ಕಾಂಗ್ರೆಸ್‍ನಲ್ಲಿ ಈಗ ಸೋಲಿನ ಕನಿಷ್ಠ ಅಂತರದ ಲೆಕ್ಕಾಚಾರ
ಬೆಂಗಳೂರು: ಬಿಬಿಎಂಪಿ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ವಲಯದಲ್ಲಿ ಚರ್ಚೆ ನಡೆಯುವುದಕ್ಕೆ ಮುನ್ನವೇ ಸೋಲಿನ ಅಂತರದ ಬಗ್ಗೆ ಕಾಂಗ್ರೆಸ್ ನಲ್ಲಿ ಲೆಕ್ಕಾಚಾರ ಆರಂಭವಾಗಿದ್ದು, 100 ರಿಂದ 1000 ಮತಗಳ ಅಂತರದಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ಈ ರೀತಿಯಲ್ಲಿ ಒಟ್ಟು 27 ಸ್ಥಾನಗಳನ್ನು ಕಳೆದುಕೊಂಡಿರುವುದು ಸಿಎಂ ಸಿದ್ದರಾಮಯ್ಯ ಅವರಿಗೆ ಮುಳುವಾಗಿ ಪರಿಣಮಿಸಿದೆ.
ಹೌದು, ಪಕ್ಷದ ಸೋಲಿನ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಬೇಸರಗೊಂಡಿದ್ದಾರೆ. ಜತೆಗೆ ಸೋಲಿಗೆ ಕಾರಣಗಳೇನು ಎಂಬ ಬಗ್ಗೆ ಯೂ ಚರ್ಚೆ ನಡೆಯುತ್ತಿದೆ. ಈ ಹಂತದಲ್ಲಿ ಸಿದ್ದರಾಮಯ್ಯನವರ ಥಿಂಕ್ ಟ್ಯಾಂಕ್ ಮತದಾನದ ಬಳಿಕ ಮಾಹಿತಿ ಸಂಗ್ರಹಿಸಿದ್ದು, ಕೆಲವೇ ಮತಗಳ ಅಂತರದಲ್ಲಿ ಕಾಂಗ್ರೆಸ್ ಹಲವು ಸ್ಥಾನ ಕಳೆದುಕೊಂಡಿರುವುದು ಬೆಳಕಿಗೆ ಬಂದಿದೆ.
ಕಾಂಗ್ರೆಸ್ ನ ಈ ನಷ್ಟದ ಲಾಭ ನೇರವಾಗಿ ಬಿಜೆಪಿಗೆ ಲಭಿಸಿದೆ. ಕಡಿಮೆ ಅಂತರದಲ್ಲಿ ಒಟ್ಟು 24 ಸ್ಥಾನಗಳನ್ನು ಕಾಂಗ್ರೆಸ್ ಬಿಜೆಪಿಗೆ ತಟ್ಟೆಯಲ್ಲಿಟ್ಟುಕೊಟ್ಟಿದೆ. 2 ಸ್ಥಾನಗಳು ಜೆಡಿಎಸ್, 1 ಎಸ್ ಡಿಪಿಐ ಪಾಾಗಿದ್ದರೆ, 3 ವಾರ್ಡ್ ಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷವನ್ನು ಸೋಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ