ಅಕ್ರಮ -ಸಕ್ರಮ ತಿದ್ದುಪಡಿಗೆ ಒಪ್ಪಿಗೆ

ನಗರ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಅಕ್ರಮ-ಸಕ್ರಮ...
ಅಕ್ರಮ -ಸಕ್ರಮ ತಿದ್ದುಪಡಿಗೆ ಒಪ್ಪಿಗೆ
Updated on

ಬೆಂಗಳೂರು: ನಗರ ಪ್ರದೇಶದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡುವ ಅಕ್ರಮ-ಸಕ್ರಮ ಕಾಯ್ದೆ ತಿದ್ದುಪಡಿಗೆ ಕೊನೆಗೂ ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ಕಂದಾಯ ಇಲಾಖೆಯ 94 ಸಿಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಕಳುಹಿಸಿದ್ದ ವಿಧೇಯಕಕ್ಕೆ ಸುದೀರ್ಘ ಅವಧಿಯ ಬಳಿಕ ರಾಜಭವನದಿಂದ ಅಂಕಿತ ದೊರಕಿದ್ದು, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಕೆರೆ, ಉದ್ಯಾನವನ, ಕಾಲುವೆ ಹಾಗೂ ಇತರೆ ಸ್ವರೂಪದ ಕಂದಾಯ ಭೂಮಿ ಹೊರತು ಪಡಿಸಿದ ಸರ್ಕಾರಿ ಭೂಮಿಯಲ್ಲಿ 2012ಕ್ಕೆ ಮುನ್ನ ಕಟ್ಟಿಕೊಂಡ ಮನೆಗಳನ್ನು ಸಕ್ರಮ ಮಾಡುವುದಕ್ಕೆ ಮಾತ್ರ ಈ ಕಾನೂನು ಅನ್ವಯವಾಗುತ್ತದೆ.

ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಂದಾಯ ಇಲಾಖೆಯ 94ಸಿಗೆ ತಿದ್ದುಪಡಿ ತಂದು ಗ್ರಾಮಾಂತರ ಪ್ರದೇಶದಲ್ಲಿ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಕಟ್ಟಿಕೊಂಡ ಮನೆಗಳನ್ನು ಸಕ್ರಮ ಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ನಗರ ಪ್ರದೇಶಗಳಿಗೂ ಅನ್ವಯವಾಗುವಂತೆ ಕಾನೂನು ತಿದ್ದುಪಡಿಯಾಗಬೇಕೆಂದು ಆಗ್ರಹ ವ್ಯಕ್ತವಾಗಿತ್ತು. ಹೀಗಾಗಿ 94 ಸಿಸಿಗೆ ತಿದ್ದುಪಡಿ ತರಲು ನಿರ್ಧರಿಸ ಸದನದಲ್ಲಿ ಅನುಮೋದಿಸ ಲಾಗಿತ್ತು. ಆದರೆ ಇದಕ್ಕೆ ಅಂದಿನ ರಾಜ್ಯ ಪಾಲರು ಸಹಿ ಹಾಕಿರಲಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮತ್ತೆ ತಿದ್ದುಪಡಿ ಯನ್ನು ರಾಜ್ಯಪಾಲ ರಿಗೆ ಕಳುಹಿಸಿಕೊಡ ಲಾಗಿತ್ತು. ಆದರೆ ಲೋಕಸಭಾ ಚುನಾ ವಣೆ ಸಂದರ್ಭದಲ್ಲಿ ಅರ್ಜಿ ಸ್ವೀಕಾರಕ್ಕೆ ನೀತಿ ಸಂಹಿತೆ ತೊಡಕು ಉಂಟಾಗಿದ್ದರಿಂದ ಅರ್ಜಿ ಸ್ವೀಕರ ಮತ್ತು ಆಕ್ಷೇಪ ಅವ„ಯನ್ನು ಮತ್ತೆ 2 ತಿಂಗಳು ವಿಸ್ತರಿಸಲಾಗಿತ್ತು.

ಆದರೆ ಇಷ್ಟಾದರೂ ರಾಜ್ಯಪಾಲರಿಂದ ವಿಧೇಯಕಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರಾಜಭವನಕ್ಕೆ ಭೇಟಿ ನೀಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಒಪ್ಪಿಗೆ ನೀಡುವಂತೆ ಮನವಿ ಮಾಡಿದ್ದರು. ಕಡತ ಪರಿಶೀಲನೆ ನಡೆಸಿದ ರಾಜ್ಯಪಾಲರು ಗುರುವಾರ
ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ನೀಡಿದ್ದಾರೆ. ಇದರಿಂದ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನುಕೂಲವಾಗುವುದಿಲ್ಲವಾದರೂ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಇನ್ನಿತರ ಸ್ಥಳೀಯ ನಗರ ಸಂಸ್ಥೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, 2020ರವರೆಗೆ ಮಾತ್ರ ಇದು ಅನ್ವಯವಾಗುತ್ತದೆ. ಆ ಬಳಿಕವೂ ಬಾಕಿ ಉಳಿಯುವ ಮನೆಗಳಿಗೆ ಇದರ ಲಾಭ ಅನ್ವಯವಾಗುವುದಿಲ್ಲ.

ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಎಂದರೆ ಇದು ಎಲ್ಲ ವಿಸ್ತೀರ್ಣದ ಮನೆಗಳಿಗೆ ಅನ್ವಯವಾಗುವುದಿಲ್ಲ. 20-30 ನಿವೇಶನಗಳಿಗೆ ಮಾತ್ರ ಲಾಗುವಾಗುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೇವಲ 18 ಕಿಮೀ ವಿಸ್ತೀರ್ಣದ ಪ್ರದೇಶಕ್ಕೆ ಮಾತ್ರ ಅನ್ವಯವಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com