ಹಳಿ ತಪ್ಪಿದ ಪ್ರಶಾಂತಿ ಎಕ್ಸ್ ಪ್ರೆಸ್

ಭುವನೇಶ್ವರದಿಂದ ಆಗಮಿಸಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲು ನಗರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಪ್ರವೇಶಿಸುತ್ತಿದ್ದ ವೇಳೆ ಹಳಿ ತಪ್ಪಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಘಟನೆಯಿಂದ ನಗರದಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ನಾಲ್ಕೈದು ರೈಲುಗಳ...
ಕಿತ್ತುಹೋದ ಹಳಿ ಸರಿಪಡಿಸುತ್ತಿರುವ ರೈಲ್ವೆ ಸಿಬ್ಬಂದಿ
ಕಿತ್ತುಹೋದ ಹಳಿ ಸರಿಪಡಿಸುತ್ತಿರುವ ರೈಲ್ವೆ ಸಿಬ್ಬಂದಿ

ಬೆಂಗಳೂರು: ಭುವನೇಶ್ವರದಿಂದ ಆಗಮಿಸಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲು ನಗರ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಗೆ ಪ್ರವೇಶಿಸುತ್ತಿದ್ದ ವೇಳೆ ಹಳಿ ತಪ್ಪಿದ್ದು ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ಘಟನೆಯಿಂದ ನಗರದಿಂದ ವಿವಿಧ ನಗರಗಳಿಗೆ ತೆರಳಬೇಕಿದ್ದ ನಾಲ್ಕೈದು ರೈಲುಗಳ ತಡವಾಗಿ ಸಂಚರಿಸಿದವು.

ಮಧ್ಯಾಹ್ನ 12 ಗಂಟೆಗೆ ಆಗಮಿಸಬೇಕಿದ್ದ ಪ್ರಶಾಂತಿ ಎಕ್ಸ್ ಪ್ರೆಸ್ ರೈಲು ಸುಮಾರು 15 ನಿಮಿಷ ವಿಳಂಬವಾಗಿ ನಗರ ರೈಲು ನಿಲ್ದಾಣ ಪ್ರವೇಶಿಸಿತ್ತು. ನಿಲ್ದಾಣದ ಮೂರನೇ ಪ್ಲಾಟ್ ಫಾರ್ಮ್ ನಲ್ಲಿ ನಿಲ್ಲಬೇಕಿದ್ದ ರೈಲು ನಿಧಾನವಾಗಿ ಸಂಚರಿಸುತ್ತಿದ್ದ ವೇಳೆ ರೈಲಿನ ಎಂಜಿನ್ ಹಾಗೂ ಎಂಜಿನ್ ಹಿಂಭಾಗದ ಎಸ್ಎಲ್ಆರ್ ಕೋಚ್ ಗಳು ಹಳಿ ತಪ್ಪಿವೆ. ಆದರೆ, ಘಟನೆಯಲ್ಲಿ ಲೋಕೋ ಪೈಲಟ್ ಗಳಿಗಾಗಲಿ ಕೋಚ್ ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ.

ಏಕಾಏಕಿ ನಿಲುಗಡೆ: ಪ್ಲಾಟ್ ಫಾರ್ಮ್ ನಲ್ಲಿ ರೈಲು ನಿಧಾನವಾಗಿ ನಿಲುಗಡೆಯಾಗುತ್ತದೆ. ಆದರೆ, ಇಂದು ಮಾತ್ರ ಏಕಾಏಕಿ ನಿಂತು ಹೋಯಿತು. ಅಲ್ಲದೇ ಅಸಹಜವಾದ ಸದ್ದು ಕೇಳಿತು. ರೈಲಿನಿಂದ ಕೆಳಗಿಳಿದು ನೋಡಿದಾಗಲೇ ಎಂಜಿನ್ ಹಾಗೂ ಮತ್ತೊಂದು ಬೋಗಿ ಹಳಿ ತಪ್ಪಿರುವುದು ಗೊತ್ತಾಯಿತು ಎಂದು ಪ್ರಯಾಣಿಕರೊಬ್ಬರು ಸುದ್ದಿಗಾರರಿಗೆ ತಿಳಿಸಿದರು.

ರೈಲು ಹಳಿ ತಪ್ಪಿರುವ ಸುದ್ದಿ ತಿಳಿದು ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಹಳಿ ಸರಿಪಡಿಸುವ ಕೆಲಸ ಮಾಡಿದರು. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಹಳಿ ಸರಿಪಡಿಸುವ ಕಾರ್ಯ ನಡೆದ ಕಾರಣ ಪ್ಲಾಟ್ ಫಾರ್ಮ್ 3ರಿಂದ ಹೊರಡಬೇಕಿದ್ದ ಬೃಂದಾವನ ಎಕ್ಸ್ ಪ್ರೆಸ್, ಕುರ್ಲಾ ಎಕ್ಸ್ ಪ್ರೆಸ್, ಭುವನೇಶ್ವರ್ ಎಕ್ಸ್ ಪ್ರೆಸ್ ಸೇರಿದಂತೆ ಇದರೆ ರೈಲುಗಳು ಸುಮಾರು 1 ತಾಸು ತಡವಾಗಿ ಸಂಚರಿಸಿದವು. ರೈಲು ಹಳಿ ತಪ್ಪಿರುವ ಬಗ್ಗೆ ಸುರಕ್ಷತಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com