ಪದಚ್ಯುತಿ ವಿರುದ್ಧ ರಿಟ್, ಸುಭಾಷ್‌ ಬಿ.ಅಡಿ ಕಾರ್ಯನಿರ್ವಹಿಸಬಹುದು: ಹೈಕೋರ್ಟ್

ನ್ಯಾಯಮೂರ್ತಿ ಸುಭಾಷ್‌.ಬಿ ಅಡಿ ರಾಜ್ಯ ಹೈಕೋರ್ಟ್‌‌ಗೆ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಜನವರಿ 2ನೇ ವಾರಕ್ಕೆ ವಿಚಾರಣೆ ಮುಂದೂಡಿದೆ. ..
ಸುಭಾಷ್ .ಬಿ.ಆಡಿ
ಸುಭಾಷ್ .ಬಿ.ಆಡಿ

ಬೆಂಗಳೂರು: ರಾಜ್ಯ ಸರಕಾರ ಕೈಗೊಂಡಿದ್ದ ಪದಚ್ಯುತಿ ನಿರ್ಣಯವನ್ನು ಪ್ರಶ್ನಿಸಿ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್‌.ಬಿ ಅಡಿ ರಾಜ್ಯ  ಹೈಕೋರ್ಟ್‌‌ಗೆ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕ ಸದಸ್ಯ ಪೀಠ ಜನವರಿ 2ನೇ ವಾರಕ್ಕೆ ವಿಚಾರಣೆ ಮುಂದೂಡಿದೆ.

ತಮ್ಮ ವಿರುದ್ಧದ ಪದಚ್ಯುತಿ ನಿರ್ಣಯವನ್ನು ಪ್ರಶ್ನಿಸಿ, ನ್ಯಾಯಮೂರ್ತಿ ಸುಭಾಷ್‌.ಬಿ ಅಡಿ ರಾಜ್ಯ  ಹೈಕೋರ್ಟ್‌‌ಗೆ ಗುರುವಾರ ರಿಟ್ ಅರ್ಜಿ ಸಲ್ಲಿಸಿದ್ದರು.ಇದರೊಂದಿಗೆ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ  ಅವರು ರಾಜ್ಯ ಸರಕಾರದ ವಿರುದ್ಧ ಕಾನೂನು ಸಮರ ಸಾರಿದ್ದರು.

ನ್ಯಾ. ಸುಭಾಷ್‌.ಬಿ ಅಡಿಪರ ಬಿ.ವಿ ಆಚಾರ್ಯ ವಾದ ಮಂಡಿಸುತ್ತಿದರು. ಈ ವೇಳೆ ಸ್ಪೀಕರ್ ಕಚೇರಿ ಹೊರಡಿಸಿರುವ ಪತ್ರ ವಾಪಸ್ ಪಡೆಯಲು ಸಾಧ್ಯವಿದೆಯೇ ಎಂದು ಎಜೆ ಎಂ.ಆರ್ ನಾಯ್ಕ ಅವರಿಗೆ ಜಡ್ಜ್ ಬೈರಾ ರೆಡ್ಡಿ ಪ್ರಶ್ನಿಸಿದ್ದಾರೆ. ಸ್ಪೀಕರ್ ಕಾರ್ಯದರ್ಶಿ ಅವರ ಹೇಳಿಕೆ ದಾಖಲಿಸಿಕೊಂಡ ಜಡ್ಜ್ ಮುಂದಿನ ವಿಚಾರಣೆವರೆಗೆ ಸುಭಾಷ್ ಆಡಿ ಕಾರ್ಯ ನಿರ್ವಹಿಸಬಹುದೆಂದು ಹೇಳಿರುವ ಕೋರ್ಟ್ ಜನವರಿ 2ನೇ ವಾರಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com