ಹಾಬಿ ಫೆಸ್ಟಿವಲ್‍ನಲ್ಲಿ ಮಕ್ಕಳ ವಿಜ್ಞಾನ ಪ್ರತಿಭೆ

ಇಲ್ಲಿ ಯಂತ್ರಗಳು ನಾಯಿ ಯಂತೆ ಚಲಿಸುತ್ತವೆ, ಕಸ ಗುಡಿಸುತ್ತವೆ, ಕಳ್ಳತನವಾಗದಂತೆ ಸೈರನ್ ಕೂಗುತ್ತವೆ, ಹೇಳಿದಂತೆ ಕೇಳುತ್ತ ಚಲಿಸುತ್ತವೆ...
ರೋಬೋಟ್‍ (ಸಾಂದರ್ಭಿಕ ಚಿತ್ರ)
ರೋಬೋಟ್‍ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಇಲ್ಲಿ ಯಂತ್ರಗಳು ನಾಯಿ ಯಂತೆ ಚಲಿಸುತ್ತವೆ, ಕಸ ಗುಡಿಸುತ್ತವೆ, ಕಳ್ಳತನವಾಗದಂತೆ ಸೈರನ್ ಕೂಗುತ್ತವೆ, ಹೇಳಿದಂತೆ ಕೇಳುತ್ತ ಚಲಿಸುತ್ತವೆ... ಆರ್ಮಿ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಹಾಬಿಮಾಸ್ಟರ್ ಸಂಸ್ಥೆ ಏರ್ಪಡಿಸಿದ್ದ `ಹಾಬಿ ಫೆಸ್ಟಿವಲ್'ನಲ್ಲಿ ರಿಮೋಟ್ ನಿಯಂತ್ರಿತ ರೋಬೋಟ್‍ಗಳನ್ನು ಹಲವು ಶಾಲೆಯ ಮಕ್ಕಳು ಪ್ರದರ್ಶಿಸಿದರು.
ಮನೆಯಲ್ಲೇ ಲಭ್ಯವಾಗುವ ಆಟದ ಪರಿಕರ ಹಾಗೂ ಸಣ್ಣ ಪ್ರಮಾಣದ ಯಂತ್ರಗಳನ್ನು ಬಳಸಿ ಈ ರೋಬೋಗಳನ್ನು ನಿರ್ಮಿಸಲಾಗಿದೆ. ಕಾವೇರಿ ಶಾಲೆಯ ವಿದ್ಯಾರ್ಥಿನಿ ಗ್ರೀಷ್ಮ ರೂಪಿಸಿದ್ದ `ಮ್ಯಾಡ್ ಡಾಗ್' ನಾಯಿಯಂತೆ ಚಲಿಸುತ್ತದೆ. ಮಕ್ಕಳ ಆಟಿಕೆ ಕಾರನ್ನು ಬಳಸಿ ಇದನ್ನು ರೂಪಿಸಲಾಗಿದೆ. ರಿಮೋಟ್ ಮೂಲಕ ಕಾರ್ಯ ನಿರ್ವಹಿಸುವ ಈ ಯಂತ್ರಕ್ಕೆ ನಾಲ್ಕು ಕಡೆ ಸಣ್ಣ  ಫ್ಯಾ ನ್‍ನ ರೆಕ್ಕೆಗಳನ್ನು ಅಳವಡಿಸಲಾಗಿದೆ. ರೆಕ್ಕೆ ತಿರುಗಿದಂತೆ ಮುಂದಕ್ಕೆ ಚಲಿಸುವ ಮ್ಯಾಡ್ ಡಾಗ್ ನಾಯಿ ಚಲಿಸುವಂತೆ ಕಾಣುತ್ತದೆ. ಶಿವಾನಿ ಹಾಗೂ ಶಿವಶಕ್ತಿ ರೂಪಿಸಿರುವ ಟಿವಿ ರಿಮೋಟ್ ನಿಯಂತ್ರಿತ ವಾಹನ ಲೇಸರ್ ಕಿರಣ ಮೂಲಕ ಕಾರ್ಯನಿರ್ವಹಿಸುತ್ತದೆ. ಯಾವುದೇ ಟಿವಿ ರಿಮೋಟ್ ಬಳಸಿ ಈ ವಾಹನ ನಿರ್ಮಿಸಬಹುದು. ರಿಮೋಟ್‍ನಿಂದ ಹೊರಹೊಮ್ಮುವ ವಿಕಿರಣ ವಾಹನದ ಸೆನ್ಸಾರ್‍ಗೆ ತಗುಲಿ ಚಲಿಸುವಂತೆ ನಿರ್ದೇಶನ ನೀಡುತ್ತದೆ. ರಿಮೋಟ್‍ನಲ್ಲಿ ಚಾನಲ್ ಬದಲಿಸುವ ಬಟನ್ ಹಾಗೂ ಧ್ವನಿ ನಿಯಂತ್ರಿಸುವ ಬಟನ್‍ಗಳನ್ನು ಚಲನೆಯ ನಿರ್ದೇಶನಗಳಿಗೆ ಬಳಸಲಾಗುತ್ತದೆ. ಎರಡು ರೀತಿಯ ಕೆಲಸ: ವಿದ್ಯಾರ್ಥಿನಿ ಪೂಜಾ ನಿರ್ಮಿಸಿದ ರೋಬೋಟ್ ಎರಡು ರೀತಿಯ ಕೆಲಸಗಳನ್ನು ಮಾಡುತ್ತದೆ. ವಾಲ್ -ಇ-ರೋಬೋಟ್ ಹಾಗೂ ಲೈನ್ ಪಾಲೋವರ್ ರೋಬೋಟ್ ಆಗಿ ಇದು ಕಾರ್ಯನಿರ್ವಹಿಸುತ್ತದೆ. ಎರಡು ಚಕ್ರಗಳ ವಾಹನದಂತೆ ಕಾಣುವ ಈ ರೋಬೋಟ್ ಒಂದು ಕಪ್ಪುಪಟ್ಟಿಯಲ್ಲಿಯೇ  ಚಲಿಸುತ್ತದೆ. ಬಿಳಿ ಕಾಗದದಲ್ಲಿ ಕಪ್ಪು ಪಟ್ಟಿಯನ್ನು ಚೌಕಾಕಾರವಾಗಿ ಅಂಟಿಸಿದ್ದು, ತಿರುವು ಬಂದರೂ ಈ ವಾಹನ ಪಟ್ಟಿಯ ಮೇಲೆಯೇ  ಚಲಿಸು ತ್ತದೆ. ಈ ವಾಹನ ಮಾಡುವ ಇನ್ನೊಂದು ಕೆಲಸವೆಂದರೆ ಹೋದ ಕಡೆಯಲ್ಲಿ ಗುಡಿಸುವುದು. ಇದಕ್ಕೆ ಅಳವಡಿಸಿದ ಬ್ರಷ್ ಚಲಿಸಿದ ಮಾರ್ಗವನ್ನು ಶುಚಿಗೊಳಿಸುತ್ತದೆ. ವಾಹನದ ತಳಕ್ಕೆ ಅಳವಡಿಸಿದ ಎಲ್‍ಇಡಿ ಫೋ ಟೊಟ್ಟ್ರಾನ್ಸಿಸ್ಟರ್ ಬಣ್ಣಗಳನ್ನು ಪತ್ತೆಹಚ್ಚಿ ಒಂದೇ ಹಾದಿಯಲ್ಲಿ ಸಾಗುವಂತೆ ಸೂಚನೆ ನೀಡುತ್ತದೆ. ನಿರ್ದಿಷ್ಟ ಸ್ಥಳದದಲ್ಲಿ ಕಳ್ಳತನವಾದರೆ ಸೈರನ್ ಕೂಗುವ ಯಂತ್ರ, ಬ್ಯಾಟರಿಯ ವಿದ್ಯುತ್ ಬಲ ಹಾಗೂ ಆಯಸ್ಕಾಂತದ ಗುಣ ದಿಂದ ತಿರುಗುವ ತಾಮ್ರದ ತಂತಿ, ಬ್ಯಾಟರಿಯಿಂದ ಚಲಿಸುವ ದೋಣಿ ಸೇರಿದಂತೆ ಹಲವು ವಿಜ್ಞಾನ ಮಾದರಿಗಳು ಗಮನಸೆಳೆದವು. ಕೆಎಲ್‍ಇ ಶಾಲೆಯ ಸುಪ್ರೀತ್ ರಬ್ಬರ್ ಪವರ್ಡ್ ವಿಮಾನಗಳನ್ನು ಪ್ರದರ್ಶಿಸಿದರು.ಹಗುರವಾದ ಮರದ ತುಂಡುಗಳಿಂದ ನಿರ್ಮಿಸಿದ ವಿಮಾನ ಮುಂಭಾಗಕ್ಕೆ ರಬ್ಬರ್ ಸಹಿತ ಪ್ರೋಫ್ಫೆಲ್ಲರ್  ಕಟ್ಟಲಾಗಿದೆ. ಇದನ್ನು 20 ಬಾರಿ ತಿರುಗಿಸಿ ಬಿಟ್ಟರೆ ವಿಮಾನ 100 ಅಡಿಎತ್ತರದವರೆಗೂ ಹಾರುತ್ತದೆ. ಪರೀಕ್ಷಿತ್ ಹಾಗೂ ಜೂಜರ್ ನಿರ್ಮಿಸಿದ ಇದೇ ಮಾದರಿಯ ವಿಮಾನಗಳು 40 ಅಡಿ ಎತ್ತರಕ್ಕೆ ಹಾರುತ್ತವೆ.
ಕಿಯೋ ನಿಕ್ಸ್ ಮುಖ್ಯಸ್ಥ ಯು.ಬಿ. ವೆಂಕಟೇಶ್, ಐಎಎಸ್ ಅಧಿಕಾರಿ ತನುಶ್ರೀ ದೇಬ್ ಶರ್ಮಾ , ಹಾಬಿಮಾಸ್ಟರ್ ಸಿಇಓ ರಾಜೀವ್ ಕೋಯಲ್ ಹಾಜರಿದ್ದರು.



ಶಾಲೆಗಳಿಗೆ ಬಹುಮಾನ

ರೋಬೋಟಿಕ್ ಯಂತ್ರಗಳನ್ನು ರೂಪಿಸುವ ಸ್ಪರ್ಧೆಯಲ್ಲಿ ಕಾವೇರಿ ಸ್ಕೂಲ್ ಪ್ರಥಮ, ಎಚ್‍ಎಎಲ್ ಸ್ಕೂಲ್ ದ್ವಿತೀಯ ಹಾಗೂ ಮಿತ್ರಾ ಅಕಾಡೆಮಿ ತೃತೀಯ ಬಹುಮಾನ
ಪಡೆಯಿತು. ಏರೋಮಾಡೆಲಿಂಗ್ ಸ್ಪರ್ಧೆಯಲ್ಲಿ ಸ್ಪೂರ್ತಿ ಗ್ಲೋಬಲ್ ಹಾಗೂ ಎಚ್ ಎಎಲ್ ಸ್ಕೂಲ್ ಬಹುಮಾ ನ ಪಡೆಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com