ಹಜ್: ಮಧ್ಯಾಹ್ನ ಬದಲಿಗೆ ಮಧ್ಯರಾತ್ರಿ ವಿಮಾನ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮನವಿಗೆ ಕೇಂದ್ರ ವಿಮಾನಯಾನ ಸಚಿವಾಲಯ ಸ್ಪಂದಿಸಿದ್ದು, ಇಷ್ಟು ವರ್ಷ ಮಧ್ಯಾಹ್ನ 1 ಗಂಟೆಗೆ ಹೊರಡುತ್ತಿದ್ದ ವಿಮಾನದ ಸಮಯವನ್ನು ಪ್ರಸಕ್ತ ವರ್ಷದಿಂದ ಮಧ್ಯರಾತ್ರಿ 1 ಗಂಟೆಗೆ ಬದಲಾಯಿಸಲಾಗಿದೆ...
ಹಜ್: ಮಧ್ಯಾಹ್ನ ಬದಲಿಗೆ ಮಧ್ಯರಾತ್ರಿ ವಿಮಾನ (ಸಾಂದರ್ಭಿಕ ಚಿತ್ರ)
ಹಜ್: ಮಧ್ಯಾಹ್ನ ಬದಲಿಗೆ ಮಧ್ಯರಾತ್ರಿ ವಿಮಾನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ ಯಾತ್ರೆಗೆ ತೆರಳುತ್ತಿದ್ದ ಯಾತ್ರಾರ್ಥಿಗಳ ಮನವಿಗೆ ಕೇಂದ್ರ ವಿಮಾನಯಾನ ಸಚಿವಾಲಯ ಸ್ಪಂದಿಸಿದ್ದು, ಇಷ್ಟು ವರ್ಷ ಮಧ್ಯಾಹ್ನ 1 ಗಂಟೆಗೆ ಹೊರಡುತ್ತಿದ್ದ ವಿಮಾನದ ಸಮಯವನ್ನು ಪ್ರಸಕ್ತ ವರ್ಷದಿಂದ ಮಧ್ಯರಾತ್ರಿ 1 ಗಂಟೆಗೆ ಬದಲಾಯಿಸಲಾಗಿದೆ ಎಂದು ಮೂಲಸೌಲಭ್ಯ ಹಾಗೂ ಹಜ್ ಸಚಿವ ಆರ್. ರೋಷನ್ ಬೇಗ್ ಹೇಳಿದರು.

ರಾಜ್ಯ ಹಜ್ ಸಮಿತಿ ನಗರದ ಮಿಲ್ಲರ್ಸ್ ರಸ್ತೆಯಲ್ಲಿರುವ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ಏರ್ಪಡಿಸಿದ್ದ ಹಜ್ ಯಾತ್ರಾರ್ಥಿಗಳಿಗೆ ಎರಡು ದಿನದ ತರಬೇತಿ ಶಿಬಿರಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿ ವರ್ಷ ಹಜ್ ಯಾತ್ರೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಯಾತ್ರಾರ್ಥಿಗಳಿಗೆ ಮಧ್ಯಾಹ್ನ 1 ಗಂಟೆಗೆ ವಿಮಾನದ ಸಮಯವನ್ನು ನಿಗದಿಪಡಿಸಿದ್ದರಿಂದ ಸಿದಟಛಿತೆ ದೃಷ್ಟಿಯಿಂದ ತೊಂದರೆಯಾಗುತ್ತಿತ್ತು. ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಪತ್ರ ಬರೆದು, ಸಮಯ ಬದಲಾವಣೆಗೆ ಮಾಡಿದ್ದ ಮನವಿಗೆ ಸಚಿವಾಲಯ ಸಕಾರಾತ್ಮ ಕವಾಗಿ ಸ್ಪಂದಿಸಿದೆ.

ಮಧ್ಯಾಹ್ನ ಬದಲು ರಾತ್ರಿ 1 ಗಂಟೆಗೆ ವಿಮಾನ ಸೌಲಭ್ಯ ಮಾಡಿರುವುದಾಗಿ ಪತ್ರ ಬಂದಿದೆ. ಹೀಗಾಗಿ 12 ದಿನಗಳ ಯಾತ್ರೆ ಅವಧಿಯಲ್ಲಿ ಪ್ರತಿ ದಿನ ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಯಾತ್ರಾರ್ಥಿಗಳು ಯಾವುದೇ ಅಡತಡೆಯಿಲ್ಲದೆ ನಿರಾಳವಾಗಿ ಹಜ್ ಯಾತ್ರೆಗೆ ತೆರಳಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು. ಬೆಂಗಳೂರು ಭಾಗದ ನಗರ ಮತ್ತು ಜಿಲ್ಲೆ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರದ ಹಜ್ ಯಾತ್ರಿಗಳಿಗೆ ಮೊದಲಿದ್ದ ವಿಮಾನಯಾನ ಸಮಯವು ತೊಡಕಾಗಿತ್ತು.

ಈಗ ಸಮಸ್ಯೆ  ಬಗೆಹರಿದಿರುವುದರಿಂದ ಸೆಪ್ಟೆಂಬರ್ 3 ರಿಂದ ಯಾತ್ರೆಗೆ ತೆರಳಬಹುದು. ಹಾಗೆಯೇ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಯ ಯಾತ್ರಾರ್ಥಿಗಳು ಆ.29 ರಿಂದ ಗೋವಾ ವಿಮಾನ ನಿಲ್ದಾಣ ಹಾಗೂ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಹಜ್ ಯಾತ್ರಾರ್ಥಿಗಳು ಸೆ.2 ರಿಂದ ಹೈದರಾಬಾದ್ ವಿಮಾನ ನಿಲ್ದಾಣದಿಂದ ಯಾತ್ರೆಗೆ ತೆರಳುವರು.

ಯಾತ್ರೆಗೆ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಈ ಎರಡು ದಿನ ತರಬೇತಿ ನೀಡಲಿದ್ದು, ಈ ಸಲದ ಯಾತ್ರೆಯೂ ಸುಗಮ, ಸೌಖ್ಯದಿಂದ ಕೂಡಿರಲಿ ಎಂದು ಸಚಿವರು ಹಾರೈಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com