ಬರಪೀಡಿತ ತಾಲೂಕು 114ಕ್ಕೆ

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ ಅಧಿಕೃತವಾಗಿ 114ಕ್ಕೆ ಏರಿದೆ. ಈ ಹಿಂದೆ ರಾಜ್ಯದ 98 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿತ್ತು...
ಬರ ಪೀಡಿತ ಪ್ರದೇಶ ( ಕೃಪೆ :ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ )
ಬರ ಪೀಡಿತ ಪ್ರದೇಶ ( ಕೃಪೆ :ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ )

ಮೈಸೂರು: ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ ಅಧಿಕೃತವಾಗಿ 114ಕ್ಕೆ ಏರಿದೆ. ಈ ಹಿಂದೆ ರಾಜ್ಯದ 98 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿತ್ತು. ಹೆಚ್ಚು ಮಳೆಯಾಗುವ ಮಡಿಕೇರಿ ಜಿಲ್ಲೆಯ ವಿರಾಜಪೇಟೆ ಸೇರಿ ಇನ್ನೂ 22 ತಾಲೂಕುಗಳು ಬರಕ್ಕೆ ತುತ್ತಾಗಿವೆ ಎಂದು ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಈ ಎಲ್ಲ ಭಾಗಗಳಲ್ಲಿ ರೈತರಿಗೆ ಪರಿಹಾರ, ಉದ್ಯೋಗ, ಜಾನುವಾರಿಗೆ ಮೇವು ಪೂರೈಸಲು ಸುಮಾರು ರು. 800 ರಿಂದ 1,000 ಕೋಟಿ ವೆಚ್ಚವಾಗಲಿದೆ. ಕೇಂದ್ರ ಸರ್ಕಾರ ಅಗತ್ಯ ನೆರವು ನೀಡದಿದ್ದರೂ ರಾಜ್ಯಸರ್ಕಾರವೇ ಪರಿಹಾರಕ್ಕೆ ಮುಂದಾಗಲಿದೆ ಎಂದು ತಿಳಿಸಿದರು.ರಾಜ್ಯದಲ್ಲಿ ಶೇ.73ರಷ್ಟು ಮಳೆ ಕಡಿಮೆಯಾಗಿದೆ. ಎಲ್ಲಾ ಜಿಲ್ಲೆಗಳಲ್ಲೂ ವಾಡಿಕೆ ಯಂತೆ ಮಳೆಯಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ರೈತರ ಸ್ಥಿತಿ ಘೋರವಾಗಿದೆ. ಅಂತರ್ಜಲ ಮಟ್ಟವೂ ದಿನೇ ದಿನೇ ಕುಸಿಯುತ್ತಿದೆ. ಗೋ ಶಾಲೆ ತೆರೆಯುವುದು, ಬೆಳೆ ಪರಿಹಾರ ನೀಡುವುದು, ರೈತರಿಗೆ ಉದ್ಯೋಗ ಕೊಡುವುದು ನಮ್ಮ ಜವಾಬ್ದಾರಿಎಂದು ವಿವರಿಸಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com