ವಾರಾಂತ್ಯಕ್ಕೆ ಮತ್ತೆ ವೈದ್ಯ ಸೀಟು ಹಂಚಿಕೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಎರಡನೇ ಸುತ್ತಿನ ಮೆಡಿಕಲ್, ಡೆಂಟಲ್ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ ಕೊನೆ ವಾರದಲ್ಲಿ ನಡೆಯಲಿದೆ. ಅದೇ ರೀತಿ ಕಾಮೆಡ್-ಕೆ ನಡೆಸುವ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಎರಡು ದಿನ ಮುಂದೂಡಲ್ಪಟ್ಟಿದೆ...
ವಾರಾಂತ್ಯಕ್ಕೆ ಮತ್ತೆ ವೈದ್ಯ ಸೀಟು ಹಂಚಿಕೆ (ಸಾಂದರ್ಭಿಕ  ಚಿತ್ರ)
ವಾರಾಂತ್ಯಕ್ಕೆ ಮತ್ತೆ ವೈದ್ಯ ಸೀಟು ಹಂಚಿಕೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಎರಡನೇ ಸುತ್ತಿನ ಮೆಡಿಕಲ್, ಡೆಂಟಲ್ ಸೀಟು ಹಂಚಿಕೆ ಪ್ರಕ್ರಿಯೆ ಆಗಸ್ಟ್ ಕೊನೆ ವಾರದಲ್ಲಿ ನಡೆಯಲಿದೆ. ಅದೇ ರೀತಿ ಕಾಮೆಡ್-ಕೆ ನಡೆಸುವ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಎರಡು ದಿನ ಮುಂದೂಡಲ್ಪಟ್ಟಿದೆ.

ಅಖಿಲ ಭಾರತೀಯ ಮಟ್ಟದಲ್ಲಿ ನಡೆಯುವ ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಆ.23ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕದ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಂತರ ನಡೆಸಲು ತೀರ್ಮಾನಿಸಲಾಗಿದೆ. ಈ ನಡುವೆಯೇ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಕಾಮೆಡ್-ಕೆ ಎರಡನೇ ಸುತ್ತಿನ
ಕೌನ್ಸೆಲಿಂಗ್ ಅನ್ನು ಆ.25ರಿಂದ ಆರಂಭಿಸುವ ಬದಲು ಆ.27ರಿಂದ ಆರಂಬಿsಸುತ್ತಿದೆ. ಎಐಪಿಎಂಟಿಯಲ್ಲಿ ಸೀಟು ಸಿಗುವ ಸಾಧ್ಯತೆ ಇರುವುದರಿಂದ ಸೀಟು ವಾಪಾಸ್ ಮಾಡಲು
ಅವಕಾಶ ವಿಸ್ತರಿಸಬೇಕೆಂದು ಅನೇಕ ವಿದ್ಯಾರ್ಥಿಗಳು ಕಾಮೆಡ್-ಕೆಗೆ ಕೋರಿಕೆ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ದಿನಗಳನ್ನು ಪರಿಷ್ಕರಿಸಲಾಗಿದೆ. ಪರಿಷ್ಕೃತ ದಿನಾಂಕದಂತೆ ಆ.27ರಿಂದ 29ರವರೆಗೆ ನಡೆಯಲಿದ್ದು, ಸದ್ಯ 133 ಮೆಡಿಕಲ್ ಸೀಟು ಲಭ್ಯವಿದೆ. ಆ.23ರಂದು ಅಖಿಲ ಭಾರತೀಯ ಮಟ್ಟದ ಸೀಟು ಹಂಚಿಕೆ ಪ್ರಕ್ರಿಯೆ ಮುಗಿದ ನಂತರ ಇನ್ನಷ್ಟು ಸೀಟುಗಳು ಕೌನ್ಸೆಲಿಂಗ್‍ಗೆ ಲಭ್ಯವಾಗಲಿದೆ ಎಂದು ಕಾಮೆಡ್-ಕೆ ತಿಳಿಸಿದೆ.

ರೀ ರ್ಯಾಂಕ್: ಕಾಮೆಡ್-ಕೆ ಈ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದ ಇಂಗ್ಲಿಷ್ ಪರೀಕ್ಷೆಯ ಅಂಕವನ್ನು ಸೀಟು ಹಂಚಿಕೆಗೆ ಮಾನದಂಡವಾಗಿಸಬಾರದೆಂದು  ಹೈ ಕೋರ್ಟ್ ನಿರ್ದೇಶನ ನೀಡಿದ್ದರಿಂದ ಈ ಬಾರಿ ಸುಮಾರು 68 ವಿದ್ಯಾರ್ಥಿಗಳಿಗೆ ರೀ ರ್ಯಾಂಕ್ ನೀಡಲು ನಿರ್ಧರಿಸಲಾಗಿ ದೆ. ಈ ರೀತಿಯಾಗಿ ರ್ಯಾಂಕ್ ನಡೆಸಲು ಅರ್ಹತೆ ಪಡೆದವರು ಎರಡನೇ ಸುತ್ತಿನಲ್ಲಿ ಲಭ್ಯವಿರುವ ಸೀಟು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕಾಮೆಡ್ -ಕೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com