ಸರ್ಕಾರದ ವಿರದ್ಧ ಹೋರಾಟ ಯಾರಿಗೂ ಸಾಧ್ಯವೇ ಆಗುತ್ತಿಲ್ಲ: ದೇವೇಗೌಡ

ರೈತರ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರವೇ ಕಸಿಯುತ್ತಿದ್ದು, ಈ ವಿರುದ್ಧ ಹೋರಾಟ ಮಾಡಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ...
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು: ರೈತರ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರವೇ ಕಸಿಯುತ್ತಿದ್ದು, ಈ ವಿರುದ್ಧ ಹೋರಾಟ ಮಾಡಲು ಯಾರಿಗೂ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ವಿಷಾದ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವೇ ರೈತರ ಭೂಮಿಯನ್ನು ಕಸಿದಿದ್ದು, ಇಧು ನೈಸ್ ಸಂಸ್ಥೆಯ ಕಾರಿಡಾರ್ ಯೋಜನೆಯಲ್ಲಿ ಸಾಬೀತಾಗಿದೆ.  ಈ ಬಗ್ಗೆ ಮಾಧ್ಯಮಗಳೂ ಸಾಕಷ್ಟು ವರದಿ ಮಾಡುತ್ತಿದ್ದು, ಇಂದಿಗೂ ಸನ್ನಿವೇಶದಲ್ಲಿ ಇಂತಹ ಹಗರಣಗಳ ವಿರುದ್ಧ ಹೋರಾಡುವವರೇ ಇಲ್ಲದಂತಾಗಿದೆ.

ಅಧಿಕಾರ ಹಾಗೂ ಹಣದ ಆಸೆಗಾಗಿ ರಾಜಕಾರಣಿಗಳು ವ್ಯವಸ್ಥೆಯನ್ನು ಹಾಳುಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕೆಂಗಲ್ ಹನುಮಂತಯ್ಯ ಸಂಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಯ ಅಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ತಮಿಳುನಾಡಿಗೆ ಕಾವೇರಿ ನೀರು ನೀಡುವ ಸಮಸ್ಯೆ ಭವಿಷ್ಯದಲ್ಲಿ ಮತ್ತಷ್ಟು ಜಟಿಲವಾಗಲಿದೆ. ಬೆಂಗಳೂರಿಗೆ ನೀರು ನೀಡುವುದನ್ನು ನ್ಯಾಯಾಧಿಕರಣ ನಿರ್ಧರಿಸುತ್ತಿದ್ದರೂ ಜನರಿಗೆ ನಿಜವಾದ ನ್ಯಾಯ ದೊರೆಯುತ್ತಿಲ್ಲ. ಹಿಂದೊಮ್ಮೆ ನ್ಯಾಯಾಧಿಕರಣದಲ್ಲಿದ್ದ ಮೂರು ನ್ಯಾಯಾಧೀಶರಲ್ಲಿ ಇಬ್ಬರು ನೀಡಿದ ತೀರ್ಪಿನಿಂದ ಬೇಸತ್ತ ಮೂರನೆಯ ನ್ಯಾಯಾಧೀಶರು, ತಮ್ಮ ಸ್ಥಾನದಿಂದ ತಾವೇ ಕೆಳಗಿಳಿದಿದ್ದರು. ಎಲ್ಲರಿಗೂ ನೀರು ಸಿಗುತ್ತದೆ ಎಂದು ನಂಬಿಸುತ್ತಿದ್ದರೂ, ಹೋರಾಟ ಮಾಡುವವರ ಪಾಲಿಗೆ ಇದು ಉರುಳಾಗಿ ಪರಿಣಮಿಸಿದಿ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com