ಅಶ್ವಿನ್‍ರಾವ್ ವಿರುದ್ಧ 5ನೇ ಚಾರ್ಜ್ ಶೀಟ್

ಲೋಕಾಯುಕ್ತ ಕಚೇರಿಯಲ್ಲಿ ನಡೆದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಬುಧವಾರ ಎಸ್‍ಐಟಿ (ವಿಶೇಷ ತನಿಖಾ ತಂಡ) 5ನೇ ಚಾರ್ಜ್‍ಶೀಟ್ ಸಲ್ಲಿಸಿದೆ.
ಅಶ್ವಿನ್ ರಾವ್
ಅಶ್ವಿನ್ ರಾವ್

ಬೆಂಗಳೂರು:  ಲೋಕಾಯುಕ್ತ ಕಚೇರಿಯಲ್ಲಿ ನಡೆದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ಬುಧವಾರ ಎಸ್‍ಐಟಿ (ವಿಶೇಷ ತನಿಖಾ ತಂಡ) 5ನೇ ಚಾರ್ಜ್‍ಶೀಟ್ ಸಲ್ಲಿಸಿದೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ತನಿಖಾಧಿಕಾರಿ ಲಾಬೂರಾಮ್ ನೇತೃತ್ವದ ಎಸ್‍ಐಟಿ ತಂಡ 1040 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಮೂವರು ಆರೋಪಿಗಳಾದ ಹೊಟ್ಟೆಕೃಷ್ಣ, ನರಸಿಂಹಮೂರ್ತಿ, ಮಾಜಿ ಲೋಕಾಯುಕ್ತ ಭಾಸ್ಕರ್ ರಾವ್ ಪುತ್ರ ಅಶ್ವಿನ್‍ರಾವ್ ವಿರುದ್ಧ ಶ್ರೀನಿವಾಸ ಎಂಬುವರು ದೂರು ನೀಡಿದ್ದರು.

ಬಿಡಿಎ ಜಮೀನು ವಿಚಾರದಲ್ಲಿ ಶ್ರೀನಿವಾಸ್‍ಗೆ ಹೊಟ್ಟೆಕೃಷ್ಣ 15 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ ಶ್ರೀನಿವಾಸ್ 3 ಲಕ್ಷ ರು. ಮುಂಗಡವಾಗಿ ಪಡೆದಿದ್ದರು. ಅಲ್ಲದೇ ಅಶ್ವಿನ್‍ರಾವ್ ಮೂಲಕ ಇದನ್ನು ಇತ್ಯರ್ಥಪಡಿಸುವುದಾಗಿಯೂ ಹೇಳಿದ್ದರು. ಆದರೆ, ಹಣವನ್ನು ಹಿಂದಿರುಗಿಸದೆ, ಕೆಲಸವನ್ನು ಮಾಡದೆ ಮೋಸ ಮಾಡಿದ್ದಾರೆ ಎಂದು ಶ್ರೀನಿವಾಸ್ ಎಸ್‍ಐಟಿಗೆ ದೂರು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com