ನಿತ್ಯಾ ಪ್ರಕರಣ: ಆಕ್ಷೇಪಣೆ ಸಲ್ಲಿಕೆಗೆ ಮಾ. 2ಕ್ಕೆ ಅವಕಾಶ

ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ನಿತ್ಯಾನಂದ ಪರ ವಕೀಲರ ವಾದಕ್ಕೆ ಸಿಐಡಿ ಪರ ವಕೀಲರ ಆಕ್ಷೇಪಣೆ...
ನಿತ್ಯಾನಂದ
ನಿತ್ಯಾನಂದ

ರಾಮನಗರ: ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ನಿತ್ಯಾನಂದ ಪರ ವಕೀಲರ ವಾದಕ್ಕೆ ಸಿಐಡಿ ಪರ ವಕೀಲರ ಆಕ್ಷೇಪಣೆ ಸಲ್ಲಿಕೆ ಅವಕಾಶವನ್ನು 1ನೇ ಹೆಚ್ಚುವರಿಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಾ. 2ಕ್ಕೆ ಮುಂದೂಡಿದೆ. ದೋಷಾರೋಪಣಾ ಪಟ್ಟಿಯಲ್ಲಿ 48 ಸಾಕ್ಷ್ಯಗಳನ್ನು ಕೈ ಬಿಟ್ಟಿರುವುದಕ್ಕೆ ಸಂಬಂಧಿಸಿದಂತೆ ಇತರೆ ನ್ಯಾಯಾಲಗಳ ತೀರ್ಪು ಆಧರಿಸಿನಿತ್ಯಾನಂದ ಪರ ವಕೀಲರು ವಾದ ಮಂಡಿಸಿದ್ದರು. ಅದಕ್ಕೆ ಆಕ್ಷೇಪಣೆ  ಸಲ್ಲಿಸಲು ಸಿಐಡಿ ಪರ ವಕೀಲ ವಡವಡಗಿ ಸೋಮ ವಾರ ಫೆ(16)ಕ್ಕೆ ಅವಕಾಶ ಪಡೆದಿದ್ದರು. ಬೆಳಗ್ಗೆ 11 ಕ್ಕೆ ನ್ಯಾಯಾಧೀಶರಾದ ಮಂಜುಳಾ ವಿಚಾರಣೆ ಕೈಗೆತ್ತಿಕೊಂಡಾಗ ವಡವಡಗಿ ಹಾಜರಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದರು. ಮಧ್ಯಾಹ್ನದ ಬಳಿಕ ನಡೆಯುವ ಕಲಾಪದಲ್ಲಿ ತಾವು ಪಾಲ್ಗೊಳ್ಳಲುಸಾಧ್ಯವಾಗುವುದಿಲ್ಲ ಎಂದು ನಿತ್ಯಾನಂದ ಪರ ವಕೀಲ ಮುದ್ದುಮಲ್ಲಯ್ಯ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com