ಸಾಂದರ್ಭಿಕ ಚಿತ್ರ
ಜಿಲ್ಲಾ ಸುದ್ದಿ
ಮಕ್ಕಳಿಬ್ಬರನ್ನು ಜಲಾಶಯಕ್ಕೆ ತಳ್ಳಿ ತಾಯಿ ಆತ್ಮಹತ್ಯೆ
ಮಕ್ಕಳಿಬ್ಬರನ್ನು ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ನಗು ಜಲಾಶಯಕ್ಕೆ ತಳ್ಳಿ, ಬಳಿಕ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಮೈಸೂರು : ಮಕ್ಕಳಿಬ್ಬರನ್ನು ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ನಗು ಜಲಾಶಯಕ್ಕೆ ತಳ್ಳಿ, ಬಳಿಕ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಗೀತಾ(28) ಮತ್ತುಮಕ್ಕಳಾದ ಹರ್ಷನ್ (8),ಸಿಂಚನಾ(6) ಆತ್ಮಹತ್ಯೆಗೆ ಶರಣಾದವರು. ಗೀತಾ ಎಚ್.ಡಿ.ಕೋಟೆಯ ಬಡಗಲ ಪುರ ಗ್ರಾಮದವರಾಗಿದ್ದು 10 ವರ್ಷಗಳ ಹಿಂದೆ ಸಣ್ಣ ಸ್ವಾಮಿ ಎನ್ನುವವರನ್ನು ವಿವಾಹವಾಗಿದ್ದರು.
ಸ್ಥಳಕ್ಕಾಮಿಸಿದ ಅಗ್ನಿಶಾಮಕದಳದ ಸಿಬಂದಿ ಮತ್ತು ಪೊಲೀಸರು ಮೂರು ಶವಗಳನ್ನು ಜಲಾಶಯದಿಂದ ಮೇಲಕ್ಕೆತ್ತಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ