ಸಂಚಾರ ಪೊಲೀಸರಲ್ಲಿ ವಿಟಮಿನ್ ಡಿ ಕೊರತೆ
ಬೆಂಗಳೂರು: ನಗರ ಟ್ರ್ಯಾಫಿಕ್ ಪೊಲೀಸರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚು ಕಾಡುತ್ತಿದೆ. ನೂರಕ್ಕೆ ಶೇ.75ರಷ್ಟು ಮಂದಿಗೆ ವಿಟಮಿನ್ ಡಿ ಕೊರತೆ ಇದೆ.
ನಗರದ ಹೀಲ್ ಫೌಂಡೇಷನ್ ಹಾಗೂ ಗ್ಲೆನ್‍ಮಾರ್ಕ್ ಸಹಯೋಗದೊಂದಿಗೆ ಬಾನ್ ಡಿ ಲೈಟ್ ಅಭಿಯಾನದ ಭಾಗವಾಗಿ ಡಿ3 ಎಂಬ ಶಿಬಿರ ನಡೆಸಿ ಬೆಂಗಳೂರು ದಕ್ಷಿಣ ವಿಭಾಗದ 240 ಪೊಲೀಸ್ ಸಿಬ್ಬಂದಿಯನ್ನು ತಪಾಸಣೆಗೊಳಪಡಿಸಿದಾಗ ಶೇ.50ರಷ್ಟು ಅಂದರೆ ಸುಮಾರು 187 ಮಂದಿಯಲ್ಲಿ ವಿಟಮಿನ್ `ಡಿ' ಕೊರತೆ ಇರುವುದು ಬೆಳಕಿಗೆ ಬಂದಿದೆ.
ಇತ್ತೀಚಿನ ಸಂಶೋಧನೆಗಳ ಪ್ರಕಾರ ವಿಟಮಿನ್ `ಡಿ' ಕೊರತೆ ಹೆಚ್ಚಿನ ಜನರಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ಆಘಾತಕಾರಿ ಅಂಶವೇ ಸರಿ. ಆಹಾರದ ಜತೆಗೆ ವಿಟಮಿನ್ ಡಿ ಪೂರಕಗಳು ಅತ್ಯಗತ್ಯ. ಮಾಂಸಾಹಾರಿಗಳು ಮೀನು, ಸಸ್ಯಹಾರಿಗಳು ಸೊಪ್ಪು ಹಾಗೂ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. ವಿಟಮಿನ್‍ನ ಕೊರತೆಯಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್ ಸಹ ಬರುವ ಸಂಭವವಿದೆ ಎಂದು ತಜ್ಞರು ತಿಳಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಸಿರುವ ಸಂಚಾರ ಮತ್ತು ಭದ್ರತೆ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ದಯಾನಂದ್, ಸಂಚಾರ ಪೊಲೀಸರಲ್ಲಿ ವಿಟಮಿನ್ `ಡಿ' ಕೊರತೆ ಇರುವುದು ಈಗ ಬೆಳಕಿಗೆ ಬಂದಿದೆ ಈ ಕೊರತೆ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ