ರು70 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು

ಭೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿರುವ ಜಿಲ್ಲಾಡಳಿತ ಶನಿವಾರ ರು.70 ಕೋಟಿ ಮೌಲ್ಯದ 31.10 ಎಕರೆ ಭೂ ಒತ್ತುವರಿ ತೆರವು ಮಾಡಿದೆ...
ರು70 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು

ಬೆಂಗಳೂರು: ಭೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಿರುವ ಜಿಲ್ಲಾಡಳಿತ ಶನಿವಾರ ರು.70 ಕೋಟಿ ಮೌಲ್ಯದ 31.10 ಎಕರೆ ಭೂ ಒತ್ತುವರಿ ತೆರವು ಮಾಡಿದೆ.

ಉತ್ತರ ತಾಲೂಕು, ದಾಸನಪುರ ಹೋಬಳಿ ಬೈರಂಡಹಳ್ಳಿ ಗ್ರಾಮದ ಸರ್ವೆ ನಂ.15 ರಲ್ಲಿ 50 ಲಕ್ಷ ಮೌಲ್ಯದ 22 ಗುಂಟೆಯ ಒತ್ತುವರಿಯನ್ನು ತಹಸೀಲ್ದಾರ್ ಬಾಳಪ್ಪ ಹಂದಿಗುಂದ ನೇತೃತ್ವದ ತಂಡ ತೆರವು ಮಾಡಿತು. ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿ ಕುರುಬರಹಳ್ಳಿ ಗ್ರಾಮದ ಸರ್ವೆ ನಂ.116ರಲ್ಲಿ ಸರ್ಕಾರಿ ಗೋಮಾಳ ಜಾಗ 2007 ರಲ್ಲಿ ಬಿಎಂಟಿಸಿಗೆ ಮಂಜೂರಾಗಿದ್ದು, ಒತ್ತುವರಿ ತೆರವುಗೊಳಿಸಿ ಬಿಎಂಟಿಸಿಗೆ ನೀಡಲಾಯಿತು.

ಕೆಂಗೇರಿ ಹೋಬಳಿ ಚೂಡೇನಪುರ ಗ್ರಾಮದ ಸರ್ವೆ ನಂ.13 ರಲ್ಲಿ 1.6 ಎಕರೆ ಒತ್ತುವರಿಯನ್ನು ತಹಶೀಲ್ದಾರ್ ಬಿ.ಆರ್ .ದಯಾನಂದ್ ತಂಡ ತೆರವುಗೊಳಿಸಿತು. ಈ ಎರಡೂ ಜಮೀನು ಒಟ್ಟು ರು. 14.50 ಕೋಟಿ ಮೌಲ್ಯ ಹೊಂದಿದೆ. ಪೂರ್ವ ತಾಲೂಕು, ವರ್ತೂರು ಹೋಬಳಿ, ಗುಂಜೂರು ಗ್ರಾಮದ ಸರ್ವೆ ನಂ.281 ರಲ್ಲಿ 10 ಎಕರೆಯನ್ನು ಯಲ್ಲಪ್ಪ, ನರಸಿಂಗಯ್ಯ, ಉಜಿನಪ್ಪ, ಮುನಿಯಪ್ಪ ಹಾಗೂ ಎಂಬುವರು ಕೃಷಿಗಾಗಿ ಒತ್ತುವರಿ ಮಾಡಿಕೊಂಡಿದ್ದರು. ಅಂದಾಜು ರು.30 ಕೋಟಿ ಮೌಲ್ಯದ ಈ ಜಮೀನು ಒತ್ತುವರಿಯನ್ನು ತಹಶೀಲ್ದಾರ್ ಡಾ ಹರೀಶ್ ನಾಯ್ಕ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಆನೇಕಲ್ ತಾಲೂಕು, ಸರ್ಜಾಪುರ ಹೋಬಳಿ, ರಾಮನಾಯಕನಹಳ್ಳಿ ಗ್ರಾಮದ ಸರ್ವೆ ನಂ.29 ರಲ್ಲಿ 2 ಎಕರೆ, ಹುಸ್ಕೂರು ಗ್ರಾಮದ ಸರ್ವೆ ನಂಬರ್ ಕಾಣದ ಹದ್ದಿಗೆ ಹಳ್ಳದಲ್ಲಿ 8 ಎಕರೆ, ಜಿಗಣಿ ಹೋಬಳಿ ಬನ್ನೇರುಘಟ್ಟ ಗ್ರಾಮದ ಸರ್ವೆ ನಂ.54 ರಲ್ಲಿ 4.22 ಜಾಗದ ಒತ್ತುವರಿಯನ್ನು ತಹಸೀಲ್ದಾರ್ ಅನಿಲ್ ಕುಮಾರ್ ನೇತೃತ್ವದ ತಂಡ ತೆರವುಗೊಳಿಸಿತು. ಈ ಜಾಗ ರು.25 ಕೋಟಿ ಮೌಲ್ಯ ಹೊಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com