ಬುಧವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಧು ಬಂಗಾರಪ್ಪ.
ಬುಧವಾರ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಮಧು ಬಂಗಾರಪ್ಪ.

ಜೆಡಿಎಸ್ ಭಿನ್ನಮತಕ್ಕೆ ತಾತ್ಕಾಲಿಕ ತೆರೆ

ಭುಗಿಲೆದ್ದಿದ್ದ ಜೆಡಿಎಸ್ ಭಿನ್ನಮತಕ್ಕೆ ಬುಧವಾರ ತಾತ್ಕಾಲಿಕ ತೆರೆ ಬಿದ್ದಿದೆ. ನಗರದಲ್ಲಿ ಬುಧವಾರ ನಡೆದ ಶಾಸಕಾಂಗ...

ಬೆಂಗಳೂರು: ಭುಗಿಲೆದ್ದಿದ್ದ ಜೆಡಿಎಸ್ ಭಿನ್ನಮತಕ್ಕೆ ಬುಧವಾರ ತಾತ್ಕಾಲಿಕ ತೆರೆ ಬಿದ್ದಿದೆ.   ನಗರದಲ್ಲಿ ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಅತೃಪ್ತ ಶಾಸಕರು ಬಹಿರಂಗವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ದ್ದು, ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಂದ ಸ್ಪಷ್ಟನೆಯನ್ನೂ ಪಡೆದಿದ್ದಾರೆ.

ದಿನವಿಡೀ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷರ ತಪ್ಪುಗಳು ಹೆಚ್ಚಿನ ರೀತಿಯಲ್ಲಿ ಚರ್ಚೆ ಯಾಗಿದ್ದು,  ಅದನ್ನು ಒಪ್ಪುವ ಚರ್ಚೆಗಳು ನಡೆದಿಲ್ಲ. ಹೀಗಾಗಿ ದೇವೇಗೌಡರು ಪಕ್ಷದೊಳಗಿನ ಅಶಿಸ್ತು  ಸರಿಪಡಿಸಲು ಶಿಸ್ತು ಸಮಿತಿ ರಚಿಸುವ ಭರವಸೆ ನೀಡಿದ್ದಾರೆ. ಶಾಸಕರಿಗೆ ತಿಳಿ ಹೇಳಿ ಭಿನ್ನಮತ  ಮಸ್ಯೆಗೆ ತಾತ್ಕಾಲಿಕ ಉಪಶಮನ ನೀಡಿದ್ದಾರೆ.

ಶಮನವಾಗದ ಅಸಮಾಧಾನ: ಅತೃಪ್ತರ ದೂರುಗಳು ಪಕ್ಷದ ರಾಜ್ಯಾಧ್ಯಕ್ಷ  ಕುಮಾರಸ್ವಾಮಿ ವಿರುದ್ಧವೇ ಆಗಿದ್ದರಿಂದ ಗೌಡರು ಇಕ್ಕಟ್ಟಿಗೆ ಸಿಲುಕಿದ್ದರು. ಜತೆಗೆ ಶಾಸಕರ ದೂರುಗಳಿಗೆ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೌನ ವಹಿಸಿದ್ದರೇ ವಿನಃ ಕ್ಷಮೆಯಾಚಿ ಸಲಿಲ್ಲ. ಇದರಿಂದ ಕೆಲವು ಶಾಸಕರಲ್ಲಿದ್ದ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದ್ದು,  ಭಿನ್ನಮತ ಭಾಗಶಃ ಮಾತ್ರ ಪರಿಹಾರವಾದಂತಾಗಿದೆ. ಮುಂದೆ ಚುನಾವಣೆ ಗಳಿರುವುದರಿಂದ ಗೌಡರ ಕೋರಿಕೆ ಮತ್ತು ಸೂಚನೆ ಮೇರೆಗೆ ಸದ್ಯಕ್ಕೆ ಮೌನ ವಹಿಸಲು ಅಸಮಾಧಾನಿತ ಶಾಸಕರು ನಿರ್ಧರಿಸಿದ್ದಾರೆ. ಒಟ್ಟಾರೆ ಸಭೆಯಲ್ಲಿ ಭಿನ್ನಮತ ವಿಚಾರ  ಬಿಟ್ಟರೆ  ಬೇರೆ ಚರ್ಚೆಗಳು ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. 

ಬಿಬಿಎಂಪಿ ಮೈತ್ರಿಗೆ ಧಕ್ಕೆ ಇಲ್ಲ: ಭಿನ್ನಾಭಿಪ್ರಾಯದ ಬಗ್ಗೆ ಪ್ರತಿಕ್ರಿಯಿಸಿದ ಗೌಡರು, ಮೈತ್ರಿ  ವಿಚಾರವಾಗಿ ಸೂಚನೆ ನೀಡಿದ್ದು ನಿಜ. ಆದರೆ ಕುಮಾರಸ್ವಾಮಿ, ಬೇಡ, ಸ್ವಂತವಾಗಿ ಸ್ಪರ್ಧಿಸೋಣ ಎಂದಿದ್ದಕ್ಕೆ ಬೇಡ ಎಂದಿದ್ದೆ. ಅದು ಮುಗಿದ ಕಥೆ ಎಂದು ತೆರೆ ಎಳೆದರು.  ಇದಾದ ನಂತರ ಸಿಟ್ಟಿಗೆದ್ದ ಚಲುವರಾಯಸ್ವಾಮಿ, ನಮ್ಮನ್ನು ಕಾಂಗ್ರೆಸ್ ಏಜೆಂಟ್ ಎಂದು  ಮಾಧ್ಯಮಗಳಲ್ಲಿ ಬಹಿರಂಗವಾಗಿ ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಆಗ  ಕುಮಾರಸ್ವಾಮಿ, ಅಂಥ  ಹೇಳಿಕೆ ನೀಡಿಲ್ಲ. ಬೇಕಿದ್ದರೆ ದಾಖಲೆಗಳನ್ನು ನೀಡುತ್ತೇನೆ ಎಂದು  ಸಮಾಜಾಯಿಷಿ ನೀಡಿದರು. ಶಾಸಕ ಜಮೀರ್ ಅಹಮ್ಮದ್ ಖಾನ್, ಕುಮಾರಸ್ವಾಮಿ     ಹೇಳಿಕೆಗಳು ಸರಿ ಇಲ್ಲ. ಪಕ್ಷಕ್ಕಾಗಿ ದುಡಿಯುವ ನಮ್ಮನ್ನೇಕೆ ಅಪರಾಧಿ ಮಾಡುತ್ತೀರಿ?  ಇದರಿಂದ  ನಮಗೇನು ಲಾಭ ಎಂದು ಎದೆತಟ್ಟಿಕೊಂಡು ಕೂಗಾಡಿದರು. ಇಷ್ಟಾದರೂ    ಕುಮಾರಸ್ವಾಮಿ ಮೌನದಲ್ಲೇ ಮುಳುಗಿದ್ದರು. ಅಂತಿಮವಾಗಿ ದೇವೇಗೌಡರು, ಆಗಿದ್ದು  ಆಯಿತು, ಇನ್ನು ಮುಂದೆ ಭಿನ್ನಮತ ಬೇಡ. ಎಲ್ಲರೂ ಒಂದಾಗಿ ಪಕ್ಷ ಬೆಳೆಸೋಣ ಎಂದು ತಿಳಿ  ಹೇಳಿ  ಅಸಮಾಧಾನಿತರನ್ನು ಶಾಂತಗೊಳಿಸಿದರು. 

Related Stories

No stories found.

Advertisement

X
Kannada Prabha
www.kannadaprabha.com