
ಬೆಂಗಳೂರು: ಅರ್ಕಾವತಿ ಡಿನೋಟಿಫಿಕೇಷನ್, ಅರಣ್ಯ ಒತ್ತುವರಿ, ಇಂಧನ ಇಲಾಖೆಯಲ್ಲಿನ ಅಕ್ರಮ ಹಾಗೂ ಕೆಪಿಎಸ್‍ಸಿ ನೇಮಕ ವಿವಾದವನ್ನು ಉಭಯ ಸದನಗಳಲ್ಲಿ ಚರ್ಚೆಗೆ
ತೆಗೆದುಕೊಳ್ಳಲು ಬಿಜೆಪಿ ಶಾಸಕಾಂಗ ಸಭೆ ನಿರ್ಧರಿಸಿದೆ. ಕೆಪಿಎಸ್‍ಸಿ ಹೊರತುಪಡಿಸಿ ಉಳಿದ ವಿಚಾರಗಳು ಹಿಂದಿನ ಅ„ವೇಶನದಲ್ಲಿಯೂ ಪ್ರಸ್ತಾಪ ವಾಗಿದ್ದವು. ಆದರೆ ಈ ಬಾರಿ ಸರ್ಕಾರದ ಮೇಲೆ ಮತ್ತಷ್ಟು ದಾಖಲೆಗಳೊಂದಿಗೆ ಟೀಕಾ ಪ್ರಹಾರ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸರ್ಕಾರದ ವಿರುದ್ಧ ಮಾತನಾಡುವಾಗ ಪ್ರತಿಯೊಬ್ಬ ಸದಸ್ಯರೂ ನಾಯಕರ ಬೆಂಬಲಕ್ಕೆ ನಿಲ್ಲುವಂತೆ ಸೂಚಿಸಲಾಗಿದೆ. ಆದರೆ, ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ ಕುರಿತಂತೆ ಶಾಸಕಾಂಗ ಸಭೆಯಲ್ಲಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಬೆರಳೆಣಿಕೆ ಶಾಸಕರು ಮಾತ್ರ ಈ ಹೋರಾಟಕ್ಕೆ ಮುಂದೆ ಬಂದಿರುವುದು ಹಾಗೂ ಮುಜುಗರ ಅನುಭವಿಸಿರುವುದಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿರುವ ಗೊಂದಲಗಳ ಬಗ್ಗೆ ಬೆಂಗಳೂರು ನಗರ ಶಾಸಕರು ಹಾಗೂ ಕೆಲವು ಬಿಜೆಪಿ ಮುಖಂಡರ ನಡುವಿನ ಶೀತಲ ಸಮರ ಶಾಸಕಾಂಗ ಸಭೆಯಲ್ಲಿಯೂ ಕಂಡು ಬಂದಿದೆ. ಅರ್ಕಾವತಿ ಹೋರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಶಾಸಕರ ಅಭಿಪ್ರಾಯ ಕೇಳಿದಾಗ ಆರ್.ಅಶೋಕ ಹಾಗೂ ಜಗದೀಶ್‍ಕುಮಾರ್ ಮೌನವಹಿಸಿದ್ದರು ಎನ್ನಲಾಗಿದೆ. ಆದರೆ ಉಳಿದ ಶಾಸಕರು ತಮ್ಮ ವಿರೋಧವಿಲ್ಲ ಎಂದು ಪಕ್ಷದ ಮುಖಂಡರಿಗೆ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್‍ನಲ್ಲಿ ಇಂಧನ ಇಲಾಖೆಯಲ್ಲಿನ ಅಕ್ರಮಗಳ ಕುರಿತಂತೆ ಈಶ್ವರಪ್ಪ ನಿಲುವಳಿ ಸೂಚನೆ ಮಂಡಿಸಲು ನಿರ್ಧರಿಸಿದ್ದಾರೆ. ಗಣಿ ಅಕ್ರಮ ವಿರುದಟಛಿ ಹೋರಾಡಿದ್ದ ಸಿದ್ದರಾಮಯ್ಯ ಅವರು ಆರು ಗಣಿ ಕಂಪನಿಗಳಿಗೆ ಅಕ್ರಮವಾಗಿ ಪರವಾನಗಿ ಶಿಫಾರಸು ಮಾಡಿರುವ ಪ್ರಕರಣವನ್ನು ಸದನದಲ್ಲಿ ಕೈಗೆತ್ತಿಕೊಳ್ಳಲು ಬಿಜೆಪಿ ನಿರ್ಧರಿಸಿದೆ.
Advertisement