ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ
ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ

ಎತ್ತಿನಹೊಳೆಗೆ ಅಡ್ಡಿಪಡಿಸಲು ನಾನು ರಾಜಕಾರಣಿಯಲ್ಲ: ವೀರೇಂದ್ರ ಹೆಗ್ಗಡೆ

ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆ ಮೂಲಕ ಕುಡಿಯುವ ನೀರು ಒದಗಿಸಲು ನಾನು ಎಂದೂ ಅಡ್ಡಿಪಡಿಸಿಲ್ಲ. ವಿರೋಧವನ್ನೂ ವ್ಯಕ್ತಪಡಿಸಿಲ್ಲ. ಹಾಗೆ ಮಾಡಲು ನಾನು ರಾಜಕಾರಣಿ ಅಲ್ಲ.

ದೊಡ್ಡಬಳ್ಳಾಪುರ: ಬಯಲು ಸೀಮೆ ಜಿಲ್ಲೆಗಳಿಗೆ ಎತ್ತಿನ ಹೊಳೆ ಯೋಜನೆ ಮೂಲಕ ಕುಡಿಯುವ ನೀರು ಒದಗಿಸಲು ನಾನು ಎಂದೂ ಅಡ್ಡಿಪಡಿಸಿಲ್ಲ. ವಿರೋಧವನ್ನೂ ವ್ಯಕ್ತಪಡಿಸಿಲ್ಲ. ಹಾಗೆ ಮಾಡಲು ನಾನು ರಾಜಕಾರಣಿ ಅಲ್ಲ. ನನ್ನ ಮೇಲೆ ಸಿಟ್ಟು ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಹೇಳಿದ್ದಾರೆ.

ದೊಡ್ಡಬಳ್ಳಾಪುರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಐಡಿಬಿಐ ಬ್ಯಾಂಕ್ ಸಹಭಾಗಿತ್ವದಲ್ಲಿ 7001 ಪ್ರಗತಿ ಬಂಧುಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ವಿವಿಧ ಅನುದಾನಗಳ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಬಯಲು ಸೀಮೆ ಜಿಲ್ಲೆಗಳಿಗೆ ನೀರು ಬರದಂತೆ ನಾನು ಅಡ್ಡಿಪಡಿಸುತ್ತಿದ್ದೇನೆಂದು ಈ ಭಾಗದ ಜನ ತಪ್ಪಾಗಿ ತಿಳಿದುಕೊಂಡಿದ್ದಾರೆ. ಅದು ಸತ್ಯಕ್ಕೆ ದೂರವಾದ ಮಾತು, ಆದರೆ ಸ್ವಾಭಾವಿಕವಾಗಿ ನಾವು ನಮ್ಮ ಮಾತೃಭೂಮಿ, ನಮ್ಮ ಜೀವನದಿ ನೇತ್ರಾವತಿ ಮೇಲೆ ಕಾಳಜಿ ವಹಿಸಬೇಕಾದ್ದು ನಮ್ಮ ಧರ್ಮ. ಮೊದಲು ನಾವು ನಮ್ಮ ರಕ್ಷಣೆ ಮಾಡಿಕೊಂಡು ನಂತರ ಇತರರಿಗೆ ರಕ್ಷಣೆ ನೀಡಬೇಕು. ನಾವು ಕೇಳಿದ್ದು ಬಯಲು ಸೀಮೆಗೆ ಹೀಗೆ ನೀರು ಪೂರೈಸುತ್ತೀರಿ? ನೀರು ಹೇಗೆ ಬಳಸುತ್ತೀರಿ? ಎಷ್ಟು ನೀರು ಕೊಂಡೊಯ್ಯುತ್ತೀರಿ? ಎಷ್ಟು ನೀರು ನಿಮಗೆ ಕೊರತೆ ಬರುತ್ತೆ ಎಂಬ ಮಾಹಿತಿಯನ್ನು. ಅದೂ ತಪ್ಪು ಎಂದು ಭಾವಿಸಿದರೆ ಅದರಲ್ಲಿ ನನ್ನ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.

ಈಗಾಗಲೇ ಈ ಯೋಜನೆ ಕಾಮಗಾರಿ ಸಕಲೇಶಪುರದ ಬಳಿ ಭರದಿಂದ ಸಾಗುತ್ತಿದೆ. ಆದರೆ ನಾವು ಯಾರೂ ಅಲ್ಲಿಗೆ ಹೋಗಿ ವಿರೋಧ ವ್ಯಕ್ತಪಡಿಸಿಲ್ಲ. ಈ ಭಾಗದಿಂದ ನಮ್ಮ ಕ್ಷೇತ್ರಕ್ಕೆ ಅತಿ ಹೆಚ್ಚು ತರಕಾರಿ, ಹಾಲು ಕಳಿಸುತ್ತಾರೆ. ಬಯಲುಸೀಮೆಯಲ್ಲಿ ಹೆಚ್ಚಾಗಿ ಹಾಲು ಉತ್ಪಾದನೆಯಾಗುತ್ತಿದೆ. ಇಂತಹ ಭಾಗಕ್ಕೆ ನೀರು ಬರುವುದು ನಮಗೂ ಸಂತೋಷದ ಸಂಗತಿ ಎಂದರು.

Related Stories

No stories found.

Advertisement

X
Kannada Prabha
www.kannadaprabha.com