ಮಕ್ಕಳಿಗೆ ಇರುವಷ್ಟು ಜ್ಞಾನ ಶಿಕ್ಷಕರಿಗೆ ಇಲ್ಲ: ಸಚಿವ ಕಿಮ್ಮನೆ ರತ್ನಾಕರ್

ಬ್ರೈಲ್ ಸ್ಲೇಟ್ ಬಳಸಿ ವ್ಯಾಸಂಗ ಮಾಡುತ್ತಿದ್ದ ಅಂಧ ಮಕ್ಕಳಿಗೆ ಶುಭೋದಯ ಚಾರಿಟೇಬಲ್ ಟ್ರಸ್ಟ್ ಆಡಿಯೋ ಸಿಡಿ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾಗಿದ್ದು ಇತಿಹಾಸ.
ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್

ಬೆಂಗಳೂರು: ಬ್ರೈಲ್ ಸ್ಲೇಟ್ ಬಳಸಿ ವ್ಯಾಸಂಗ ಮಾಡುತ್ತಿದ್ದ ಅಂಧ ಮಕ್ಕಳಿಗೆ ಶುಭೋದಯ ಚಾರಿಟೇಬಲ್ ಟ್ರಸ್ಟ್ ಆಡಿಯೋ ಸಿಡಿ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಬೆಳಕಾಗಿದ್ದು ಇತಿಹಾಸ. ಈಗ ಖುದ್ದು ಎಂ.ಟಿ. ಎಜುಕೇರ್ ಚಾರಿಟೇಬಲ್ ಟ್ರಸ್ಟ್ ವೀಡಿಯೋ ರೆಕಾರ್ಡ್‍ವುಳ್ಳ `ರೋಬೋಮೇಟ್ ಪ್ಲಸ್' ಎಂಬ ಆ್ಯಪ್ ಬಿಡುಗಡೆ ಮಾಡಿ ಮಾಧ್ಯಮಿಕ ಮತ್ತು ಪಿಯು ವಿದ್ಯಾರ್ಥಿಗಳಿಗೆ ಸುವರ್ಣ ಬಾಗಿಲು ತೆರೆದುಕೊಟ್ಟಿದೆ.
ನಗರದ ನೃಪತುಂಗ ರಸ್ತೆಯಲ್ಲಿರುವವರ ಶಿಕ್ಷಣ ಅಭಿಯಾನ  ಯೋಜನಾ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನೂತನ ಆ್ಯಪ್ ಅನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಶನಿವಾರ ಲೋಕಾರ್ಪಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಕ್ಕಳ ವಿದ್ಯಾಭ್ಯಾಸ ದೃಷ್ಟಿಯಿಂದ ಖಾಸಗಿ ಸಂಸ್ಥೆಯೊಂದು  ಈ ಆ್ಯಪ್ ತಯಾರಿಸಿಕೊಟ್ಟಿರುವುದು ಅನುಕೂಲವಾಗುವಂತದ್ದು. ಬಹುತೇಕ ಶಿಕ್ಷಕರಿಗೆ ಮಕ್ಕಳಿಗಿರುವಷ್ಟು ಜ್ಞಾನ ಇರುವುದಿಲ್ಲ ಕೆಲವು ಕಡೆ ಮೇಲ್ವಿಚಾರಣೆಗೆ ಹೋದಾಗ ಗೊತ್ತಾಗಿದೆ. ಅವರೇ ಮಕ್ಕಳಿಗೆ ಅರೆ ಬರೆ ಬೋಧಿಸಿದರೆ ಗುಣಮಟ್ಟದ ಶಿಕ್ಷಣ ಕನಸಾಗಿಯೇ ಉಳಿಯುತ್ತದೆ. ಈ ನಿಟ್ಟಿನಲ್ಲಿ ಆ್ಯಪ್ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಎಂ.ಟಿ. ಎಜುಕೇರ್ ಚಾರಿಟೇಬಲ್ ಟ್ರಸ್ಟ್‍ನ ಟ್ರಸ್ಟಿ ಸುಜಿತ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯು 33 ವರ್ಷಗಳಿಂದ ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡು ಬಂದಿದೆ. ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಿ ರೂಪಿಸಬೇಕು  ಎಂಬ ಇರಾದೆಯಿಂದ ಈ ಆ್ಯಪ್ ತಯಾರಿಸಿದ್ದೇವೆ. ಸದ್ಯ ಇಂಗ್ಲಿಷ್‍ನಲ್ಲಿ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಕನ್ನಡದಲ್ಲೇ ಸೇವೆ ನೀಡಲು ಪ್ರಯತ್ನಿಸಲಾಗುವುದು ಎಂದರು. ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಎಸ್. ರಮೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com