್ರಾಮೀಣ ಸೇವೆಯನ್ನು ಪೂರ್ಣಗೊಳಿಸಿದ ನಂತರ ಅದರ
ಬಗ್ಗೆ ಇಲಾಖೆ ಅಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ಮಾಹಿತಿ ನೀಡುತ್ತಾರೆ. ನಂತರ ವಿಶ್ವವಿದ್ಯಾಲಯ ಗ್ರಾಮೀಣ ಸೇವೆ ಮುಗಿಸಿದವರಿಗೆ ಪದವಿ ಪ್ರಮಾಣ ಪತ್ರ ನೀಡುತ್ತದೆ. ರಾಜ್ಯದಲ್ಲಿ ಈಗಾಗಲೇ 365 ಎಂಬಿಬಿಎಸ್ ವೈದ್ಯ ಹುದ್ದೆಗಳು ಮತ್ತು 981 ಪಿಜಿ ವೈದ್ಯರ ನೇಮಕ ಪ್ರಕ್ರಿಯೆ ಆರಂಭವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com