ಧಾರವಾಡ ಬಂದ್ ಪೂರ್ಣ

ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವಂತೆ ಆಗ್ರಹಿಸಿ ವಿವಧ ಸಂಘಟನೆಗಳಿಂದ ಶನಿವಾರ ನಡೆದ ಧಾರವಾಡ ಬಂದ್ ಸಂಪೂರ್ಣವಾಗಿದೆ...
ಧಾರವಾಡ ಬಂದ್ ನ ಚಿತ್ರ
ಧಾರವಾಡ ಬಂದ್ ನ ಚಿತ್ರ

ಧಾರವಾಡ: ಮಹದಾಯಿ ನೀರನ್ನು ಮಲಪ್ರಭೆಗೆ ಹರಿಸುವಂತೆ ಆಗ್ರಹಿಸಿ ವಿವಧ ಸಂಘಟನೆಗಳಿಂದ ಶನಿವಾರ ನಡೆದ ಧಾರವಾಡ ಬಂದ್ ಸಂಪೂರ್ಣವಾಗಿದೆ.
ಬಂದ್ ನಿಂದಾಗಿ ನಗರ ಹಾಗೂ ಹೊರ ವಲಯದ ಎಲ್ಲಾ ಅಂಗಡಿ ಮುಂಗಟ್ಟುಗಳು, ಹೋಟೆಲ್, ಬ್ಯಾಂಕ್, ಎಟಿಎಂ, ಸಿನಿಮಾ ಮಂದಿರ, ಪೆಟ್ರೋಲ್ ಬಂಕ್, ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಸ್ವಯಂಪ್ರೇರಣೆಯಿಂದ  ಸ್ಥಗಿತವಾಗಿದ್ದವು. ಅಲ್ಲದೆ ಜನರ ಓಡಾಟವೂ ವಿರಳವಾಗಿತ್ತು.

ಬಂದ್ ಮಾಹಿತಿ ಇಲ್ಲದೆ ಧಾರವಾಡಕ್ಕೆ ಆಗಮಿಸಿದವರು ಬಸ್ ಗಳೂ ಇಲ್ಲದೇ, ನಡೆದೇ ಊರುಗಳತ್ತ ಹೆಜ್ಜೆ ಹಾಕುತ್ತಿದ್ದರು. ರಸ್ತೆಗಳಲ್ಲಿ ಎತ್ತಿನ ಬಂಡಿ, ಬೈಕ್ ಗಳನ್ನು ಅಡ್ಡವಾಗಿ ನಿಲ್ಲಿಸಿ ರೈತರು ಸಂಚಾರ ಸ್ಥಗಿತಗೊಳಿಸಿದರು. ಉತ್ತರ ಕರ್ನಾಟಕದ ಹಲವು ಮಠಾಧೀಶರ ನೈತೃತ್ವದಲ್ಲಿ ಹತ್ತಾರು ಸಂಘಟನೆಗಳು ಕಲಾಭವನದಲ್ಲಿ ಒಟ್ಟಗೂಡಿ ಹೋರಾಟಕ್ಕೆ ಚಾಲನೆ ನೀಡಿದವು. ರಾಷ್ಟ್ರ ಧ್ವಜಾರೋಹಣ ಮಾಡಿ ಹೋರಾಟಕ್ಕೆ ಜಯವಾಗಲಿ ಎಂದು ಮುಖಂಡರು ಘೋಷಣೆಯಿಟ್ಟರು. ಮಹದಾಯಿ ನೀರು ಹರಿಸುವಂತೆ ಜಿಲ್ಲಾಧಿಕಾರಿ ಕಚೇರಿವರೆಗೂ ಬೃಹತ್ ಪ್ರತಿಭಟನೆ ನಡೆಯಿತು. ದಾರಿಯುದ್ದಕ್ಕೂ ಸರ್ಕಾರಗಳ ವಿರುದ್ಧ ಘೋಷಣೆ ಕೂಗಲಾಯಿತು. ಐದು ಪ್ರಮುಖ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com