
ಬೆಂಗಳೂರು: ಅಪಾರ್ಟ್‍ಮೆಂಟ್‍ನಿಂದ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್ ಎಸ್‍ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಳೆ ಮದ್ರಾಸ್ ರಸ್ತೆ ನಿವಾಸಿ ಇಶಾ ಹೊಂಡಾ (25) ಮೃತ ಯುವತಿ. ಮೂಲತಃ ಮುಂಬೈ ಮೂಲದ ಇಶಾ ಎಚ್‍ಎಸ್‍ಆರ್ ಲೇಔಟ್‍ನ ಶೋಭಾ ಅಪಾರ್ಟ್‍ಮೆಂಟ್‍ನ 13ನೇ ಮಹಡಿಯಲ್ಲಿ ವಾಸಿಸುತ್ತಿದ್ದರು.
ಭಾನುವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ 13ನೇ ಮಹಡಿಯಿಂದ ಬಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಳೇ ಏರ್ ಪೋರ್ಟ್ ರಸ್ತೆಯ ಖಾಸಗಿ ಬ್ಯಾಂಕ್‍ವೊಂದರಲ್ಲಿ ಕಳೆದ ಮೂರೂವರೆ ವರ್ಷದಿಂದ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಇಶಾ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಆತ್ಮಹತ್ಯೆಗೆ ಕಾರಣ ಇರಬಹುದೆಂದು ಡಿಸಿಪಿ ರೋಹಿಣಿ
ಕಠೋಚ್ ಹೇಳಿದರು.
Advertisement