ಜಿ.ಪಂ 16 ಕ್ಷೇತ್ರಗಳ ಮೀಸಲು ಬದಲು

ರಾಜ್ಯದ 16 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾವಣೆ ಮೀಸಲಾತಿಯಲ್ಲಿ ಚುನಾವಣಾ ಆಯೋಗ ಬದಲಿಸಿ ಅಧಿಸೂಚನೆ ಹೊರಡಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜ್ಯದ 16 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಚುನಾವಣೆ ಮೀಸಲಾತಿಯಲ್ಲಿ ಚುನಾವಣಾ ಆಯೋಗ ಬದಲಿಸಿ ಅಧಿಸೂಚನೆ ಹೊರಡಿಸಿದೆ. ರಾಜ್ಯದ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಅವಧಿಯ ಅಧಿಸೂಚನೆಯಲ್ಲಿ ನೀಡಿದ್ದ ಮೀಸಲಾತಿಯಲ್ಲಿ ಕೆಲ ಕ್ಷೇತ್ರಗಳಲ್ಲಿ ಮೀಸಲು ಪುನರಾವರ್ತನೆ ಆಗಿತ್ತು.

ಆದ್ದರಿಂದ ಅಂತಹ 16 ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾವಣೆ ಮಾಡಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ  ಹೈಕೋರ್ಟ್‍ಗೆ ಹೇಳಿಕೆ ನೀಡಿದೆ. ಮೀಸಲು ನಿಗದಿಪಡಿಸಿ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ದೇಜು ಪೂಜಾರಿ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಬಿ.ಎಸ್.ಪಾಟೀಲ್ ಅವರಿದ್ದ ನ್ಯಾಯ ಪೀಠಕ್ಕೆ ಆಯೋಗ ಈ ಮಾಹಿತಿ ನೀಡಿದೆ.

ಚಿಕ್ಕಮಗಳೂರಿನ ಆರು, ಉಡುಪಿಯ ಎರಡು, ಹಾಸನ ಎರಡು, ಗದಗ ಎರಡು, ಯಾದಗಿರಿ ಎರಡು, ಮತ್ತು ಕೊಪ್ಪಳದ ಎರಡು ಕ್ಷೇತ್ರಗಳಲ್ಲಿ ಮೀಸಲಾತಿ ಪುನರಾವರ್ತನೆ ಆಗಿದೆ. ಆದ್ದರಿಂದ ಈ ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾಯಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆ, ಈ ಸಂಬಂಧ ನೂತನವಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಚುನಾವಣಾ ಆಯೋಗವು ಮೀಸಲು ನಿಗದಿಯಲ್ಲಿ ರೋಟೇಷನ್ ನಿಯಮ ಪಾಲಿಸಿಲ್ಲ.ಕ್ಷೇತ್ರಗಳ ಮರು ವಿಂಗಡನೆಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ.ಇನ್ನು ಅಂತಿಮ ಅಧಿಸೂಚನೆ ಹೊರಡಿಸುವ ಮುನ್ನ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿಲ್ಲ.

ಕ್ಷೇತ್ರಗಳ ಮುರ ವಿಂಗಡನೆ ಮೀಸಲು ನಿಗದಿ ಕ್ಷೇತ್ರದ ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಆರೋಪಿಸಲಾಗಿತ್ತು. ಮೀಸಲಾತಿ ಗೊಂದಲಗಳ ಸಂಬಂಧ ಆಕ್ಷೇಪಣೆ  ಸಲ್ಲಿಸಲು ರಾಜ್ಯ ಸರ್ಕಾರ ಹಾಗೂ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com