ಸಿಎಸ್ ಸೇರಿ 4 ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ 4 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಹೈಕೋರ್ಟ್ ತುರ್ತು ನೋಟೀಸ್ ಜಾರಿ ಮಾಡಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಮೈಸೂರು ಪೇಪರ್ ಮಿಲ್ಸ್ ಕಾರ್ಖಾನೆಯನ್ನು ದೀರ್ಘಕಾಲದ ಅವಧಿಗೆ ಗುತ್ತಿಗೆ ನೀಡುವ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಪ್ರಮುಖ 4 ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳಿಗೆ ಹೈಕೋರ್ಟ್ ತುರ್ತು ನೋಟೀಸ್ ಜಾರಿ ಮಾಡಿದೆ. ಮೈಸೂರು ಪೇಪರ್ ಮಿಲ್ಸ್ ಉದ್ಯೋಗಿಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಅವರಿದ್ದ ರಜಾಕಾಲದ ನ್ಯಾಯಪೀಠ ಗುತ್ತಿಗೆ ನೀಡುವ ಕುರಿತು ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಹಾಜರಿದ್ದ ಅರ್ಜಿದಾರರ ಪರ ವಕೀಲ ಶಿವಪ್ರಕಾಶ್, ಸಿಖ್ ಇಂಡಸ್ಟ್ರಿಯಲ್ ಕಂಪನಿ ಆ್ಯಕ್ಟ್ ಪ್ರಕಾರ ಮೈಸೂರು ಮಿಲ್ಸ್ ಸಂಸ್ಥೆಯನ್ನು ಪರಭಾರೆ
ಇಲ್ಲವೇ ಗುತ್ತಿಗೆ ನೀಡುವಂತಿಲ್ಲ. ಆದರೆ, ಈ ನಿಯಮ ಮೀರಿರುವ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಗಳು, ಕಾರ್ಖಾನೆ ಯನ್ನು ದೀರ್ಘಕಾಲದ ಗುತ್ತಿಗೆ ನೀಡುವುದಾಗಿ ಡಿ.7ರಂದು ಆದೇಶ ಹೊರಡಿಸಿದ್ದರು. ಮಿಲ್ಸ್‍ನಲ್ಲಿ ಕಂಡುಬಂದ ಅವ್ಯಹಾರ ಹಾಗೂ ಹಣದ ದುರುಪಯೋಗದ ಕುರಿತು ಪರಿಶೀಲಿಸಲು ಸರ್ಕಾರ 2011ರಲ್ಲಿ ನೇಮಿಸಿದ್ದ ಶಾಸಕ ಪಟ್ಟಣಶೆಟ್ಟಿಯವರ ನೇತೃತ್ವದ ಸದನ ಸಮಿತಿ ಸರ್ಕಾರಕ್ಕೆ 26 ಅಂಶಗಳ ವರದಿ ಸಲ್ಲಿಸಿದೆ.

ಅದರಲ್ಲಿ ನಷ್ಟದಲ್ಲಿರುವ ಕಾರ್ಖಾನೆಯ ಪುನಶ್ಚೇತನ ಹಾಗೂ ಪುನರ್ವಸತಿ ಕಲ್ಪಿಸುವ ಜವಾಬ್ದಾರಿಯನ್ನು ಭಾರತೀಯ ಕೈಗಾರಿಕಾ ಬ್ಯಾಂಕ್‍ಗೆ(ಐಡಿಬಿ) ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ. ಆದರೆ, ಸರ್ಕಾರ ಆ ಜವಾಬ್ದಾರಿಯನ್ನು ಜಪಾನ್ ಮೂಲದ ಖಾಸಗಿ ಸಂಸ್ಥೆಗೆ ನೀಡಿದೆ. ಇದರಿಂದ ಕಾರ್ಖಾನೆ ಹಾಗೂ ಅದರ ಸಿಬ್ಬಂದಿಗೆ ಯಾವುದೇ ಲಾಭವಾಗುತ್ತಿಲ್ಲ. ಆದ್ದರಿಂದ ಮತ್ತೆ ಆ ಜವಾಬ್ದಾರಿ ಐಡಿಬಿಗೆ ಹಸ್ತಾಂತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com