ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

ಕರ್ನಾಟಕ ಲಲಿತಕಲಾ ಅಕಾಡೆಮಿಯ 2015ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದ ರಾದ ಉಡುಪಿಯ ವಿಜಯನಾಥ್ ಶೆಣೈ, ಮೈಸೂರಿನ ಎಲ್.ಎಸ್.ಎನ್. ಆಚಾರ್ ...
ವಿಧಾನ ಸೌಧ
ವಿಧಾನ ಸೌಧ
Updated on

ಕರ್ನಾಟಕ ಲಲಿತಕಲಾ ಅಕಾಡೆಮಿಯ 2015ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಹಿರಿಯ ಕಲಾವಿದ ರಾದ ಉಡುಪಿಯ ವಿಜಯನಾಥ್ ಶೆಣೈ, ಮೈಸೂರಿನ ಎಲ್.ಎಸ್.ಎನ್. ಆಚಾರ್ ಹಾಗೂ ಗದಗದ ಕಾಶಪ್ಪ ವಿ. ಕುಂದಗೋಳ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇದರ ಜತಗೆ ಕಲಾಕೃತಿಗಳ ಛಾಯಾಚಿತ್ರ ಪ್ರದರ್ಶನದಲ್ಲಿ ಆಯ್ಕೆಯಾದ ಹತ್ತು ಯುವ ಕಲಾವಿದರಿಗೂ ಪ್ರಶಸ್ತಿ ಪ್ರಕಟಿಸಲಾಗಿದೆ.

ಗೌರವ ಪ್ರಶಸ್ತಿಗೆ ರು.10 ಸಾವಿರ ನಗದು ಪುರಸ್ಕಾರ ನಿಗದಿಪಡಿಸಲಾಗಿತ್ತು. ಸರ್ಕಾರ ಪ್ರಸಕ್ತ ವರ್ಷದಿಂದ ರು. 50 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ಕಲಾಕೃತಿಗಳ ಛಾಯಾಚಿತ್ರ ಪ್ರದರ್ಶನ ಸ್ಪರ್ಧೆಯ ವಿಜೇತರಿಗೆ ನೀಡುತ್ತಿದ್ದ ಪ್ರಶಸ್ತಿ ಮೊತ್ತವಾದ ರು. 5 ಸಾವಿರವನ್ನು ರು. 10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಈ ಎರಡು ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜನವರಿ ಕೊನೆ ವಾರದಲ್ಲಿ ಬಾಗಲಕೋಟೆಯಲ್ಲಿ ಏರ್ಪಡಿಸಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಎಂ.ಎಸ್. ಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2015ನೇ ಸಾಲಿನ 44ನೇ ಕಲಾ ಪ್ರದರ್ಶನ ಮತ್ತು ಸ್ಪರ್ಧೆಗೆ 464 ಕಲಾವಿದರಿಂದ 905 ಕಲಾಕೃತಿಗಳ ಛಾಯಾಚಿತ್ರಗಳು ಬಂದಿದ್ದು, ಒಟ್ಟು 106 ಕಲಾವಿದರ ಕಲಾಕೃತಿಗಳ ಛಾಯಾಚಿತ್ರಗಳನ್ನು ಮೊದಲ ಹಂತದ ಆಯ್ಕೆಯಾಗಿತ್ತು.  ಇದರಲ್ಲಿ 91 ಮೂಲ ಕಲಾಕೃತಿಗಳು ಅಂತಿಮವಾಗಿ ಸ್ವೀಕೃತವಾಗಿದ್ದು, ಅತ್ಯುತ್ತಮವೆನಿಸಿದ 10 ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಅವರಲ್ಲಿ ಕೋಲಾರದ ಆರ್. ಮುನಿಕೃಷ್ಣ (ಮಿಶ್ರ ಮಾಧ್ಯಮ), ಬೆಂಗಳೂರಿನ ವಿಜಯಾ ಗೋಪಿನಾಥ್ (ಜಲವರ್ಣ), ಬೆಳಗಾವಿಯ ಸಂಗಮ್ ವಿ. ದೊಡ್ಡಮನಿ (ಗ್ರಾಫಿಕ್ಸ್ ), ಬೆಂಗಳೂರಿನ ಕೆ. ಐಶ್ವರ್ಯನ್ (ಮಿಶ್ರ ಮಾಧ್ಯಮ), ಬೆಂಗಳೂರಿನ ಕೆ. ಎಸ್. ಶ್ರೀನಿವಾಸ್ (ಛಾಯಚಿತ್ರ), ಕಲಬುರ್ಗಿಯ ಸುನೀಲ್ ಲೋಹಾರ್ (ಜಲವರ್ಣ), ದಕ್ಷಿಣ ಕನ್ನಡದ ವಸಂತ (ಅಕ್ರಲಿಕ್), ಬೆಳಗಾವಿಯ ಪಿ. ಮಹೇಶ್ (ಜಲವರ್ಣ), ಚಿಕ್ಕಮಗಳೂರಿನ ವಿಶ್ವಕರ್ಮ ಆಚಾರ್ಯ (ಪೆನ್ಸಿಲ್ ಮತ್ತು ಪೇಪರ್), ವಿಜಯಾಪುರದ ಲಿಂಗರಾಜು ಕಾಚಾಪುರ (ಎಚ್ಚಿಂಗ್) ಆಯ್ಕೆಯಾಗಿದ್ದಾರೆ ಎಂದರು.

ಕಲಾ ಸಂಕ್ರಾಂತಿ: ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಇದೇ ಮೊದಲ ಬಾರಿಗೆ ಮೇ ತಿಂಗಳಲ್ಲಿ ಕಲಾ ಸಂಕ್ರಾಂತಿ ಎಂಬ ವಿಶಿಷ್ಟ ಕಲಾ ಸಂತೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಸಂತೆಯಲ್ಲಿ ನಾಡಿನ 100 ಮಂದಿ ಕಲಾವಿದರು ಪಾಲ್ಗೊಂಡು ಮೂರು ದಿನಗಳ ಕಾಲ ಚಿತ್ರಕಲಾ ಶಿಬಿರ ನಡೆಸಿಕೊಡುವರು. ಇದೇ ವೇಳೆ ಪ್ರತಿಯೊಬ್ಬ ಕಲಾವಿದರು ತಾವು ರಚಿಸಿರುವ ಕಲಾಕೃತಿಯನ್ನು ಕನಿಷ್ಠ 5 ಸಾವಿರಕ್ಕೆ ಮಾರಾಟ ಮಾಡುವರು. ಆಸಕ್ತರು ಲಾಟರಿ ಟಿಕೆಟ್ ಎತ್ತುವ ಮೂಲಕ ಬಿಡ್‍ನಲ್ಲಿ ಭಾಗವಹಿಸಬಹುದು. ಅಂದರೆ ಕಾಲವಿದರ ಕಲಾಕೃತಿಗಳನ್ನು ಜನರ ಬಳಿಗೆ ಅತ್ಯಂತ ಕಡಿಮೆ ಬೆಲೆಗೆ ಕೊಂಡೊಯ್ಯಲು ಈ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com