ಗುಂಡಿ ಮುಚ್ಚಿಸಲು ವಿಭಿನ್ನ ಹಾದಿ ಹಿಡಿದ ನಾಗರಿಕ

ಹದಗೆಟ್ಟ ರಸ್ತೆಗಳಲ್ಲಿನ ಗುಂಡಿ ನೋಡಿ ನಾಗರಿಕರು ಸರ್ಕಾರವನ್ನು ಬೈಯ್ಯುವುದನ್ನು ದಿನನಿತ್ಯ ಕೇಳುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಿಬಿಎಂಪಿಗೆ ಬುದ್ಧಿ ಕಲಿಸಲು ವಿಭಿನ್ನ ದಾರಿ ಅನುಸರಿಸಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಹದಗೆಟ್ಟ ರಸ್ತೆಗಳಲ್ಲಿನ ಗುಂಡಿ ನೋಡಿ ನಾಗರಿಕರು ಸರ್ಕಾರವನ್ನು ಬೈಯ್ಯುವುದನ್ನು ದಿನನಿತ್ಯ ಕೇಳುತ್ತಿರುತ್ತೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಿಬಿಎಂಪಿಗೆ ಬುದ್ಧಿ ಕಲಿಸಲು ವಿಭಿನ್ನ ದಾರಿ ಅನುಸರಿಸಿದ್ದಾರೆ. `ನಾನು ದುಡ್ಡು ಕೊಡ್ತಿನಿ, ಮೊದಲು ಗುಂಡಿ ಮುಚ್ಚಿಸಿ' ಎಂದು ರು.2000 ಡಿಡಿ ತೆಗೆಸಿ ಪಾಲಿಕೆಗೆ ಕೊಟ್ಟಿದ್ದಾರೆ.

ಈ ರೀತಿ ಬಿಬಿಎಂಪಿಯ ಬೇಜವಾಬ್ದಾರಿತನವನ್ನು ಖಂಡಿಸಿದವರು ಡಾಲರ್ಸ್ ಕಾಲನಿ ನಿವಾಸಿ ಗಣೇಶ್‍ಬಾಬು. ಗಾಂಧಿನಗರದಲ್ಲಿ ವ್ಯಾಪಾರ ಮಾಡುವ ಗಣೇಶ್ ಗಾಂಧಿನಗರದಲ್ಲಿನ ರಸ್ತೆಯಲ್ಲಿನ ಬೃಹತ್ ಗುಂಡಿಯನ್ನು ನೋಡಿ ರೋಸಿ ಹೋದವರು. ಶುಕ್ರವಾರ ರಾತ್ರಿಯಂತೂ ಆ ಗುಂಡಿಯಲ್ಲಿ ಅವರ ಕಾರು ಏಕಾಏಕಿ ಇಳಿದಿದ್ದರಿಂದ ಒಂದು ಕ್ಷಣ ಅವರ ಕಾರಿನೊಳಗೆ ಅಲ್ಲೋಲ ಕಲ್ಲೋಲವೇ ಆಗಿ ಹೋಗಿತ್ತು. ಕಾರನ್ನು ಗುಂಡಿಯಿಂದ ಮೇಲೆತ್ತಲು ಹರಸಾಹಸ ಪಟ್ಟರು. ಅಲ್ಲಿ ಗುಂಡಿ ತಪ್ಪಿಸಲು ಬೇರೆ ವಾಹನಗಳು ಸರ್ಕಸ್ ಮಾಡಿ ಹೋಗೋದನ್ನು ಖುದ್ದು
ನೋಡಿದರು. ಹೇಗಾದರೂ ಮಾಡಿ ಬಿಬಿಎಂಪಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ ಗಣೇಶ್ ಅವತ್ತು ರಾತ್ರಿಯೆಲ್ಲ ವಿಚಾರ ಮಾಡಿದರು. ಈ ಬಗ್ಗೆ ಹಿಂದೆ ಬಿಬಿಎಂಪಿಗೆ ದೂರು
ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಪಾಲಿಕೆಯನ್ನು ದೂರುತ್ತಾ ಕಾಲಹರಣ ಮಾಡುವುದಕ್ಕಿಂತ ಆ ಗುಂಡಿ ಮುಚ್ಚಿಸಲು ತಾನೇ ಜವಾಬ್ದಾರಿ ತೆಗೆದುಕೊಂಡರೆ ಹೇಗೆ ಎಂದು ನಿರ್ಧರಿಸಿದ ಗಣೇಶ್, ಬೆಳಗ್ಗೆ ಎದ್ದ ತಕ್ಷಣವೇ ಬ್ಯಾಂಕ್‍ಗೆ ಹೋಗಿ ಬಿಬಿಎಂಪಿ ಹೆಸರಲ್ಲಿ ರು.2000 ಡಿಡಿ ಮಾಡಿಸಿದರು. ನೇರ ಪಾಲಿಕೆ ಕಚೇರಿಗೆ ತೆರಳಿ ಮೇಯರ್ ಗೆ ಭೇಟಿಯಾಗಲು ಹೋದರು. ಆದ್ರೆ ಮೇಯರ್ ಇರಲಿಲ್ಲ. ಆಯುಕ್ತ ಕುಮಾರ್ ನಾಯಕ್ ಸಹ ಯಾವುದೋ ಸಭೆಯಲ್ಲಿ ಬಿಜಿಯಾಗಿದ್ದರು. ನಂತರ ಉಪಮೇಯರ್ ಹೇಮಲತಾರನ್ನು ಭೇಟಿ ಮಾಡಿ ಡಿಡಿ ಕೊಟ್ಟು ರಸ್ತೆಗುಡಿ ಸರಿಪಡಿಸುವಂತೆ ಮನವಿ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com