ಜೆಡಿಎಸ್-ಕಾಂಗ್ರೆಸ್ ವಾಗ್ವಾದ

ಶಾಸಕ ಗೋಪಾಲಯ್ಯ, ನಾಗಪುರ ವಾರ್ಡ್ ಜೆಡಿಎಸ್ ಅಭ್ಯರ್ಥಿ ಮತ್ತು ಬೆಂಬಲಿಗರು ತಮ್ಮ ಮನೆಯ ಮುಂದೆ ಗುರುವಾರ ತಡರಾತ್ರಿವರೆಗೂ ಧರಣಿ ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಶಾಸಕ ಗೋಪಾಲಯ್ಯ, ನಾಗಪುರ ವಾರ್ಡ್ ಜೆಡಿಎಸ್ ಅಭ್ಯರ್ಥಿ ಮತ್ತು ಬೆಂಬಲಿಗರು ತಮ್ಮ ಮನೆಯ ಮುಂದೆ ಗುರುವಾರ ತಡರಾತ್ರಿವರೆಗೂ ಧರಣಿ ನಡೆಸಿ ಮನೆಗೆ ನುಗ್ಗಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದ ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆ ಇರುವ ಕಾರಣ ನನ್ನ ತಮ್ಮ ದಿ. ನೆ.ಲ. ರವಿಶಂಕರ್ ಅವರ 2ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮ ನಡೆಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲಾಗಿತ್ತು, ಅದರಂತೆ ಕಾರ್ಯಕ್ರಮ ನಡೆಸಲಾಗಿದೆ. ಆದರೆ, ಕ್ಷೇತ್ರದ ಶಾಸಕ, ವಾರ್ಡ್ 67ರ ನಾಗಪುರ ಜೆಡಿಎಸ್ ಅಭ್ಯರ್ಥಿ ಭದ್ರೇಗೌಡ ಮತ್ತು ಬೆಂಬಲಿಗರು ಸೀರೆ, ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿ ದಾಳಿ ನಡೆಸಿ ಗೂಂಡಾಗಿರಿ ಪ್ರದರ್ಶನ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ನಾಗಪುರ ವಾರ್ಡ್‍ನ ಮಹಿಳಾ ಕಾರ್ಯಕರ್ತೆಯೊಬ್ಬರು ಪುಣ್ಯತಿಥಿ ಕಾರ್ಯಕ್ರಮ ಮುಗಿಸಿ ಬೋವಿಪಾಳ್ಯದಲ್ಲಿರುವ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಸೀರೆ, ಹಣ ಹಂಚಿಕೆ, ನಕಲಿ ವೋಟರ್ ಐಡಿ ಸೃಷ್ಟಿ
ಆರೋಪಕ್ಕೆ ಪ್ರತ್ಯುತ್ತರ ಎಂಬಂತೆ ಸುದ್ದಿಗೋಷ್ಠಿ ನಡೆಸಿದ ಮಹಾಲಕ್ಷ್ಮಿ ಬಡಾವಣೆ ಶಾಸಕ ಗೋಪಾಲಯ್ಯ, ನಾಗಪುರ ವಾರ್ಡ್‍ನಲ್ಲಿ ನರೇಂದ್ರಬಾಬು ಅವರ ತಮ್ಮ ಮಹೇಶ್‍ಕುಮಾರ್  ಸೋಲುವ ಭೀತಿ ಇದ್ದು, ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು
ಮಾಡುತ್ತಿದ್ದಾರೆ ಎಂದು ಹೇಳಿದರು. ನರೇಂದ್ರಬಾಬು ಅವರು ನೆಲಮಂಗಲದ ಎರಡು ಸಾವಿರಕ್ಕೂ ಹೆಚ್ಚಿನ ಜನರಿಗೆ ಅಕ್ರಮವಾಗಿ ಮತದಾರರ ಚೀಟಿ ಮಾಡಿಸಿಕೊಟ್ಟಿದ್ದಾರೆ. ಹಾಗಿದ್ದೂ ಗೆಲ್ಲಲು ಸಾಧ್ಯವಿಲ್ಲವೆಂದು ತಿಳಿದು ಸೀರೆ, ಹಣ ಹಂಚಿಕೆ ಮಾಡುತ್ತಿದ್ದಾರೆ. ಅವರ ಮನೆ ಮುಂದೆ ದಾಂಧಲೆ ಮಾಡಿದ್ದೇವೆಂಬ ಆರೋಪ ಸೃಷ್ಟಿಸಿದ್ದಾರೆ. ಕ್ಷೇತ್ರದಲ್ಲಿ ಅವರೇ ಗೂಂಡಾಗಳಂತೆ ವರ್ತನೆ ಮಾಡುತ್ತಿದ್ದು, ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com