ಒವೈಸಿ ಸಭೆಗೆ ಅನುಮತಿ ಸಬ್‍ಇನ್ಸ್ ಪೆಕ್ಟರ್ ಸಸ್ಪೆಂಡ್

ಆಲ್ ಇಂಡಿಯಾ ಮಜ್ಲಿಸ್ -ಇ-ಇತ್ತೆಹದುಲ್ ಮುಸ್ಲಿಮೀನ್ ಪಕ್ಷದ ನಾಯಕ, ಸಂಸದ ಅಸಾವುದ್ದೀನ್ ಒವೈಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಲ್ ಇಂಡಿಯಾ ಮಜ್ಲಿಸ್ -ಇ-ಇತ್ತೆಹದುಲ್ ಮುಸ್ಲಿಮೀನ್ ಪಕ್ಷದ ನಾಯಕ, ಸಂಸದ ಅಸಾವುದ್ದೀನ್ ಒವೈಸಿ ನಗರದಲ್ಲಿ ನಡೆಸಲು ಉದ್ದೇಶಿಸಿದ್ದ ರಾಜಕೀಯ ಕಾರ್ಯಕ್ರಮಕ್ಕೆ ತಮ್ಮ ವ್ಯಾಪ್ತಿ ಇಲ್ಲದಿದ್ದರೂ ಅನುಮತಿ ನೀಡಿದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಎಸ್ಸೈ ಪ್ರದೀಪ್ ಪೂಜಾರಿಯನ್ನು ಅಮಾನತು ಗೊಳಿಸಲಾಗಿದೆ.

ಪ್ರಚೋದನಕಾರಿ ಭಾಷಣ, ಚುನಾವಣೆ ವೇಳೆ ತೆಲುಗು ಏಜೆಂಟ್ ಸೇರಿದಂತೆ ಸೇರಿದಂತೆ ಅಸಾವುದ್ದೀನ್ ಒವೈಸಿ ವಿರುದ್ಧ ದೇಶದ ವಿವಿಧೆಡೆ 4 ಕ್ರಿಮಿನಲ್ ಪ್ರಕರಣಗಳು
ದಾಖಲಾಗಿವೆ. ಕೆಲವು ಪ್ರಕರಣಗಳಲ್ಲಿ ಅಸಾವುದ್ದೀನ್ ಜತೆ ಸಹೋದರ ವಿವಾದಿತ ನಾಯಕ ಅಕ್ಬರುದ್ದೀನ್ ಒವೈಸಿಯೂ ಆರೋಪಿಯಾಗಿದ್ದಾರೆ. ಇಂಥ ಹಿನ್ನೆಲೆ ಇರುವ ನಾಯಕರ ರಾಜಕೀಯ ಕಾರ್ಯಕ್ರಮಕ್ಕೆ ಅನುಮತಿ ನೀಡುವಾಗ ಪರಿಶೀಲಿಸಬೇಕಿತ್ತು. ಸಭೆ ನಡೆಸುತ್ತಿರುವವರ ಹಿನ್ನೆಲೆ ತಿಳಿದುಕೊಳ್ಳದೇ ಅನುಮತಿ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಾಪ್ತಿ ಮೀರಿ ಅನುಮತಿ
ಫೆ..8ರಂದು ಅಸಾವು ದ್ದೀನ್ ಒವೈಸಿ ಶಿವಾಜಿನಗರದ ಚೋಟಾ ಮೈದಾನದಲ್ಲಿ ರಾಜಕೀಯ ಸಭೆ ಏರ್ಪಡಿಸಿದ್ದು ಅವರ ಪರವಾಗಿ ಪಕ್ಷದ ಸ್ಥಳೀಯ ಮುಖಂಡರು ಅನುಮತಿ ಕೋರಿ ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ವ್ಯಾಪ್ತಿಗೆ ಬಾರದ ರಾಜಕೀಯ ಕಾರ್ಯಕ್ರಮವೊಂದಕ್ಕೆ ಎಸ್ಸೈ  ಪ್ರದೀಪ್ ಪೂಜಾರಿ ಅನುಮತಿ ನೀಡಿದ್ದರು.

ಬಳಿಕ ಈ ವಿಷಯ ಹಿರಿಯ ಅಧಿಕಾರಿಗಳ ಗಮಕ್ಕೆ ಬಂದಿತ್ತು. ಈ ಬಗ್ಗೆ ಪರಿಶೀಲಿಸಿದ ಹಿರಿಯ ಅಧಿಕಾರಿಗಳು ಅನುಮತಿಯನ್ನು ವಾಪಸ್ ಪಡೆದಿದ್ದರು. ನಗರದಲ್ಲಿ `ಮೆರವಣಿಗೆಗಳು ಹಾಗೂ ಸಭೆಗಳ ನಿಯಂತ್ರಣ-2009' ಆದೇಶದ ಅನ್ವಯ ಒಂದೇ ಠಾಣೆ ವ್ಯಾಪ್ತಿಗೆ ಒಳಪಡುವ ಜಾತ್ರೆ-ಉತ್ಸವ ಸೇರಿದಂತೆ ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಮಾತ್ರ ಅನುಮತಿ ನೀಡುವ ಅಧಿಕಾರ ಠಾಣೆ ಇನ್ಸ್‍ಪೆಕ್ಟರ್‍ಗೆ ಇರುತ್ತದೆ. ಎರಡು ಅಥವಾ ಹೆಚ್ಚು ಠಾಣೆಗಳ ವ್ಯಾಪ್ತಿಯ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಅಧಿಕಾರ ಡಿಸಿಪಿ ಹಾಗೂ ಮೇಲ್ಮಟ್ಟದ ಅಧಿಕಾರಿಗಳಿಗೆ ಮಾತ್ರ ಇರುತ್ತದೆ. ಅಲ್ಲದೇ ಭಾಗಿಯಾಗುವವರ ವಿರುದ್ಧ ಇರುವ ಪ್ರಕರಣಗಳು ಹಾಗೂ ಅಪರಾಧ ಹಿನ್ನೆಲೆ ಪರಿಶೀಲಿಸಿ, ಅನುಮತಿ ನೀಡಬೇಕೋ, ಬೇಡವೋ ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಆದರೆ, ಎಸ್ಸೈ ತಮ್ಮ ವ್ಯಾಪ್ತಿ ಮೀರಿದ ಕೆಲಸ ಮಾಡಿದ್ದು ಸೂಕ್ತವಲ್ಲ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ವ್ಯಾಪ್ತಿ ಮೀರಿ ಒಪ್ಪಿಗೆ
ನೀಡಿದ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಎಸ್ಸೈಯಾವ ಕಾರ್ಯಕ್ರಮ? ಎಷ್ಟು ಜನರು ಸೇರುತ್ತಾರೆ? ಭಾಷಣಕಾರರು ಯಾರು? ಎಷ್ಟು ಗಂಟೆಗೆ ಆರಂಭ? ಯಾವಾಗ ಮುಕ್ತಾಯ- ಹೀಗೆ ಎಲ್ಲ ಮಾಹಿತಿ ಒಳಗೊಂಡ ಅರ್ಜಿಯನ್ನು ಕಾರ್ಯಕ್ರಮ ನಡೆಯಲಿರುವ ಪ್ರದೇಶದ ಸಂಬಂಧಪಟ್ಟ ಡಿಸಿಪಿಗೆ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಅನುಮತಿ ನೀಡುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com