ಬೆಂಗಳೂರು-ಮೈಸೂರು ಷಟ್ಪಥ ಕಾಮಗಾರಿ ನಾಳೆಯಿಂದ ಆರಂಭ

ಉದ್ದೇಶಿತ ಮೈಸೂರು- ಬೆಂಗಳೂರು ಷಟ್ಪಥ ನಿರ್ಮಾಣ ಕಾಮಗಾರಿ ಗುರುವಾರದಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರ ಮೈಸೂರು- ಬೆಂಗಳೂರು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಉದ್ದೇಶಿತ ಮೈಸೂರು- ಬೆಂಗಳೂರು ಷಟ್ಪಥ ನಿರ್ಮಾಣ ಕಾಮಗಾರಿ ಗುರುವಾರದಿಂದ ಆರಂಭವಾಗಲಿದೆ. ಕೇಂದ್ರ ಸರ್ಕಾರ ಮೈಸೂರು- ಬೆಂಗಳೂರು ರಸ್ತೆಯನ್ನು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಕಾಮಗಾರಿಗಳಿಗೆ ಎಲ್ಲಾ ರೀತಿಯ ಅನುಮೋದನೆಗಳೂ ದೊರೆತಿದ್ದು ಕಾಮಗಾರಿ ಆರಂಭವಾಗುವುದಷ್ಟೇ ಬಾಕಿ ಇದೆ. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕೆಂದು ನಿರ್ಧರಿಸಲಾಗಿದ್ದು, 2018ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ತಿಳಿಸಿದ್ದಾರೆ.

ರಾಜ್ಯ ರಸ್ತೆಯೋಜನೆಗಳ ಬಗ್ಗೆ ಮಂಗಳವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮೈಸೂರು-ಬೆಂಗಳೂರು ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಅದರ ಸಂಪೂರ್ಣ ಕಾಮಗಾರಿ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ಆದರೆ ಅದಕ್ಕೆ ಅಗತ್ಯ ಭೂಮಿ ನೀಡುವುದು ಮಾತ್ರ ರಾಜ್ಯ ಸರ್ಕಾರ. ಆ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭವಾಗಿದೆ ಎಂದು ಹೇಳಿದರು.

ಕನಕಪುರ, ಸತ್ಯಮಂಗಲ ಚತುಷ್ಪಥ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿದ್ದು, ಅದರ ಕಾಮಗಾರಿ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಹಾಗೆಯೇ ಬಿಜಾಪುರ- ಹುಬ್ಬಳ್ಳಿ ಚತುಷ್ಪಥಕ್ಕೂ ಅನುಮತಿ ಸಿಕ್ಕಿದೆ ಎಂದರು. ಇದೇ ವೇಳೆ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣಗಳನ್ನ ಸಂಪರ್ಕಿಸುವ ಬೈಪಾಸ್ ರಸ್ತೆಗಳ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಬೈಪಾಸ್ ರಸ್ತೆಗಳಿಂದ ಪಟ್ಟಣಗಳ ಕಟ್ಟಡಗಳು ಮತ್ತು ಬಡಾವಣೆಗಳಿಗೆ ತೊಂದರೆಯಾಗುವುದರಿಂದ ಯಾವುದು ಸುಲಭ ಸಾಧ್ಯವೋ ಅವುಗಳ ಬಗ್ಗೆ ಹೆಚ್ಚು ಆದ್ಯತೆ ನೀಡಲು ಪರಿಶೀಲಿಸಲಾಯಿತು ಎಂದು ಮಹದೇವಪ್ಪ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com