
ಬೆಂಗಳೂರು: ಅಶೋಕ ನಗರ ಸಮೀಪದ ಆಸ್ಟಿನ್ ಟೌನ್ ನಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಹರಿತಾ (14) ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಿಇಎಂಎಲ್ ಉದ್ಯೋಗಿ ಗಣೇಶ್ ಹಾಗೂ ಪರಮೇಶ್ವರಿ ದಂಪತಿ ಪುತ್ರಿಯಾಗಿರುವ ಹರಿತಾ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಪಾಲಕರೊಂದಿಗೆ ಊಟ ಮಾಡಿ ಮೊಬೈಲ್ ಫೋನ್ ತೆಗೆದುಕೊಂಡು ತನ್ನ ಕೊಠಡಿಗೆ ತೆರಳಿದ್ದಳು. ಬೆಳಗ್ಗೆ 7 ಗಂಟೆಯಾದರೂ ಎಚ್ಚರಗೊಳ್ಳದ ಕಾರಣ ಪಾಲಕರು ಬಾಗಿಲು ಬಡಿದು ಎಬ್ಬಿಸಲು ಯತ್ನಿಸಿ ದ್ದಾರೆ.
ಎಷ್ಟೊತ್ತಾದರೂ ಬಾಗಿಲು ತೆರೆಯದ ಕಾರಣ ನೆರೆ ಹೊರೆಯವರ ಸಹಾಯದಿಂದ ಬಾಗಿಲು ಮುರಿದು ನೋಡಿದಾಗ ಹರಿತಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾ ಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Advertisement