ಬಿಪಿಎಲ್ ಕುಟುಂಬಕ್ಕೆ ಸೊಸೈಟಿ ಸದಸ್ಯತ್ವ

ಸಹಕಾರಿ ಸಂಘಗಳ ಮೂಲಕವೇ ರೈತರಿಗೆ ಸಾಲ ದೊರೆಯುವಂತೆ ಮಾಡಲು ಬಿಪಿಎಲ್ ಕುಟುಂಬಗಳಿಗೆ ಸರ್ಕಾರವೇ ಶುಲ್ಕ ಭರಿಸಿ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗಿದೆ
ಕೃಷ್ಣ ಭೈರೇಗೌಡ
ಕೃಷ್ಣ ಭೈರೇಗೌಡ

ಹಾವೇರಿ: ಸಹಕಾರಿ ಸಂಘಗಳ ಮೂಲಕವೇ ರೈತರಿಗೆ ಸಾಲ ದೊರೆಯುವಂತೆ ಮಾಡಲು ಬಿಪಿಎಲ್ ಕುಟುಂಬಗಳಿಗೆ ಸರ್ಕಾರವೇ ಶುಲ್ಕ ಭರಿಸಿ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ  ತಿಳಿಸಿದರು.

ಖಾಸಗಿ ಲೇವಾದೇವಿದಾರರ ಕಪಿಮುಷ್ಠಿಯಿಂದ ರೈತರನ್ನು ಮುಕ್ತಗೊಳಿಸಿ ಸಹಕಾರಿ ಸಂಘಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಬೆಳೆ ಸಾಲ ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ. ಮೂರು ವರ್ಷಗಳ ಅವಧಿಯಲ್ಲಿ ಬಿಪಿಎಲ್ ಕುಟುಂಬದ ಎಲ್ಲಾ ರೈತರಿಗೆ ಸಹಕಾರಿ ಸಂಘಗಳ ಸದಸ್ಯತ್ವ ನೀಡಲಾಗುವುದು. ಸದಸ್ಯತ್ವ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದರು.

ಮಳೆ ಕೊರತೆಯಿಂದ ರಾಜ್ಯದಲ್ಲಿ 44 .75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 10 ಲಕ್ಷ ಹೆಕ್ಟೇರ್ ಕಡಿಮೆಯಾಗಿದೆ. ಬಿತ್ತನೆಯಾದ ಬಳಿಕ ಮಳೆಯಾಗದೇ 12 ರಿಂದ 15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಲೆ ಒಣಗುತ್ತಿದೆ. ಪರ್ಯಾಯ ಬೆಳೆ ಹಾಗು ಬಿತ್ತನೆ ತಳಿ ಬೀಜವನ್ನು ರೈತರಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೂ ಈ ಸಲ ಆಹಾರ ಉತ್ಪಾದನೆಯಲ್ಲಿ ಗುರಿ ತಲುಪುವ ಪರಿಸ್ಥಿತಿ ಕಂಡುಬರುತ್ತಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com