ಮಹದಾಯಿ ನೀರಿಗಾಗಿ ನಾಳೆ ಧಾರವಾಡ ಬಂದ್

ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಜೋಡಣೆ ಅನುಷ್ಠಾನಕ್ಕಾಗಿ ಆ.22 ರಂದು ಧಾರವಾಡ ಬಂದ್ ಆಚರಿಸಲು ಪಕ್ಷಾತೀತ ಹೋರಾಟ ಸಮಿತಿ ಕರೆ ನೀಡಿದೆ.
ಬಂದ್ (ಸಾಂದರ್ಭಿಕ ಚಿತ್ರ)
ಬಂದ್ (ಸಾಂದರ್ಭಿಕ ಚಿತ್ರ)

ಧಾರವಾಡ: ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಜೋಡಣೆ ಅನುಷ್ಠಾನಕ್ಕಾಗಿ ಆ.22 ರಂದು  ಧಾರವಾಡ ಬಂದ್ ಆಚರಿಸಲು ಪಕ್ಷಾತೀತ ಹೋರಾಟ ಸಮಿತಿ ಕರೆ ನೀಡಿದೆ. ಬೆಳಿಗ್ಗೆ 6 ರಿಂದ ಸಂಜೆ 6 ವರೆಗೆ ಬಂದ್ ನಡೆಯಲಿದೆ.

ಆ.24 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಿಯೋಗ ಪ್ರಧಾನಮಂತ್ರಿಯವರನ್ನು ಭೇಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಧಾರವಾಡ ಬಂದ್ ಮಹತ್ವದ್ದಾಗಿದೆ ಎಂದು ಸಮಿತಿ ಸಂಚಾಲಕ ಬಿ.ಡಿ ಹಿರೇಮಠ ಹೇಳಿದರು.

ದಕ್ಷಿಣ ಕರ್ನಾಟಕದ ಈ ಹಿಂದಿನ ಮಹತ್ವದ ಹೋರಾಟಗಳಲ್ಲಿ ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟವೇ ಹೋರಾಟಗಾರರ ಬಳಿ ಬಂದು ಸಮಸ್ಯೆಯನ್ನು ಆಲಿಸಿ ಪರಿಹಾರ ದೊರೆಕಿಸಿದೆ. ಆದರೆ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಎಲ್ಲರೂ ನಿರಾಸಕ್ತಿ ತೋರುತ್ತಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com