ಫೆಬ್ರವರಿ ೨೮ ರಿಂದ ಎರಡು ದಿನ ಬೆಳವಾಡಿ ಉತ್ಸವ

ಮಹಿಳೆಯರ ಸೈನ್ಯ ಕಟ್ಟಿ ಹೋರಾಡಿದ ಮೊದಲ ರಾಣಿ ಎನ್ನಲಾದ ಬೆಳವಾಡಿ ಮಲ್ಲಮ್ಮನ ಹೆಸರಿನಲ್ಲಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಮಹಿಳೆಯರ ಸೈನ್ಯ ಕಟ್ಟಿ ಹೋರಾಡಿದ ಮೊದಲ ರಾಣಿ ಎನ್ನಲಾದ ಬೆಳವಾಡಿ ಮಲ್ಲಮ್ಮನ ಹೆಸರಿನಲ್ಲಿ ಬೆಳಗಾವಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಪ್ರಾರಂಭಿಸುವಂತೆ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.

ಶನಿವಾರ ಬೆಳವಾಡಿ ಮಲ್ಲಮ್ಮ ಉತ್ಸವದ ಬಗ್ಗೆ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಲೋಕಸಭಾ ಸದಸ್ಯ ಸುರೇಶ್ ಅಂಗಡಿ ಈ ಪ್ರಸ್ತಾವನೆ ಇಟ್ಟಿದ್ದು, ಎಲ್ಲರೂ ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ.

ಫೆಬ್ರವರಿ ೨೮ ಮತ್ತು ಮಾರ್ಚ್ ೧ ರಂದು ಮಲ್ಲಮ್ಮನ ಜನ್ಮ ಭೂಮಿ ಬೆಳವಾಡಿಯಲ್ಲಿ ಉತ್ಸವ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.

ಚರ್ಚಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾ ಕಾರ್ಯಕ್ರಮಗಳನ್ನು ಈ ಉತ್ಸವದ ಅಂಗವಾಗಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ,

ಬೈಲಹೊಂಗಲದ ಶಾಸಕ ವಿಶ್ವನಾಥ್ ಪಾಟಿಲ್ ಮತ್ತು ಜಿಲ್ಲಾಧಿಕಾರಿ ಎನ್ ಜಯರಾಂ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com