ಎಡೆಸ್ನಾನ ನಿಷೇಧಿಸಿ: ಹಿಂ.ವರ್ಗಗಳ ವೇದಿಕೆಯಿಂದ ಸರ್ಕಾರಕ್ಕೆ ಆಗ್ರಹ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಸ್ನಾನದ ಬದಲು ಎಡೆಸ್ನಾನಕ್ಕೆ ಅವಕಾಶ ನೀಡುವುದನ್ನು ನಿಷೇಧಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆ ಸ್ನಾನ(ಸಂಗ್ರಹ ಚಿತ್ರ)
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಎಡೆ ಸ್ನಾನ(ಸಂಗ್ರಹ ಚಿತ್ರ)

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಸ್ನಾನದ ಬದಲು ಎಡೆಸ್ನಾನಕ್ಕೆ ಅವಕಾಶ ನೀಡುವುದನ್ನು ನಿಷೇಧಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಎಡೆಸ್ನಾನ, ಪಂಕ್ತಿ ಭೇದ ವಿರೋಧಿಸಿ ಹಾಗೂ ಮೌಢ್ಯ ಪ್ರತಿಬಂಧಕ ಕಾಯಿದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಡಿ.15ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಅಂದು ಬೆಳಗ್ಗೆ 10.30ಕ್ಕೆ ಗಾಂಧಿ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದರಲ್ಲಿ ಸಾಹಿತಿಗಳು, ಆದಿವಾಸಿ ಮುಖಂಡರು, ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದು ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು  ಹೇಳಿದ್ದಾರೆ.
ಮಡ ಮಡೆ ಸ್ನಾನ ಬದಲು ಎಡೆ ಸ್ನಾನವನ್ನು ಪೇಜಾವರ ಸ್ವಾಮೀಜಿ ಸೃಷ್ಟಿಸಿದ್ದಾರೆ. ಅದರ ಬದಲು ಎಡೆಸ್ನಾನವನ್ನೂ ನಿಷೇಧಿಸಬಹುದಿತ್ತು. ಅಲ್ಲದೆ ಮಡ ಮಡೆ ಸ್ನಾನ ವಿವಾದ ಕುರಿತು
ನಿಡುಮಾಮಿಡಿ ಸ್ವಾಮೀಜಿ ಕೋರ್ಟ್‍ಗೆ ದೂರು ನೀಡಿರುವುದರಿಂದ ಈ ಪದ್ಧತಿ ನಿಲ್ಲಿಸಲು ತೊಡಕಾಗಿದೆ ಎಂದು ಶಿವರಾಮು ಹೇಳಿದರು.
ದಲಿತರ ಪರ ಕಾಳಜಿ ವ್ಯಕ್ತಪಡಿಸುವ ಪೇಜಾವರ ಶ್ರೀಗಳು, ಜ.18ರಂದು ನಡೆಯುವ ತಮ್ಮ ಪರ್ಯಾಯದಲ್ಲಿ ಪೌರ ಕಾರ್ಮಿಕರನ್ನು ಆಹ್ವಾನಿಸಿ, ಗೌರವಿಸಿ, ಅವರೊಂದಿಗೆ
ಸಹಭೋಜನ ಏರ್ಪಡಿಸಲಿ. ಹಾಗಾದರೆ ಶ್ರೀಗಳ ಎಲ್ಲ ಕಾರ್ಯಗಳನ್ನು ವೇದಿಕೆ ಬೆಂಬಲಿಸಲಿದೆ. ಈ ಕುರಿತು ಜ.7ರಂದು ಮೈಸೂರಿನಲ್ಲಿ ಪೇಜಾವರಶ್ರೀ ಜೊತೆ ವೇದಿಕೆ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com