ಲೋಕಾಯುಕ್ತ ಬಿಲ್ : ಸಚಿವರ ದ್ವಂದ್ವ ಹೇಳಿಕೆ

ಲೋಕಾಯುಕ್ತ ಕಾಯ್ದೆ ವಿಚಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ...
ಸಚಿವ ಟಿ.ಬಿ.ಜಯಚಂದ್ರ
ಸಚಿವ ಟಿ.ಬಿ.ಜಯಚಂದ್ರ

ಬೆಂಗಳೂರು: ಲೋಕಾಯುಕ್ತ ಕಾಯ್ದೆ ವಿಚಾರದಲ್ಲಿ ಕಾನೂನು ಮತ್ತು ಸಂಸದೀಯ  ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಮತ್ತೊಂದು ಗೊಂದಲ ಸೃಷ್ಟಿ ಮಾಡಿದ್ದಾರೆ.

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ದ್ವಂದ್ವ ಹೇಳಿಕೆ ನೀಡಿದ ಅವರು, ಜನ ಬಯಸಿದರೆ  ದುರಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳಲು ಲೋಕಾಯುಕ್ತಕ್ಕೆ ಇರುವ ಅಧಿಕಾರ ಮೊಟಕು  ಮಾಡುವುದಿಲ್ಲ ಎಂದು ಹೇಳುವುದರ ಜತೆಗೆ, ಮೂವರು ಲೋಕಾಯುಕ್ತರನ್ನು  ಸೃಷ್ಟಿಸುವುದಕ್ಕೆ ಅನುಕೂಲವಾಗುವ ರೀತಿಯಲ್ಲಿ ಲೋಕ್‍ಪಾಲ್ ಮಾದರಿಯಲ್ಲಿ ಹೊಸ ಕಾಯ್ದೆ  ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.  ಸಚಿವರ ಈ ಹೇಳಿಕೆ ಈಗಾಗಲೇ ಗೊಂದಲದ ಗೂಡಾಗಿರುವ ಲೋಕಾಯುಕ್ತ ಸಂಸ್ಥೆಯಲ್ಲಿ ಇನ್ನಷ್ಟು ಗಲಿಬಿಲಿಯುಂಟು  ಮಾಡಿದ್ದು, ಸರ್ಕಾರದ ಮುಂದಿನ ನಡೆ ಏನು ? ಎಂಬ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಸಚಿವ ಜಯಚಂದ್ರ ಹೇಳಿದ್ದೇನು?:

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಜಯಚಂದ್ರ, ರಾಜ್ಯ ಸರ್ಕಾರ  ಕಪಾಲ್  ಕಾಯ್ದೆ ಜಾರಿಗೆ ತರುತ್ತದೆ. ಆ ಕಾಯ್ದೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಒಪ್ಪಿಗೆ   ಪಡೆಯುತ್ತಿದ್ದಂತೆ ಈಗಿರುವ ಕಾಯ್ದೆ ರದ್ದಾಗುತ್ತದೆ. ಈ ಸಂಬಂಧ ಚರ್ಚೆ ನಡೆಸುವುದಕ್ಕೆ, ಸಂಸತ್  ಮಾದರಿಯಲ್ಲಿ, ನನ್ನ ಅಧ್ಯಕ್ಷಯತೆಯಲ್ಲೇ ಒಂದು ಸಮಾಲೋಚನಾ ಸಮಿತಿ ರಚಿಸಲಾಗಿದ್ದು,  ಪ್ರತಿಪಕ್ಷ ಮುಖಂಡರ ಜತೆಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

ನಾವು ಲೋಕ್‍ಪಾಲ್ ಮಾದರಿಯಲ್ಲಿ ಕಾಯ್ದೆ ರಚಿಸುತ್ತೇವೆ. ಈಗಿರುವ ಕಾಯ್ದೆ ಪ್ರಕಾರ  ಕಾಯುಕ್ತ ಸಂಸ್ಥೆಗೆ ಭ್ರಷ್ಟಾಚಾರದ ಜತೆಗೆ ದುರಾಡಳಿತ ದ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ. ಆದರೆ, ಲೋಕ್ ಪಾಲ್ ಪ್ರಕಾರ ಲೋಕಾಯುಕ್ತರಿಗೆ ದುರಾಡಳಿತದ ವಿರುದ್ಧ  ರಮ ತೆಗೆದುಕೊಳ್ಳುವ ಅಧಿಕಾರ ಇರುವು ದಿಲ್ಲ. ಪ್ರತಿಪಕ್ಷ ನಾಯಕರ ಜತೆಗೆ ನಾನು  ಗಾಗಲೇ  ಡೆಸಿರುವ ಪ್ರಾಥಮಿಕ ಚರ್ಚೆ ಪ್ರಕಾರ, ಅವರಿಗೂ ಲೋಕಾಯುಕ್ತಕ್ಕೆ ದುರಾಡಳಿತದ ವಿರುದಟಛಿ ಕ್ರಮ ತೆಗೆದುಕೊಳ್ಳುವ ಅಧಿ ಕಾರ ಬೇಕಿಲ್ಲ. ಆದರೆ, ರಾಜ್ಯದ ಜನ ದುರಾಡಳಿತದ  ರುದ್ಧ ಲೋಕಾಯುಕ್ತ ರಿಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಬೇಕು ಎಂದು  ರತಿಪಾದಿಸುತ್ತಿದ್ದಾರೆ. ಈ ಬಗ್ಗೆ ಇನ್ನೂ ಚರ್ಚೆ ನಡೆಸುತ್ತೇವೆ ಎಂದರು. 

ಕಾನೂನು ಬದಲಾವಣೆ: ಲೋಕಾಯುಕ್ತ ಕಾಯ್ದೆ ಬದಲಾಯಿಸುವುದಕ್ಕೆ ಸರ್ಕಾರ  ತೆಗೆದುಕೊಂಡಿರುವ  ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದು ಜಯಚಂದ್ರ ಹೇಳಿದರು. ಈ ಬಗ್ಗೆ  ಹಿಂದೆ ರಚಿಸಿದ್ದ ಕರಡನ್ನು ಕೈ ಬಿಡಲಾಗಿದೆ. ಅದರ ಬದಲು ಮತ್ತೊಂದು ಕಾಯ್ದೆ ಸಿದ್ದಪಡಿಸಲಾಗಿದೆ  ಎಂದರು. 

ಸರ್ಕಾರ ಹೊಸದಾಗಿ ರಚಿಸಿರುವ ಕಾಯ್ದೆಯಲ್ಲಿ ಮೂವರು ಲೋಕಾಯುಕ್ತರನ್ನು ನೇಮಕ  ಮಾಡುವುದಕ್ಕೆ ಅವಕಾಶವಿದೆ. ಜತೆಗೆ ಅಗತ್ಯ ಬಿದ್ದಷ್ಟು ಉಪಲೋಕಾಯುಕ್ತರನ್ನು ನೇಮಕ ಮಾಡಬಹುದು ಎಂದು ವಿವರಿಸಿದರು. ಈ ರೀತಿ ಒಂದಕ್ಕಿಂತ ಹೆಚ್ಚು ಲೋಕಾಯುಕ್ತರು  ಹಾಗೂ  ಅಗತ್ಯವಿದ್ದಷ್ಟು ಉಪಲೋಕಾಯುಕ್ತರ ನೇಮಕಕ್ಕೆ ಸರ್ಕಾರ ಅನುಸರಿಸುವ ಮಾನದಂಡವೇನು? ಐಎಎಸ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಮಾತ್ರ ಅವರು  ಉತ್ತರಿಸಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com