
ಬೆಂಗಳೂರು: `ಏರೋ ಇಂಡಿಯಾ-2015'ನ್ನು ಉದ್ಘಾಟಿಸಿಲು ಪ್ರಧಾನಮಂತ್ರಿ ನರೇಂದ್ರ ಮೋದಿ ಫೆ.18ರಂದು ನಗರದ ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸ ಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಯಲಹಂಕ ವಾಯುನೆಲೆಗೆ ತೆರಳಲಿದ್ದಾರೆ. ಹೀಗಾಗಿ ಫೆ.18ರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಈ ಮಾರ್ಗದಲ್ಲಿ ಸಾರ್ವ ಜನಿಕ ಸಂಚಾರದಲ್ಲಿ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಲು ಸಂಚಾರ ಪೊಲೀಸರು ಕೋರಿದ್ದಾರೆ.
ಮಾರ್ಗ: ಯಲಹಂಕ ವಾಯುನೆಲೆಯಿಂದ ಬಳ್ಳಾರಿ ರಸ್ತೆ ಮೂಲಕ ನಗರದ ಕಡೆಗೆ, ಬಿಎಸ್ಎಫ್, ಬಾಗಲೂರು ಕ್ರಾಸ್, ವೆಂಕಟಾಲ, ಕೋಗಿಲು ಕ್ರಾಸ್, ವಿದ್ಯಾಶಿಲ್ಪ ಅಪ್ ರ್ಯಾಂಪ್, ಕೆಂಪಾಪುರ ಕ್ರಾಸ್, ಹೆಬ್ಬಾಳ ಮೇಲು ಸೇತುವೆ, ಸಿಬಿಐ, ಸಂಜಯನಗರ ಕ್ರಾಸ್, ಮೇಕ್ರಿ ವೃತ್ತ ಅಪ್ ರ್ಯಾಂಪ್, ಸಿ.ವಿ ರಾಮನ್ ರಸ್ತೆ, ಸದಾ ಶಿವನಗರ ಪೊಲೀಸ್ ಠಾಣೆ ಜಂಕ್ಷನ್, ರಮಣ ಮಹರ್ಷಿ ರಸ್ತೆ, ಬಸವೇಶ್ವರ ವೃತ್ತ, ಸಿಐಡಿ ಜಂಕ್ಷನ್, ಮಹಾರಾಣಿ ಅಪ್ ರ್ಯಾಂಪ್, ಕೆಆರ್ ವೃತ್ತ, ಹೊಸೂರು ರಸ್ತೆ, ಕೋರಮಂಗಲ ಇನ್ನರ್ ರಿಂಗ್ ರಸ್ತೆ, ಎಚ್‍ಎಎಲ್ ವಿಮಾನ ನಿಲ್ದಾಣ ರಸ್ತೆ.
Advertisement