ವಿಶ್ವಕರ್ಮ ನಿಗಮಕ್ಕೆ ರು. 100 ಕೋಟಿ ಕೊಡಿ

ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಕೇವಲ ರು. 5 ಕೋಟಿ ಅನುದಾನ ನೀಡಿರುವುದು ದುರದೃಷ್ಟಕರ...
ಕೆ.ಪಿ. ನಂಜುಂಡಿ
ಕೆ.ಪಿ. ನಂಜುಂಡಿ

ಬೆಳಗಾವಿ: ವಿಶ್ವಕರ್ಮ ಸಮುದಾಯದ ಅಭಿವೃದ್ಧಿ  ನಿಗಮಕ್ಕೆ ಕೇವಲ ರು. 5 ಕೋಟಿ ಅನುದಾನ ನೀಡಿರುವುದು ದುರದೃಷ್ಟಕರ. ಈ ನಿಗಮಕ್ಕೆ ಕನಿಷ್ಠ ರು. 100 ಕೋಟಿ ಅನುದಾನ ನೀಡಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.ನಗರದ ಕುಮಾರಗಂಧರ್ವ ರಂಗಮಂದಿರದಲ್ಲಿ ಸೋಮವಾರ ಆಯೋ ಜಿಸಿದ್ದ ವಿಶ್ವಕರ್ಮ ಸಮಾಜ ಜಾತಿವಾರು ಜನಗಣತಿ ಜಾಗೃತಾ ಆಂದೋಲನ, 6ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ, ಕಾರ್ಯಕರ್ತರ ಸತ್ಕಾರ ಸಮಾರಂಭದ ಪೂರ್ವಭಾವಿ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು. ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮಾಜದ ನಿಗಮಕ್ಕೆ ಕೇವಲ ರು. 5 ಕೋಟಿ ಅನುದಾನ ನೀಡಿರುವುದಕ್ಕೆ ಅಸಮಾಧಾನವಿದೆ, ನೋವಿದೆ. ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಒತ್ತಾಯಿಸಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡದಿದ್ದರೆ ಹೋರಾಟಕ್ಕೀಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದರು.14 ವರ್ಷಗಳ ನಮ್ಮ ಹೋರಾಟದ ಸಲುವಾಗಿ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ. ಯುವ ನಾಯಕರಿಂದಲೂ ಈ ನಿಗಮ ಬಂದಿಲ್ಲ. ಹೋರಾಟದ ಮೂಲಕ ನಾವು ನಿಗಮವನ್ನು ತಂದಿದ್ದೇವೆ. ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ ಎಂದರು. ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ಶ್ರೀನಿವಾಸ ಆಚಾರ್ಯ, ಕೆ.ಪಿ. ನಂಜುಂಡಿ ಅವರನ್ನು ಸಮಾಜದ ಪರವಾಗಿ ಸನ್ಮಾನಿಸಲಾಯಿತು. ನಿಟ್ರಹಳ್ಳಿ ಮದುಗಿರಿಯ ನೀಲಕಂಠಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಬಿ. ಆರ್.ಬಡಿಗೇರ, ವಿಶ್ವಕರ್ಮ ಸಮುದಾಯಗಳ ಅಬಿsವೃದಿಟಛಿ ನಿಗಮದ ನಾಮನಿರ್ದೇಶಿತ ಸದಸ್ಯ ಕಲ್ಲಪ್ಪ ಬಡಿಗೇರ, ಸಿ.ವೈ. ಪತ್ತಾರ ಮೊದಲಾದವರು ಇದ್ದರು.

ಜಾಗೃತಿ ಇರಲಿ
ಚಿನ್ನಾಭರಣ ಕೊಳ್ಳುವಾಗ ಆಭರಣಗಳ ಗುಣಮಟ್ಟ ಹಾಗೂ ಹಾಲ್‍ಮಾರ್ಕ್ ಚಿಹ್ನೆಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ಮಾಲೀಕರೂ
ಆಗಿರುವ ಕೆ.ಪಿ. ನಂಜುಂಡಿ ಮನವಿ ಮಾಡಿದರು. ಲಕ್ಷ್ಮೀ ಗೋಲ್ಡ್ ಪ್ಯಾಲೇಸ್ ನಲ್ಲಿ ಆಭರಣ ಖರೀದಿಸಿದ್ದ ಗ್ರಾಹಕರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ
ಅವರು ಮಾತನಾಡಿದರು. ಲಕ್ಷ್ಮೀ ಗೋಲ್ಡ್ ಪ್ಯಾಲೇಸ್‍ನಲ್ಲಿ ಚಿನ್ನಾಭರಣ, ಸೀರೆ ಖರೀದಿಸಿದ್ದ ಗ್ರಾಹಕರಿಗೆ ಏರ್ಪಡಿಸಲಾಗಿದ್ದ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ 27 ವಿಜೇತರನ್ನು
ಆಯ್ಕೆ ಮಾಡಲಾಯಿತು. ಜಿ.ಬಿ. ತುಬಚಿ ಮತ್ತು ಎಸ.ಎಸ್. ಗಾಂವಕರ ಅವರಿಗೆ ಬಂಪರ್ ಬಹುಮಾನವಾಗಿ ಮಾರುತಿ ಸ್ವಿಪ್ಟ್ ಕಾರು ಲಭಿ ಸಿದೆ. 15 ಜನರಿಗೆ ಸಿಲ್ಕ್ ಸೀರೆ, 10 ಜನರಿಗೆ ಚಿನ್ನದ ನಾಣ್ಯ ಲಭಿಸಿತು. ಕಾರ್ಯಕ್ರಮದ ಸಾನ್ನಿಧ್ಯವನ್ನು ಮಧುಗಿರಿ ನಿಟ್ರಹಳ್ಳಿ ನೀಲಕಂಠ ಸ್ವಾಮೀಜಿ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ  ಮಾದೇವಿ ರೊಟ್ಟಿ, ಕಾರ್ತಿಕ ಸೇಲ್ಸ್‍ನ ಮಾಲೀಕ ಷಣ್ಮುಖ ಅವರನ್ನು ಈ ಸಂದರ್ಭದಲ್ಲಿ ಸನ್ಮಾಯಿಸಲಾಯಿತು.

ಸಮಾಜದ ಸಂಘಟನೆ ಕಾರ್ಯ ನಿತ್ಯ ನಿರಂತರವಾಗಬೇಕು. ನಮ್ಮ ಸಮಾಜದ ಅಂಕಿ ಸಂಖ್ಯೆ ಸರಿಯಾಗದಿದ್ದರೆ ನಮ್ಮ ಸಮುದಾಯ ನಿರ್ಲಕ್ಷಕ್ಕೆ ಒಳಪಡುತ್ತದೆ. ಆದ್ದರಿಂದ ಜಾತಿ ಗಣತಿ ವೇಳೆ ಜಾತಿ ಕಾಲಂನಲ್ಲಿ ಉಪಜಾತಿಗಳ ಬದಿಗೊತ್ತಿ ವಿಶ್ವಕರ್ಮ ಎಂದೇ ನಮೂದಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ನಮಗೆ ಸೌಲಭ್ಯದೊರೆಯಬೇಕಿದೆ.
-ಕೆ.ಪಿ. ನಂಜುಂಡಿ,
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com