ಕೂಡಲಸಂಗಮದಲ್ಲಿ ಶರಣ ಮೇಳ

ಶರಣ ಮೇಳ ಉತ್ಸವ ಸಮಿತಿಯಿಂದ ಜ.11 ರಿಂದ 15ರವರೆಗೆ ಕೂಡಲ ಸಂಗಮದಲ್ಲಿ `29ನೇ ಶರಣ ಮೇಳ' ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷೆ
ಮಾತೆ ಮಹಾದೇವಿ
ಮಾತೆ ಮಹಾದೇವಿ

ಬೆಂಗಳೂರು: ಶರಣ ಮೇಳ ಉತ್ಸವ ಸಮಿತಿಯಿಂದ ಜ.11 ರಿಂದ 15ರವರೆಗೆ ಕೂಡಲ ಸಂಗಮದಲ್ಲಿ `29ನೇ ಶರಣ ಮೇಳ' ಆಯೋಜಿಸಲಾಗಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದ್ದಾರೆ.

ಜ.11ರಂದು ರೈತ ಮುಖಂಡರಾದ ಗುರುಸ್ವಾಮಿಗೌಡ ಚಿಂತನಗೋಷ್ಠಿ ಉದ್ಘಾಟಿಸಲಿದ್ದು, ಕೃಷಿಕರ ಸಮಸ್ಯೆ ಮತ್ತು ನೈಸರ್ಗಿಕ ಕೃಷಿ ವಿಷಯದ ಕುರಿತು ಮಾತನಾಡಲಿದ್ದಾರೆ. ಜ.12ರಂದು ರಾಷ್ಟ್ರೀಯ ಬಸವ ದಳ 29ನೇ ಅಧಿವೇಶನ ನಡೆಯಲಿದ್ದು, ನಗರದ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕ ಡಾ. ಕೆ.ಬಿ.ಲಿಂಗೇಗೌಡ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಭಾಗವಹಿಸಲಿದ್ದಾರೆ.

ಜ.13ರಂದು ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಸಚಿವ ಎಚ್.ಕೆ.ಪಾಟೀಲ್ ಅವರು ಶರಣ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಸಮುದಾಯ ಪ್ರಾರ್ಥನೆ ಮತ್ತು ಸಿದ್ದರಾಮೇಶ್ವರ ಜಯಂತಿ ಮೇಳದ ಭಾಗವಾಗಿದ್ದು, ಬಸವಾಮೃತ ಶುದಟಛಿಜಲ ನೀರಿನ ಯಂತ್ರ ಉದ್ಘಾಟನೆ, ರಕ್ತದಾನ ಶಿಬಿರ, ಕ್ಯಾನ್ಸರ್ ತಪಾಸಣೆ, ಯೋಗಾಸನ ಸೇರಿದಂತೆ ಹಲವು ಕಾರ್ಯಕ್ರಮಗಳು ಮೇಳದಲ್ಲಿ ನಡೆಯಲಿದ್ದು, ಮಹಾರಾಷ್ಟ್ರ , ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಗೋವಾಗಳಿಂದ ಜನರು ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com