ಡಿಆರ್‍ಡಿಒ ನಿವೃತ್ತ ಅಧಿಕಾರಿಯ ಕೊಲೆ
ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ ಡಿಒ) ನಿವೃತ್ತ ಅಧಿಕಾರಿಯನ್ನು ಕೊಲೆಗೈದ ಸೆಕ್ಯುರಿಟಿ ಗಾರ್ಡ್‍ಗಳು ಪತ್ನಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಮಹದೇವಪುರ ಸಮೀಪದ ಪೈ ಬಡಾ ವಣೆಯಲ್ಲಿ 4 ಮಹಡಿಯ ಅಪಾರ್ಟ್ ಮೆಂಟ್ ನ 1ನೇ ಮಹಡಿಯಲ್ಲಿ ವಾಸವಿದ್ದ ಕೇರಳ ಮೂಲದ ರಾಜಪ್ಪ ಪಿಳ್ಳೈ(70) ಕೊಲೆಯಾದವರು. ದುಷ್ಕರ್ಮಿಗಳ ಹಲ್ಲೆ ಯಿಂದ ಪತ್ನಿ ಉಷಾ ಪಿಳ್ಳೈ ಮುಖಕ್ಕೆ ಪೆಟ್ಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಣ, ಚಿನ್ನಾಭರಣಕ್ಕಾಗಿ ಸೋಮವಾರ ತಡರಾತ್ರಿ ಕೃತ್ಯ ಎಸಗಿ ರು. 3 ಲಕ್ಷ ನಗದು ಹಾಗೂ 250 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದಾಗ ಆರೋಪಿ ಸುರೇಂದ್ರ ಕಡಕ್(22) ಬಂಧಿಸಿ ಕಳ್ಳತನವಾಗಿದ್ದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಮೂವರ ಬಂಧನಕ್ಕೆ ಬಲೆ ಬೀಸಲಾಗಿದೆ
ಎಂದು ಪೊಲೀಸರು ತಿಳಿಸಿದ್ದಾರೆ. ರಾಜಪ್ಪ ದಂಪತಿಯ ಇಬ್ಬರು ಮಕ್ಕಳು ಬೇರೆಡೆ ನೆಲೆಸಿದ್ದಾರೆ. ಫ್ಲಾಟ್‍ನಲ್ಲಿ ಇವರಿಬ್ಬರೇ ವಾಸವಿದ್ದರು. 20 ದಿನಗಳ ಹಿಂದಷ್ಟೇ ನೇಪಾಳ ಮೂಲದ ಅರುಣ್ ಎಂಬುವನನ್ನು ಅಪಾರ್ಟ್‍ಮೆಂಟ್ ಸೆಕ್ಯುರಿಟಿ ಗಾರ್ಡ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ಆತ ಮನೆಯಲ್ಲಿ ವೃದ್ಧಿ ದಂಪತಿ ಇರುವುದು ಅರಿತು ದರೋಡೆಗೆ ಆಯೋಜಿಸಿದ್ದ. ಅದಕ್ಕಾಗಿ ನೇಪಾಳದಿಂದ ಸ್ನೇಹಿತರಾದ ಸುರೇಂದ್ರ ಹಾಗೂ ಮತ್ತಿಬ್ಬರನ್ನು ಮೂರು ದಿನಗಳ ಹಿಂದೆಷ್ಟೇ ಬೆಂಗಳೂರಿಗೆ ಕರೆಸಿಕೊಂಡು ಅಂದ್ರಹಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಇರಿಸಿದ್ದ. ಯೋಜಿಸಿದಂತೆ ಸೋಮವಾರ ತಡರಾತ್ರಿ 12.45ಕ್ಕೆ ಅಪಾರ್ಟ್‍ಮೆಂಟ್ ಬಳಿ ಕರೆಸಿಕೊಂಡು ಕಾಂಪೌಂಡ್ ಒಳಗೆ ಕರೆದುಕೊಂಡು ಗೇಟ್‍ಗೆ ಬೀಗ ಹಾಕಿಕೊಂಡಿದ್ದ. ಆರೋಪಿಗಳನ್ನು ಮರೆಯಲ್ಲಿ ನಿಲ್ಲಿಸಿ ಅರುಣ್ ಬಾಗಿಲು ಬಡಿದಿದ್ದಾನೆ. ಕಿಟಕಿ ಮೂಲಕ ನೋಡಿದ ರಾಜಪ್ಪ, ತಮ್ಮ ಸೆಕ್ಯು ರಿಟಿ ಗಾರ್ಡ್ ಎಂದು ಅರಿತು ಬಾಗಿಲು ತೆರೆದಿದ್ದಾರೆ. ಆಗ ನಾಲ್ವರು ಏಕಾಏಕಿ ಮನೆಗೆ ನುಗ್ಗಿ ಒಳಗಿನಿಂದ ಬಾಗಿಲು
ಲಾಕ್ ಮಾಡಿಕೊಂಡಿದ್ದಾರೆ. ಗಾಬರಿ ಗೊಂಡು ರಾಜಪ್ಪ ಕೂಗಾಡಿದಾಗ ಅವರ ತಲೆ, ಕುತ್ತಿಗೆ ಮತ್ತು ಹೊಟ್ಟೆ ಭಾಗಕ್ಕೆ ಚಾಕು ವಿನಿಂದ ಚಾಕುವಿನಿಂದ ತಿವಿದಿದ್ದಾರೆ. ಪತಿಯ ಚೀರಾಟ ಕೇಳಿ ಕೋಣೆಯಿಂದ ಹೊರಬಂದ ಉಷಾ ಅವರಿಗೂ ಮೊಣಕೈ ನಿಂದ ಮುಖಕ್ಕೆ ಕಿವಿಗೆ ಗುದ್ದಿದ್ದಾರೆ. ಈ ವೇಳೆ ವೃದ್ದೆ ಸಹಾಯಕ್ಕಾಗಿ ಕೂಗಿಕೊಂಡುಬಾಗಿಲು ತೆಗೆದುಕೊಂಡು ಹೊರಗೆ ಓಡಿದ್ದಾರೆ. ಅಷ್ಟೊತ್ತಿಗೆ ಅಲ್ಮೆರಾದಲ್ಲಿದ್ದಆಭರಣ ಮತ್ತು ಹಣ ದೋಚಿ ಪರಾರಿಯಾಗುತ್ತಿದ್ದರು. ಕಿರುಚಾಟ ಕೇಳಿದ ಸ್ಥಳೀಯರು ಪೊ ಲೀಸರಿಗೆ ಮಾಹಿತಿ ನೀಡಿದ್ದಾರೆ. ಅದೇ ವೇಳೆಗೆ, ಕಾನ್‍ಸ್ಟೆಬಲ್ ಸಂಗಪ್ಪ ಕವಟಗಿ ಮತ್ತು ಹೋಂಗಾರ್ಡ್ ಪ್ರಕಾಶ್ ಸ್ಥಳಕ್ಕೆ ಬಂದಿದ್ದಾರೆ. ಆಗ ಗೇಟ್ ತೆರೆದು ಓಡಲು ಮುಂದಾಗಿದ್ದ ದುಷ್ಕರ್ಮಿಗಳನ್ನು ಬೆನ್ನಟ್ಟಿದ್ದಾಗ ಸುರೇಂದ್ರ ಸಿಕ್ಕಿ ಬಿದ್ದಿದ್ದು, ಉಳಿದವರು ಪರಾರಿಯಾಗಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ