ಬರ ಪರಿಹಾರಕ್ಕೆ ರು. 200 ಕೋಟಿ

ಮಳೆಯ ಅಭಾವದಿಂದ ಕಂಗೆಟ್ಟಿರುವ ರಾಜ್ಯದ 25 ಜಿಲ್ಲೆಗಳ 98 ತಾಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಲು ರಾಜ್ಯ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಳೆಯ ಅಭಾವದಿಂದ ಕಂಗೆಟ್ಟಿರುವ ರಾಜ್ಯದ 25 ಜಿಲ್ಲೆಗಳ 98 ತಾಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ಯಲ್ಲಿ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು ಈ ಭಾಗದಲ್ಲಿ ಅಧ್ಯಯನ ನಡೆಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆ ಸೂಚನೆ ನೀಡಲಾಗಿದೆ. ಅಗಸ್ಟ್  16ರ ನಂತರ ಇವುಗಳನ್ನು ಅಧಿಕೃತವಾಗಿ ಬರಪೀಡಿತ ಎಂದು ಘೋಷಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ, ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು. ಬರ ಪರಿಹಾರಕ್ಕಾಗಿ ಆರಂಭಿಕ ಹಂತದಲ್ಲಿ ರು.200 ಕೋಟಿಗಳನ್ನು ನಿಗದಿ ಮಾಡಲಾಗಿದೆ.ಕುಡಿಯುವ ನೀರಿಗೆ ರು. 25 ಕೋಟಿ, ಪೂರೈಕೆಗೆ ರು.50 ಕೋಟಿ, ಇನ್ನಿತರ ಪರಿಹಾರ ಕಾಮಗಾರಿಗೆ ರು.125 ಕೋಟಿ ದೊರೆಯಲಿದೆ.
ಈ ತಾಲೂಕುಗಳಲ್ಲಿ ಉದ್ಯೋಗ ಸೃಜನೆ, ಗೋಶಾಲೆ ನಿರ್ಮಾಣ, ಸಾಲ ವಸೂಲಿ ಮುಂದೂಡಿಕೆಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಿದೆ


ಬರ ಪೀಡಿತ ತಾಲೂಕುಗಳು ಯಾವವು?

- ಬೆಂಗಳೂರು ಗ್ರಾಮಾಂತರ- ಆನೇಕಲ್.
- ರಾಮನಗರ- ಕನಕಪುರ, ರಾಮನಗರ.
- ಕೋಲಾರ- ಕೋಲಾರ, ಮುಳಬಾಗಿಲು,ಶ್ರೀನಿವಾಸಪುರ.
-ಚಿಕ್ಕಬಳ್ಳಾಪುರ- ಬಾಗೇಪಳ್ಳಿ,ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ.
- ತುಮಕೂರು- ಕುಣಿಗಲ್, ಪಾವಗಡ,ತುಮಕೂರು.
- ಚಿತ್ರದುರ್ಗ- ಚಳ್ಳಕೆರೆ, ಮೊಳಕಾಲ್ಮೂರು.
- ದಾವಣಗೆರೆ- ಹರಪನಹಳ್ಳಿ, ಜಗಳೂರು.
- ಚಾಮರಾಜನಗರ- ಕೊಳ್ಳೇಗಾಲ.
-ಮೈಸೂರು- ಹೆಗ್ಗಡದೇವನಕೋಟೆ.
- ಮಂಡ್ಯ- ಮಂಡ್ಯ.
- ಬಳ್ಳಾರಿ- ಬಳ್ಳಾರಿ, ಹಡಗಲಿ, ಹಗರಿ-ಬೊಮ್ಮನಹಳ್ಳಿ, ಸಂಡೂರು, ಸಿರಗುಪ್ಪ.
- ಕೊಪ್ಪಳ- ಗಂಗಾವತಿ, ಕೊಪ್ಪಳ, ಕುಷ್ಟಗಿ,ಯಲಬುರ್ಗ.
- ರಾಯಚೂರು- ದೇವದುರ್ಗ, ಮಾನ್ವಿ, ರಾಯಚೂರು, ಸಿಂಧನೂರು.
- ಕಲಬುರಗಿ- ಅಫ್ಜಲ್‍ಪುರ, ಅಲಂದಾ,ಚಿಂಚೊಳ್ಳಿ, ಚಿತ್ತಾಪುರ, ಕಲಬುರಗಿ,
ಜೇವರ್ಗಿ, ಸೇಡಂ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com