ದೇಶದ ಪ್ರಥಮ ಹೊಗೆರಹಿತ ಗ್ರಾಮ ವೈಚಕೂರಹಳ್ಳಿ

ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ಭಾರತದ ಮೊದಲ ‘ಹೊಗೆರಹಿತ ಗ್ರಾಮ’...
ಎಲ್ ಪಿಜಿ ಸಂಪರ್ಕ ಹೊಂದಿರುವ ಗ್ರಾಮಸ್ಥ ಮಹಿಳೆ
ಎಲ್ ಪಿಜಿ ಸಂಪರ್ಕ ಹೊಂದಿರುವ ಗ್ರಾಮಸ್ಥ ಮಹಿಳೆ

ಗೌರಿಬಿದನೂರು (ಚಿಕ್ಕಬಳ್ಳಾಪುರ): ಜಿಲ್ಲೆಯ ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ಭಾರತದ ಮೊದಲ ‘ಹೊಗೆರಹಿತ ಗ್ರಾಮ’ ಎಂಬ ಕೀರ್ತಿಗೆ ಭಾಜನವಾಗಿದೆ.

ಈ ಗ್ರಾಮದಲ್ಲಿನ ಕುಟುಂಬಗಳ ಮನೆಯಲ್ಲಿ ಎಲ್ ಪಿಜಿ ಇಂಧನವನ್ನು ಅಡುಗೆಗೆ ಬಳಸುತ್ತಿದ್ದಾರೆ. ಹಾಗಾಗಿ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ವೈಚಕೂರಹಳ್ಳಿಯನ್ನು ‘ಹೊಗೆರಹಿತ ಗ್ರಾಮ’ ಎಂದು ಘೊಷಿಸಿದೆ.

ಈ ಹಳ್ಳಿ ಇರುವುದು ಗೌರಿಬಿದನೂರು ಪಟ್ಟಣದಿಂದ ಸುಮಾರು 5 ಕಿ.ಮೀ. ದೂರದಲ್ಲಿ. ಈ ಹಳ್ಳಿಯಲ್ಲಿ ಸುಮಾರು 276 ಮನೆಗಳಿದ್ದು, ಕೇವಲ ನಾಲ್ಕು ಮನೆ ಹೊರತುಪಡಿಸಿ ಉಳಿದವೆಲ್ಲಾ ಗ್ಯಾಸ್ ಸಂಪರ್ಕ ಹೊಂದಿವೆ. ಭಾರತೀಯ ತೈಲ ನಿಗಮ ‘ಹೊಗೆ ರಹಿತ ಗ್ರಾಮ’ ಪರಿಕಲ್ಪನೆಯ ಪೈಲಟ್ ಯೋಜನೆಗಾಗಿ ವೈಚಕೂರಹಳ್ಳಿಯನ್ನು ಆಯ್ದುಕೊಂಡಿತ್ತು. ಈ ಹಿಂದೆ ಗ್ರಾಮದ 174 ಕುಟುಂಬ ಗ್ಯಾಸ್ ಸಂಪರ್ಕ ಹೊಂದಿದ್ದವು. ಎಪಿಎಲ್ ಕಾರ್ಡ್ ಹೊಂದಿರುವ ಎಲ್ಲ ಕುಟುಂಬಗಳು ಗ್ಯಾಸ್ ಸಂಪರ್ಕವನ್ನು ಮೊದಲೇ ಪಡೆದಿದ್ದವು.

ರಿಯಾಯಿತಿ ಸಂಪರ್ಕ: ಈ ಗ್ರಾಮದ ಬಿಪಿಎಲ್ ಕಾರ್ಡ್ ಹೊಂದಿರುವ 98 ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ನಾಲ್ಕು ದಿನದ ಹಿಂದೆ ಗ್ಯಾಸ್ ಸಂಪರ್ಕ ಒದಗಿಸಲಾಗಿದೆ. ಅಂತ್ಯೋದಯ, ಅಕ್ಷಯ ಪಡಿತರ ಚೀಟಿಯುಳ್ಳ ಹಾಗೂ ಗುಡಿಸಲುಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಗ್ಯಾಸ್ ಸಂಪರ್ಕ ನೀಡುವಂತಿಲ್ಲ ಎಂಬ ನಿಯಮವಿರುವುದರಿಂದ ನಾಲ್ಕು ಕುಟುಂಬಗಳಿಗೆ ಈ ಸೌಲಭ್ಯ ಒದಗಿಸಲಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com