ಕರಾವಳಿ ಭದ್ರತೆಗೆ ಕೇಂದ್ರ ಬೆಟಾಲಿಯನ್

ರಾಜ್ಯದ ಕರಾವಳಿಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಕರಾವಳಿ ಕಾವಲು ಪಡೆ ಬೆಟಾಲಿಯನ್ ಹಾಗೂ...
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್

ಬೆಂಗಳೂರು: ರಾಜ್ಯದ ಕರಾವಳಿಯನ್ನು ಮತ್ತಷ್ಟು ಬಲಪಡಿಸಲು ಕೇಂದ್ರ ಕರಾವಳಿ ಕಾವಲು ಪಡೆ ಬೆಟಾಲಿಯನ್ ಹಾಗೂ ಭಾರತೀಯ ಮೀಸಲು ಪೊಲೀಸ್ ಪಡೆಗೆ ಮತ್ತೆರಡು ಬೆಟಾಲಿಯನ್ ಒದಗಿಸುವು ದಾಗಿ ಗೃಹ ಸಚಿವ ರಾಜನಾಥ್ ಸಿಂಗ್ ಆಶ್ವಾಸನೆ ನೀಡಿದ್ದಾರೆ.

ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಗಳೊಂದಿಗೆ ನಡೆಸಿದ ಸಭೆಯಲ್ಲಿ ರಾಜ್ಯದ ಬೇಡಿಕೆಗಳಿಗೆ ರಾಜನಾಥ್ ಸಿಂಗ್ ಸ್ಪಂದಿಸಿದರು. ತುಮಕೂರು ಹಾಗೂ ದಾವಣಗೆರೆ ಯಲ್ಲಿ ಮೀಸಲು ಪಡೆ ಬೆಟಾಲಿಯನ್ ಸ್ಥಾಪನೆಯಾಗಬೇಕು ಎನ್ನುವ ರಾಜ್ಯದ ಪ್ರಸ್ತಾಪವನ್ನು ದೆಹಲಿಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಸಚಿವರು ಹೇಳಿದರು.

ನಗರದಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರ ಮೇಲೆ ಸೂಕ್ತ ನಿಗಾ ಇರಿಸಬೇಕು. ಈಶಾನ್ಯ ಭಾರತೀಯರ ಬಗ್ಗೆ ಭೇದಭಾವ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗೃಹ ಸಚಿವರು ನಗರ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ದಾಖಲೆಗಳಿಲ್ಲದೇ ಗ್ರಾಹಕರು, ಸಮಾಜಘಾತುಕ ಶಕ್ತಿಗಳ ಕೈಗೆ ಮೊಬೈಲ್ ಫೋನ್ ಸಿಮ್ ಕಾರ್ಡ್ ಸಿಗುತ್ತಿರುವ ಬಗ್ಗೆ ಚರ್ಚೆಯಾಯಿತು. ಈ ರೀತಿಯ ಸಿಮ್ ಕಾರ್ಡ್ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದರು.

ಜನಸ್ನೇಹಿ, ಕಠಿಣ ಪೊಲೀಸ್ ಆಗಿರಿ:
ಪೊಲೀಸರು ಜನಸ್ನೇಹಿಯಾಗಿರಬೇಕು ಎಂದು ಒತ್ತಿ ಹೇಳಿದ ಗೃಹ ಸಚಿವರು, ಉಗ್ರರು ಹಾಗೂ ಅಪರಾ„ಗಳ ಪಾಲಿಗೆ ಟಫ್ ಪೊಲೀಸ್ ಆಗಿದ್ದು ಕಠಿಣ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ರಾಜ್ಯದಲ್ಲಿ ಕೇಂದ್ರ ಗೃಹ ಇಲಾಖೆಗೆ ಸಂಬಂಧಿಸಿದ, ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಬೇಗ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು.
ನಿರ್ಭಯಾ ಫಂಡ್‍ನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಅಲ್ಲದೇ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಶೇ.20ರಷ್ಟು ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಿಕೊಳ್ಳುವಂತೆ ಹೇಳಿದರು.

ಸಭೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ಬಾಂಬ್ ಸ್ಫೋಟ, ಶಂಕಿತ ಉಗ್ರರ ಬಂಧನ, ಟರ್ಕಿಯಿಂದ ಗಡಿಪಾರಾದವರ ವಿಚಾರಣೆ ಹಾಗೂ ಒಟ್ಟಾರೆಯಾಗಿ ನಗರ ಪೊಲೀಸರ ಕರ್ತವ್ಯ ನಿರ್ವಹಣೆ ಬಗ್ಗೆ ಗೃಹ ಸಚಿವರಿಗೆ ವಿವರಿಸಲಾಗಿದೆ. ಅಲ್ಲದೇ ನಗರಕ್ಕೆ ಅಗತ್ಯವಿರುವ ಹೊಸ ಯೋಜನೆಗಳು ಹಾಗೂ ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದ್ದು ಅದಕ್ಕೆ ಸಚಿವರು ಸೂಕ್ತವಾಗಿ ಸ್ಪಂದಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com