ಅಕ್ರಮ ಸಕ್ರಮ: ಅರ್ಜಿ ವಜಾ

ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಇದ್ದ ಕೆಲವು ದೋಷಗಳನ್ನು ಹೊಸ ಅಧಿಸೂಚನೆಯಲ್ಲಿ...
ಅಕ್ರಮ ಸಕ್ರಮ: ಅರ್ಜಿ ವಜಾ

ಬೆಂಗಳೂರು: ಅಕ್ರಮ-ಸಕ್ರಮ ಯೋಜನೆಗೆ ಸಂಬಂಧಿಸಿದಂತೆ ಇದ್ದ ಕೆಲವು ದೋಷಗಳನ್ನು ಹೊಸ ಅಧಿಸೂಚನೆಯಲ್ಲಿ ಸರಿಪಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಪೀಠದ ಗಮನಕ್ಕೆ ತಂದಿದೆ.

ಈ ಹಿನ್ನೆಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಸದ್ಯ ಸಲ್ಲಿಕೆ ಯಾಗಿರುವ ಅರ್ಜಿ ಮಾನ್ಯತೆ ಪಡೆಯುವುದಿಲ್ಲ ಎಂದು ಆದೇಶಿಸಿ ಹೈಕೋರ್ಟ್ ಅರ್ಜಿ ವಜಾಗೊಳಿಸಿದೆ. 2007ರಲ್ಲಿ ಮಂಡಿಸಲಾಗಿದ್ದ ಅಕ್ರಮ- ಸಕ್ರಮ ಯೋಜನೆಯಲ್ಲಿ ಲೋಪದೋಷಗಳಿರುವುದಾಗಿ ಸಿಟಿಜನ್ ಫೋರಂ ಫಾರ್ ಮಂಗಳೂರು ಡೆವಲಪ್ ಮೆಂಟ್ ಸೇರಿ ಅನೇಕರು ಹೈಕೋರ್ಟ್‍ಗೆ ಅರ್ಜಿ ದಾಖಲಿಸಿದ್ದರು.

ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್. ವಘೇಲಾ ಮತ್ತು ನ್ಯಾ.ಅಶೋಕ್ ಬಿ ಹಿಂಚಿಗೇರಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ಈ ಕುರಿತು ಹೊಸದಾದ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಈ ಅರ್ಜಿ ತನ್ನ ಮಾನ್ಯತೆ ಕಳೆದುಕೊಂಡಿದೆ. ಸರ್ಕಾರ ಸದ್ಯ ಹೊರಡಿಸಿರುವ ಅಧಿಸೂಚನೆ ಯಲ್ಲಿ ಲೋಪಗಳಿದ್ದರೆ ಹೊಸ ಅರ್ಜಿ ಸಲ್ಲಿಸುವಂತೆ ಅವಕಾಶ ಕಲ್ಪಿಸಿ ಅರ್ಜಿ ವಜಾಗೊಳಿಸಿದೆ. ಇದರಿಂದ ಕಳೆದ ಎಂಟು ವರ್ಷದಿಂದ ಅಕ್ರಮ-ಸಕ್ರಮ ಯೋಜನೆಯ ಕುರಿತು ಸಲ್ಲಿಕೆಯಾಗಿದ್ದ ಅರ್ಜಿ ಹೈಕೋರ್ಟ್ ಅಂಗಳದಿಂದ ಸದ್ಯ ಹೊರ ಬಂದಿದ್ದು, ಸರ್ಕಾರದ ಮುಂದಿನ ನಡೆ ಕುರಿತು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.

ಸರ್ಕಾರ ಹೊಸ ಅಧಿ ಸೂಚನೆಯನ್ನು 2014ರ ಮೇ 28ರಲ್ಲಿ ಹೊರಡಿಸಿತ್ತು. ಹಿಂದಿನ ಅಧಿಸೂಚನೆಯಲ್ಲಿದ್ದ ದೋಷಗಳನ್ನು ಸರಿಪಡಿಸಲು ಆಕ್ಷೇಪಣೆ ಹಾಗೂ ಸಲಹೆಗಳನ್ನು ಸರ್ಕಾರ ಪಡೆದಿತ್ತು. ಸದ್ಯ ಆ ಸಲಹೆಗಳನ್ನು ಪರಿಗಣಿಸಿ ಪರಿಷ್ಕೃತ ಅಧಿಸೂಚನೆ ಹೊರಡಿಸಲಾಗಿದೆ. ಸಕ್ರಮ ಗೊಳಿಸುವ ಸಂಬಂಧ ಅರ್ಜಿ ಆಹ್ವಾನಿಸಲು ಪ್ರಚಾರ ನೀಡಬೇಕಿದ್ದು, ಸದ್ಯ ಲೋಪಗಳನ್ನು ಸರಿಪಡಿಸಲಾಗಿದೆ ಎಂದು ಈ ಹಿಂದೆ ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಪೀಠದ ಗಮನಕ್ಕೆ ತಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com